‘ತನ್ನ ಉದರದಲ್ಲಿ ಏನಿದೆ ಎಂಬುದರ ಆಧಾರದಲ್ಲಿ ಸೇನೆಯ ಮುನ್ನಡೆ ನಿರ್ಧಾರವಾಗುತ್ತದೆ’ ಎಂದು ಫ್ರಾನ್ಸಿನ ಸಾಮ್ರಾಟನಾಗಿದ್ದ ನೆಪೋಲಿಯನ್ ಬೊನಾಪಾರ್ಟೆ ಒಮ್ಮೆ ಉಪಮಾತ್ಮಕವಾಗಿ ಹೇಳಿದ್ದ. ಉಗ್ರಾಣದಲ್ಲಿ ಆಹಾರ ಇರುವುದರ ಜೊತೆಗೆ ಶಸ್ತ್ರಾಗಾರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಸಾಕಷ್ಟಿದ್ದರೆ ಸೈನಿಕರು ಯುದ್ಧ ಗೆಲ್ಲುತ್ತಾರೆ.

ನಮ್ಮ ಸಶಸ್ತ್ರ ಪಡೆಗಳ ಯೋಧರು ಜಗತ್ತಿನ ಯಾವುದೇ ದೇಶದ ಯೋಧರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದು ನಿಜ. ಆದರೆ ಸಂಪನ್ಮೂಲಗಳ ಕೊರತೆಯು, ಆಧುನಿಕ ಶಸ್ತ್ರಾಸ್ತ್ರ ಹೊಂದಿರುವ ಸೇನೆಯ ಎದುರು ಅವರು ಸೋಲುವಂತೆ ಮಾಡುತ್ತದೆ. ಚೀನಾ ಜೊತೆಗಿನ ಯುದ್ಧ ಇದಕ್ಕೆ ಸಾಕ್ಷಿ. ‘ಬಂದೂಕು ಮಾತ್ರವಲ್ಲ ಅದನ್ನು ಎಷ್ಟು ತ್ವರಿತವಾಗಿ ಬಳಸಲಾಗುತ್ತದೆ ಎಂಬುದೂ ಯುದ್ಧದ ಗತಿಯನ್ನು ನಿರ್ಧರಿಸುತ್ತದೆ’ ಎಂದು ನೆಪೋಲಿಯನ್ ಹೇಳಿದ್ದ. ಈ ಮಾತು ರಾಜಕೀಯ ಯುದ್ಧರಂಗದಲ್ಲೂ ಅನ್ವಯ ಆಗುತ್ತದೆ.

ಸಾಮ್ರಾಟರ ಕಾಲದಲ್ಲಿ ಸೇನೆ ನೇರವಾಗಿ ಅವರ ನಿಯಂತ್ರಣದಲ್ಲಿ ಇರುತ್ತಿತ್ತು. ಸೇನೆಗೆ ಶಸ್ತ್ರಾಸ್ತ್ರಗಳನ್ನು ನೀಡುವುದು, ಬಲಿಷ್ಠ ಕೋಟೆಗಳನ್ನು ನಿರ್ಮಿಸುವ ವಿಚಾರದಲ್ಲಿ ಸಾಮ್ರಾಟರು ಯೋಚನೆ ಮಾಡಿದಷ್ಟೇ ವೇಗದಲ್ಲಿ ಕೆಲಸವನ್ನೂ ಮಾಡುತ್ತಿದ್ದರು. ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದರೆ ಸಾಮ್ರಾಜ್ಯವೇ ಪತನಗೊಳ್ಳಬಹುದು ಎಂಬುದು ಸಾಮ್ರಾಟರಿಗೆ ತಿಳಿದಿತ್ತು.

ಆದರೆ ನಮ್ಮ ಕಾಲದಲ್ಲಿ, ಅಂಥ ದುರದೃಷ್ಟಕರ ಘಟನೆ ನಡೆದಲ್ಲಿ ರಕ್ಷಣಾ ಸಚಿವರನ್ನು ಪದಚ್ಯುತಗೊಳಿಸಬಹುದು ಅಥವಾ ರಾಜ್ಯಪಾಲರನ್ನಾಗಿ ನೇಮಕ ಮಾಡಬಹುದು! ಇಂದಿನ ಕಾಲಘಟ್ಟದಲ್ಲಿ ಸರ್ವಾಧಿಕಾರಿಯ ಆಡಳಿತವನ್ನು ಬಹುತೇಕರು ಇಷ್ಟಪಡುವುದಿಲ್ಲ. ಒಳ್ಳೆಯ ಸರ್ವಾಧಿಕಾರಿಗಿಂತಲೂ ಕೆಟ್ಟ ಪ್ರಜಾಪ್ರಭುತ್ವವೇ ಲೇಸು ಎಂಬುದು ಸಾಮಾನ್ಯ ಅಭಿಪ್ರಾಯ.

