ಶನಿವಾರ, ಜೂನ್ 19, 2021
24 °C

ನೀರು ಸಮಸ್ಯೆ: ನಗರಸಭೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನೀರಿನ ಸಮಸ್ಯೆ ನೀಗಿಸ ಬೇಕು ಎಂದು ಆಗ್ರಹಿಸಿ ಕೋಲಾರದ ಇದ್ರಿಸ್ ಮೊಹಲ್ಲಾ ಮಹಿಳೆಯರು ನಗರಸಭೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.21ನೇ ವಾರ್ಡಿನಲ್ಲಿ ಕಳೆದ 6 ತಿಂಗಳಿಂದ ಕುಡಿಯುವ ನೀರು ಇಲ್ಲ ದಂತಾಗಿದೆ.

 

ಜನ ಪರದಾಡುತ್ತಿದ್ದರೂ ನಗರಸಭೆ ಸದಸ್ಯರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ವಾರ್ಡ್‌ನ ಕೊಳವೆ ಬಾವಿ ಬತ್ತಿ ಸುಮಾರು ವರ್ಷ ಕಳೆದಿವೆ. ವಾರ್ಡ್‌ಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಕೇವಲ ಒಂದು ವಾರಕ್ಕೆ ಒಂದು ಟ್ಯಾಂಕರ್ ಮಾತ್ರ ಬರುತ್ತದೆ. ಅಡುಗೆ ಮಾಡಲು ಸಹ ನೀರಿಲ್ಲದಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ನೀರು ಒದಗಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಸಹಾಯಕ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ನೂರಾರು ಕುಟುಂಬಗಳು ಇರುವ  ವಾರ್ಡಿಗೆ ಕೇವಲ ಒಂದು ವಾರಕ್ಕೆ ಒಂದು ಟ್ಯಾಂಕರ್ ನೀರು ಕಳುಹಿಸಿದರೆ ಹೇಗೆ ಜೀವನ ಸಾಧ್ಯ? ಎಂದು ಪ್ರಶ್ನಿಸಿದರು.ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವು ದಾಗಿ ನಗರಸಭೆ ಅಧ್ಯಕ್ಷೆ ನಾಜಿಯಾ ಭರವಸೆ ನೀಡಿದರೂ ಪ್ರತಿಭಟನಾಕಾ ರರು ಧರಣಿ ಮುಂದುವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.