ಮನುಕುಲಕ್ಕೆ ಸೃಷ್ಟಿಯ ಕೊಡುಗೆಗಳಲ್ಲಿ ನೀರು ಅತ್ಯಂತ ಅಮೂಲ್ಯ. ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ನೀರು ಆಧಾರ. ಅಲ್ಲದೆ ಸಸ್ಯಗಳ ಬೆಳವಣಿಗೆಗೆ ಅವಶ್ಯಕ ಮಾಧ್ಯಮ.

ಉತ್ತಮ ಬೆಳೆಗೆ ಫಲವತ್ತಾದ ಮಣ್ಣು ಮತ್ತು ಯೋಗ್ಯವಾದ ನೀರು ಅತ್ಯವಶ್ಯಕ. ಇಂದಿನ ಕೃಷಿಯಲ್ಲಿ ಅಸಮತೋಲನ, ಅಸಮರ್ಪಕ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಧರ್ಮಗಳ ಮೇಲೆ ದುಷ್ಪರಿಣಾಮಗಳಾಗಿವೆ. ಆದ್ದರಿಂದ ವ್ಯವಸಾಯದಲ್ಲಿ ಬಳಸುವ ನೀರು ಯೋಗ್ಯವಾಗಿದೆಯೋ ಇಲ್ಲವೋ ಎಂದು ತಿಳಿಯಲು ಅದರ ಗುಣಮಟ್ಟ ಪರೀಕ್ಷಿಸುವುದು ಅಗತ್ಯ.

ಇದಲ್ಲದೇ ಕುಡಿಯಲು ಸಹ ನೀರಿನ ಗುಣಮಟ್ಟವನ್ನು ಅರಿತು ಯೋಗ್ಯವಾದ ನೀರನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ನೀರಿನಲ್ಲಿರುವ ಲವಣಾಂಶಗಳ ಪ್ರಮಾಣ ಮತ್ತು ನೀರಿನ ಗುಣಮಟ್ಟವನ್ನು ಅರಿಯದೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬಳಸುವುದರಿಂದ ಮಣ್ಣಿನ ಗುಣಧರ್ಮಗಳ ಮೇಲೆ ಕೆಟ್ಟ ಪರಿಣಾಮವಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಹೆಚ್ಚು.

ಆದ್ದರಿಂದ ವೈಜ್ಞಾನಿಕವಾಗಿ ನೀರನ್ನು ಪರೀಕ್ಷಿಸಿ ಅದರ ಫಲಿತಾಂಶವನ್ನು ವಿಶ್ಲೇಷಿಸಿ ಆಯಾ ನೀರಿಗೆ ಸೂಕ್ತ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಈ ದಿಸೆಯಲ್ಲಿ ನೀರಾವರಿ ನೀರಿನ ಪರೀಕ್ಷೆ ಅತ್ಯಂತ ಮಹತ್ವವಾಗಿದೆ.

ನೀರಿನ ಪರೀಕ್ಷೆಯಿಂದ ನೀರಿನ ರಸಸಾರ (ಪಿಎಚ್), ನೀರಿನ ಲವಣಾಂಶ (ಇಸಿ), ನೀರಿನಲ್ಲಿನ ಕ್ಯಾಲ್ಸಿಯಂ (ಸಿಎ), ಮ್ಯೋಗ್ನೇಷಿಯಂ (ಎಂಜಿ), ಕಾರ್ಬೊನೇಟ್ (ಸಿಇ3), ಬೈ ಕಾರ್ಬೊನೇಟ್ (ಎಚ್ಸಿಒ3) ಹಾಗೂ ಫ್ಲೋರೈಡ್ (ಎಫ್) ಪ್ರಮಾಣಗಳನ್ನು ತಿಳಿಯಲಾಗುತ್ತದೆ.

ನೀರಿನ ಮಾದರಿ ತೆಗೆಯುವ ವಿಧಾನ
-ಕೊಳವೆ ಬಾವಿ ನೀರಿನ ಮಾದರಿ ಸಂಗ್ರಹಿಸಬೇಕಾದಲ್ಲಿ 15 ನಿಮಿಷದ ವರೆಗೆ ಕೊಳವೆ ಬಾವಿಯಿಂದ ನೀರು ಹೊರಹಾಕಿದ ನಂತರ ಸ್ವಚ್ಛವಾದ ಬಾಟಲಿನಲ್ಲಿ ಒಂದು ಲೀಟರ್ ನೀರನ್ನು ಸಂಗ್ರಹಿಸಬೇಕು.

