ನೀರು ನಮ್ಮ ಜೀವನದ ಅವಿಭಾಜ್ಯ ಅಂಗ. ಕುಡಿಯಲು, ದಿನ ಬಳಕೆಗೆ, ಇನ್ನಿತರ ಚಟುವಟಿಕೆಗಳಿಗೆ ಮಾತ್ರ ನೀರು ಅವಶ್ಯವಾಗಿರದೆ ನಮ್ಮ ಆರೋಗ್ಯದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ನಮ್ಮ ದೇಹದಲ್ಲಿ ಶೇಕಡಾ 60ರಿಂದ 70 ಭಾಗದಷ್ಟು ನೀರಿನ ಅಂಶ ಸೇರ್ಪಡೆಯಾಗಿರುತ್ತದೆ. ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇದ್ದರೆ ಮೂಳೆ, ಶ್ವಾಸಕೋಶ ಮತ್ತು ಮೆದುಳಿನಲ್ಲಿ ಸಹ ನೀರಿರುತ್ತದೆ. ದೇಹದಲ್ಲಿ ಉಷ್ಣತೆಯನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳಲು, ಪೋಷಕಾಂಶಗಳು ದೇಹದ ಎಲ್ಲಾ ಅಂಗಗಳಿಗೂ, ಜೀವಕಣಗಳಿಗೂ ತಲುಪಲು ನೀರು ಸಹಾಯ ಮಾಡುವುದಲ್ಲದೆ, ಆಮ್ಲಜನಕವನ್ನು ಕೋಶಗಳಿಗೆ ಮುಟ್ಟಿಸಿ ದೇಹದಲ್ಲಿರುವ ಅನಪೇಕ್ಷಿತ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ನಮ್ಮ ದೇಹದಿಂದ ಮೂತ್ರ, ಬೆವರಿನ ಮೂಲಕ ಹೊರಹೋಗುತ್ತದೆ.

ಎಷ್ಟು ನೀರು ಅತ್ಯಗತ್ಯ?
ನಮ್ಮ ದೇಹದ ಪ್ರತಿ ಕಣಕ್ಕೂ ನೀರಿನ ಅಂಶ ತಲುಪಲು ನಾವು ಕಡ್ಡಾಯವಾಗಿ ನೀರು ಕುಡಿಯಲೇ ಬೇಕು. ಒಬ್ಬ ಮನುಷ್ಯನಿಗೆ ದಿನದಲ್ಲಿ ಕಡಿಮೆಯೆಂದರೆ ಎರಡು ಲೀಟರ್ ನೀರು ಬೇಕು. ನೀರು ಮಾನವನ ತೂಕಕ್ಕೆ ಅನುಗುಣವಾಗಿರುತ್ತದೆ. ಮನುಷ್ಯನ ತೂಕದ ಅರ್ಧದಷ್ಟು ನೀರು ದೇಹದಲ್ಲಿ ಇರಬೇಕೆನ್ನುತ್ತದೆ ವೈದ್ಯಕೀಯ ಅಧ್ಯಯನ. ಅಷ್ಟು ನೀರನ್ನು ಒಮ್ಮೆಗೇ ಕುಡಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗಂಟೆಗೊಮ್ಮೆ ನೀರು ಕುಡಿಯುತ್ತಾ ಇರಬೇಕಾಗುತ್ತದೆ.

ಗರ್ಭಿಣಿಯರಿಗಂತೂ ನೀರು ಕುಡಿದಷ್ಟೂ ಉತ್ತಮ. ಮನುಷ್ಯನಿಗೆ ಶೇಕಡಾ 20ರಷ್ಟು ನೀರು ತಿನ್ನುವ ಆಹಾರದಿಂದ ಸಿಗುತ್ತದೆ. ಬಾಯಾರಿೆಯಾಗುವುದು ನೀರಿನ ಅಗತ್ಯದ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಅನೇಕ ಕಾಯಿಲೆಗಳು ಕಂಡುಬರುತ್ತವೆ. ತಲೆನೋವು, ಮಂಡಿನೋವು, ಬೆನ್ನುನೋವು, ಮೈ ಕೈ ನೋವು, ಕರುಳು ಬೇನೆ, ಉರಿಮೂತ್ರ ಇತ್ಯಾದಿ. ಕುಡಿದ ನೀರು ಕಲ್ಮಷವಾದಾಗ ಕಾಮಾಲೆ, ಹಳದಿ ಕಾಯಿಲೆ ರೋಗಗಳು ಕಾಣಿಸಿಕೊಳ್ಳುತ್ತವೆ. ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು ನೀರಿನ ಅಗತ್ಯದ ಲಕ್ಷಣ.

ಯಾವಾಗ ಕುಡಿಯಬಾರದು?
ನೀರು ಕುಡಿಯಲು ಸರಿಯಾದ ಕ್ರಮ ಇರುತ್ತದೆ. ನೀರು ಕುಡಿದ ಕೂಡಲೇ ಆಹಾರ ತೆಗೆದುಕೊಳ್ಳುವುದು ಅಥವಾ ಊಟವಾದ ತಕ್ಷಣ ನೀರು ಕುಡಿಯುವುದು ಸರಿಯಲ್ಲ. ಊಟದ ಸ್ವಲ್ಪ ಹೊತ್ತು ಮೊದಲು ಹಾಗೂ ಊಟವಾದ ಕೆಲ ಸಮಯದ ನಂತರ ನೀರು ಕುಡಿಯುವುದು ಒಳ್ಳೆಯದು. ಆಹಾರ ತೆಗೆದುಕೊಳ್ಳುವಾಗ ನೀರು ಕುಡಿದರೆ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲಗಳ ಶಕ್ತಿ ಕಡಿವೆುಯಾಗಿ ಆಹಾರ ಜೀರ್ಣವಾಗಲು ಕಷ್ಟವಾಗುತ್ತದೆ.

ಹೊರಗಡೆ ಹೋದ ಸಂದರ್ಭದಲ್ಲಿ ಬಾಯಾರಿಕೆಯಾದಾಗ ಸಾಮಾನ್ಯವಾಗಿ ಸಿಹಿ ತಂಪು ಪಾನೀಯಗಳನ್ನು ಕುಡಿಯುತ್ತೇವೆ. ಆದರೆ ಇದು ಹಾನಿಕಾರಕ. ಇದು ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ ಹೊರತು ಪೌಷ್ಟಿಕಾಂಶವನ್ನಲ್ಲ. `ಬಾಯಾರಿದಾಗ ನೀರು ಬಿಟ್ಟರೆ ಎಳನೀರು ಉತ್ತಮ~ ಎನ್ನುತ್ತಾರೆ ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣ.

`ಸಾಮಾನ್ಯವಾಗಿ ದಿನಕ್ಕೆ 8 ಲೋಟ ನೀರು ಕುಡಿದರೆ ಸಾಕು ಎಂದು ಅಂದುಕೊಳ್ಳುತ್ತೇವೆ. ಆದರೆ ದಿನಕ್ಕೆ 10- 12 ಲೋಟ ನೀರು ಅತ್ಯವಶ್ಯ. ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು ದಿನಕ್ಕೆ 5 ಲೀಟರ್ ನೀರಿನ ಅಗತ್ಯವಿದೆ~ ಎನ್ನುತ್ತಾರೆ ಅವರು. ಬಾಯಾರಿದಾಗ ಎಲ್ಲ ದ್ರವ ಪದಾರ್ಥಗಳಿಗಿಂತಲೂ ಮಾನವನ ದೇಹಕ್ಕೆ ನೀರು ಉತ್ತಮ. ನಾವು ಬಹಳ ಬಳಲಿದಾಗ ನೀರಿನ ಜೊತೆ ಒಂದು ತುಂಡು ಬೆಲ್ಲವನ್ನೂ ಬಾಯಿಗೆ ಹಾಕಿ ಜಗಿದರೆ ದೇಹ ಉಲ್ಲಸಿತವಾಗುತ್ತದೆ.

ಕ್ರೀಡಾಪಟುಗಳು ಆಯಾಸಗೊಂಡಾಗ ಖನಿಜಾಂಶಯುಕ್ತ ನೀರನ್ನು ಕುಡಿಯುತ್ತಾರೆ, ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಣ್ಣು ಮತ್ತು ತರಕಾರಿ ಜ್ಯೂಸ್ಗಳಲ್ಲಿ ವಿಟಮಿನ್, ಖನಿಜಾಂಶಗಳಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಮತ್ತು ಚಹಾ ಸೇವನೆ ಹಾನಿಕರ.

ನೀರನ್ನು ಬಳಸುವ ವಿಧಾನ
ಬೆಳಿಗ್ಗೆ ಎದ್ದ ತಕ್ಷಣ ಬ್ರಷ್ ಮಾಡಿ ಖಾಲಿ ಹೊಟ್ಟೆಗೆ ನೀರು ಕುಡಿದರೆ ಒಳ್ಳೆಯದು. ಹೊಟ್ಟೆ ಖಾಲಿ ಇರುವುದರಿಂದ ನೀರು ಕರುಳು ಸೇರಿ ಮಲ ವಿಸರ್ಜನೆಗೆ ನೆರವಾಗುತ್ತದೆ. ಗಂಟೆಗೊಮ್ಮೆ ಎರಡು ಲೋಟ ನೀರನ್ನು ಕುಡಿಯಬೇಕು. ತಿಂದ ಆಹಾರ ಚೆನ್ನಾಗಿ ಪಚನವಾಗುತ್ತದೆ. ಹೊರಗಡೆ ಎಲ್ಲಿಗೆ ಹೋಗುವುದಿದ್ದರೂ ಕೈಯಲ್ಲಿ ಒಂದು ನೀರಿನ ಬಾಟಲಿ ಹಿಡಿದುಕೊಂಡು ಹೋಗಬೇಕು. ಕಂಡಲ್ಲಿ ಸಿಕ್ಕಿದ ನೀರು ಕುಡಿಯುವುದು ಸುರಕ್ಷೆ ದೃಷ್ಟಿಯಿಂದ ಸರಿಯಲ್ಲ. ಬೇಸಿಗೆ ಕಾಲದಲ್ಲಂತೂ ಕುಡಿಯುವ ನೀರಿನ ಬಳಕೆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಕುದಿಸಿ ಆರಿಸಿದ ನೀರು ಉತ್ತಮ.

ವಾರಪೂರ್ತಿ ಆಹಾರ ಸೇವಿಸಿ ಒಂದು ದಿನ ಉಪವಾಸ ಮಾಡುವವರಿಗೆ ನೀರು ಶಕ್ತಿಮದ್ದು ಇದ್ದಂತೆ. ಆಗ ಪದೇ ಪದೇ ನೀರನ್ನು ಕುಡಿಯುತ್ತಾ ಬೇರೆ ಯಾವುದೇ ಆಹಾರ ಸೇವಿಸದಿದ್ದರೆ ಹೊಟ್ಟೆ ಸ್ವಚ್ಛವಾಗಿ ದೇಹವನ್ನು ಶುಭ್ರಗೊಳಿಸುತ್ತದೆ. ಹೀಗೆ ಸ್ವಚ್ಛ, ಶುದ್ಧ ನೀರು ಸೇವನೆ ನಮ್ಮ ಆರೋಗ್ಯದ ಕೀಲಿ ಕೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.