-ಕೆರೆಯ ನೀರಿನ ಮಾದರಿ ತೆಗೆಯಬೇಕಾದರೆ ಕೆರೆಯ ಮಧ್ಯ ಭಾಗದಲ್ಲಿನ ನೀರನ್ನು ಸಂಗ್ರಹಿಸಬೇಕು.

-ನೀರು ಮಾದರಿ ಸಂಗ್ರಹದ ಬಾಟಲಿಗೆ ನೀರಿನ ಮೂಲ ರೈತರ ಹೆಸರು, ವಿಳಾಸ, ಹಾಕಬೇಕಾದ ಬೆಳೆ, ಮಾದರಿ ಸಂಗ್ರಹ ದಿನಾಂಕ ಮುಂತಾದವುಗಳನ್ನು ಬರೆದಿಡಬೇಕು. ನೀರು ಮಾದರಿ ಸಂಗ್ರಹಿಸಿದ 2- 4 ತಾಸುಗಳಲ್ಲಿ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಬೇಕು.

ಫಲಿತಾಂಶದ ವಿಶ್ಲೇಷಣೆ
ಮಣ್ಣಿನ ರಸಸಾರ ಮತ್ತು ಲವಣಾಂಶ ಬೆಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುವಂತೆ ನೀರಿನ ರಸಸಾರ ಮತ್ತು ಲವಣಾಂಶಗಳು ಬೆಳೆಗಳ ಮೇಲೆ ನಿರ್ದಿಷ್ಟ ಪರಿಣಾಮ ಉಂಟುಮಾಡುತ್ತವೆ. ನೀರಿನ ರಸಸಾರ ಮತ್ತು ಲವಣಾಂಶದ ಆಧಾರದ ಮೇಲೆ ನೀರನ್ನು ಕೃಷಿ ಬಳಕೆಗೆ ಅನುಗುಣವಾಗಿ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೀರು ತೊಂದರೆದಾಯಕ ಅಥವಾ ಹಾನಿಕಾರಕ ಪ್ರಮಾಣದಲ್ಲಿ ಲವಣಾಂಶವನ್ನು ಹೊಂದಿದ್ದರೆ ಹೆಚ್ಚಿನ ಲವಣಾಂಶಗಳ ಪ್ರಮಾಣವನ್ನು ಸಹಿಸಿಕೊಳ್ಳುವ ಮಾವು, ಚಿಕ್ಕು ಮತ್ತು ಭತ್ತದಂತಹ ಬೆಳೆಗಳನ್ನು ಬೆಳೆಯಲು ನೀರನ್ನು ಉಪಯೋಗಿಸಿಕೊಳ್ಳಬಹುದು.

ಆದರೆ ಈ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಮಣ್ಣು ಕ್ಷಾರಯುಕ್ತವಾಗಿ ಸಮಸ್ಯಾತ್ಮಕವಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಇಂಥ ನೀರನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಉಪಯೋಗಿಸಬೇಕು.

ಅದರಿಂದ ಪ್ರತಿಕೂಲ ಪರಿಣಾಮವನ್ನು ತಡೆಯಬಹುದಾಗಿದೆ. ಮಣ್ಣು ಹಾಗೂ ನೀರು ಪರೀಕ್ಷೆಯಿಂದ ಅವುಗಳ ಗುಣಧರ್ಮಗಳು, ಪ್ರಾಮುಖ್ಯತೆ ಮತ್ತು ವಿಶ್ಲೇಷಣೆಯನ್ನು ಅರಿತು ಬೆಳೆಯನ್ನು ನಿರ್ಧರಿಸಿದರೆ ಬೆಳೆ ಹಾನಿಯನ್ನು ತಪ್ಪಿಸಿ ಮಣ್ಣಿನ ಗುಣಧರ್ಮ ಕಾಪಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.