ಈಗಿರುವ ಪ್ರಶ್ನೆ ಇದು: ನಮ್ಮ ಚುನಾಯಿತ ಪ್ರತಿನಿಧಿಗಳು ಬದ್ಧತೆ ಮತ್ತು ತ್ವರಿತವಾಗಿ ಕೆಲಸ ಮಾಡುವಂತೆ ಹೇಗೆ ಮಾಡುವುದು?

ಒಂದು ಉದಾಹರಣೆ ಗಮನಿಸಿ: ಲಘು ಹೆಲಿಕಾಪ್ಟರ್ಗಳ ಖರೀದಿಗೆ ಭಾರತೀಯ ಸೇನೆ 12 ವರ್ಷಗಳ ಹಿಂದೆ ಟೆಂಡರ್ ಕರೆಯಿತು. ಅಂಥ ಟೆಂಡರ್ ಕರೆಯುವಾಗಲೇ 25 ವರ್ಷ ತಡವಾಗಿತ್ತು! ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ, ಈಗ ಬಳಕೆಯಲ್ಲಿರುವ ಚೇತಕ್ ಹೆಲಿಕಾಪ್ಟರ್ಗಳು ತಂತ್ರಜ್ಞಾನದ ವಿಚಾರದಲ್ಲಿ 50 ವರ್ಷ ಹಳೆಯವು. ರಕ್ಷಣಾ ಸಚಿವಾಲಯ ಆ ಟೆಂಡರ್ ಯಾರಿಗೆ ಲಭಿಸಿದೆ ಎಂಬುದನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಒಂದು ಟೆಂಡರ್ 2–3 ವರ್ಷ ವಿಳಂಬ ಆದರೂ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದು ಸಾಮಾನ್ಯನಿಗೂ ಅರ್ಥವಾಗುತ್ತದೆ. ವಾಯುಪಡೆ ಮತ್ತು ನೌಕಾದಳಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳದ್ದೂ ಇದೇ ಕತೆ. ಸವಕಲಾಗಿರುವ ಮಿಗ್ ವಿಮಾನಗಳನ್ನು ಬಳಸುತ್ತಿದ್ದ ಅನೇಕ ಪೈಲಟ್ಗಳನ್ನು ನಾವು ಅಪಘಾತಗಳಲ್ಲಿ ಕಳೆದುಕೊಂಡಿದ್ದೇವೆ. ನೌಕಾದಳದ್ದೂ ಇದೇ ಕತೆ. ವರ್ಷಗಳ ಹಿಂದೆಯೇ ಗುಜರಿ ಸೇರಬೇಕಿದ್ದ ಜಲಾಂತರ್ಗಾಮಿ ನೌಕೆಗಳನ್ನು ಇಂದಿಗೂ ಬಳಸಲಾಗುತ್ತಿದೆ. ಯೋಧರು ಸಾಯುತ್ತಿದ್ದಾರೆ. ಇತ್ತೀಚೆಗೆ ಸಂಭವಿಸಿದ ಐಎನ್ಎಸ್ ಸಿಂಧುರತ್ನ ಅಪಘಾತ ಕೂಡ ಇದೇ ಮಾದರಿಯದ್ದು.

ಸಿಂಧುರತ್ನದ ಬ್ಯಾಟರಿಗಳು ಹಳೆಯದಾಗಿದ್ದವು. ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಚರ್ಚೆಯೇ ಇಲ್ಲದೆ ಮೀಸಲಿಡಲಾಗುತ್ತದೆ. ಆದರೆ ನಮ್ಮ ಪ್ರಭುತ್ವಕ್ಕೆ ಹಳೆಯ ಬ್ಯಾಟರಿ ಬದಲಾಯಿಸಲು ಆಗುವುದಿಲ್ಲ. ನಾಚಿಕೆಯಾಗಬೇಕು. ಹಳೆಯ ಬ್ಯಾಟರಿಗಳನ್ನು ಬದಲಾಯಿಸಬೇಕು, ಹಳೆಯ ಯುದ್ಧನೌಕೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ನೌಕಾದಳ, ರಕ್ಷಣಾ ಸಚಿವಾಲಯಕ್ಕೆ ಮತ್ತೆ ಮತ್ತೆ ಬರೆದ ಪತ್ರಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಇಂಥ ದುರ್ಘಟನೆಗಳ ಕಾರಣಕ್ಕೆ ಒಬ್ಬ ದಕ್ಷ ನೌಕಾಧಿಕಾರಿ (ಡಿ.ಕೆ. ಜೋಷಿ) ಬಲಿಪಶು ಆಗುತ್ತಾರೆ. ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ ಮತ್ತು ಯೋಧರ ಸಾವಿಗೆ ಕಾರಣರಾದ ರಕ್ಷಣಾ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು.

ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾದಂಥ ರಾಷ್ಟ್ರಗಳಲ್ಲಿ ರಕ್ಷಣಾ ಒಪ್ಪಂದವನ್ನು ಅಂತಿಮಗೊಳಿಸಲು ಮೂರು ವರ್ಷ ಸಾಕು ಎಂದು ಏರ್ಬಸ್, ಬೋಯಿಂಗ್, ಲಾಕ್ಹೀಡ್ ಅಥವಾ ಡಸಾಲ್ಟ್ ಕಂಪೆನಿಗಳ ಯಾವುದೇ ಪ್ರತಿನಿಧಿ ಹೇಳುತ್ತಾನೆ. ಆ ದೇಶಗಳೂ ಸ್ಥಾಪಿತ ಹಿತಾಸಕ್ತಿಗಳು ಮತ್ತು ಮಧ್ಯವರ್ತಿಗಳ ಕಾಟದಿಂದ ಹೊರತಾಗಿಲ್ಲ. ಆದರೆ ಭಾರತದಲ್ಲಿ ಮಾತ್ರ ಇಂಥ ಒಪ್ಪಂದಗಳು ಅಂತಿಮ ಹಂತಕ್ಕೆ ಬರಲು ಒಂದು ಅಥವಾ ಎರಡು ದಶಕಗಳು ಬೇಕು. ರಕ್ಷಣಾ ಅಗತ್ಯಗಳಿಗೆ ಬೇಕಾದ ವಿಮಾನ, ಸಲಕರಣೆಗಳ ಖರೀದಿಗೆ ವಿಳಂಬ ಆಗುತ್ತಿರಲು ಕಾರಣ ಸ್ಥಾಪಿತ ಹಿತಾಸಕ್ತಿಗಳು, ತಿಳಿವಳಿಕೆ ಇಲ್ಲದ ಅದಕ್ಷ ಅಧಿಕಾರಿಗಳು ಮತ್ತು ರಾಜಕಾರಣಿಗಳು.

ತಮಗೆ ಒಂದು ಒಪ್ಪಂದದಲ್ಲಿ ಯಾವುದೇ ಲಾಭ ದೊರೆಯದು ಎಂದು ಗೊತ್ತಾದಾಗ ಸ್ಪರ್ಧೆಯಲ್ಲಿರುವ ಯಾವುದೇ ವ್ಯಾಪಾರಿ ಆ ಸ್ಪರ್ಧೆಯನ್ನೇ ಹಾಳು ಮಾಡಲು ಯತ್ನಿಸುತ್ತಾನೆ. ಇದಕ್ಕೆ ಶಸ್ತ್ರಾಸ್ತ್ರ ವ್ಯಾಪಾರಿಗಳೂ ಹೊರತಲ್ಲ. ಅವರೂ ವ್ಯಾಪಾರಿಗಳು. ಅವರ ರೀತಿಯಲ್ಲೇ ರಾಜಕಾರಣಿಗಳು, ಅಧಿಕಾರಿಗಳೂ ವರ್ತಿಸುತ್ತಾರೆ. ರಕ್ಷಣಾ ವ್ಯವಹಾರಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ದೇಶದ್ರೋಹ ಎಂದು ಪರಿಗಣಿಸಬೇಕು. ಭಾರತೀಯ ದಂಡ ಸಂಹಿತೆಗೆ ಸೂಕ್ತ ತಿದ್ದುಪಡಿ ತರಬೇಕು.

ಇಲ್ಲಿ ನಾನು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಮಾತ್ರ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿಲ್ಲ. ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಯುಪಿಎ ಸರ್ಕಾರದಲ್ಲಿ ಮಾತ್ರವಲ್ಲ, ಎಲ್ಲ ಸರ್ಕಾರಗಳ ಅವಧಿಯಲ್ಲೂ ಇದು ನಡೆದಿದೆ. ಆಂಟನಿ ಅವರು ಪ್ರಾಮಾಣಿಕತೆಗೆ ಹೆಸರಾದವರು. ‘ಸಂತ ಆಂಟನಿ’ ಎಂದೇ ಅವರನ್ನು ಕರೆಯುತ್ತಾರೆ. ಆದರೆ ಯಾವುದೇ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬ ಆಪಾದನೆಗೆ ಅವರು ಗುರಿಯಾಗಿದ್ದಾರೆ. ನಾವಿಲ್ಲಿ ವ್ಯವಸ್ಥೆಯ ಸುಧಾರಣೆ ಕುರಿತು ಮಾತನಾಡುತ್ತಿದ್ದೇವೆ. ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಹಾಗೂ ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಭ್ರಷ್ಟ ರಾಜಕಾರಣಿಗಳನ್ನು ನಾವು ಒಪ್ಪಿಕೊಳ್ಳಬಹುದೇ?

ರಕ್ಷಣಾ ಉಪಕರಣಗಳನ್ನು ನಾವು ಭಾರತದ ಖಾಸಗಿ ಕಂಪೆನಿಗಳಿಂದ ಖರೀದಿಸುವುದಿಲ್ಲ. ಉಪಕರಣಗಳನ್ನು ನಾವು ಡಜನ್ಗಟ್ಟಲೆ ಹಗರಣಗಳನ್ನು ನಡೆಸಿರುವ ಎಚ್ಎಎಲ್ ಅಥವಾ ಇತರ ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಖರೀದಿಸುತ್ತೇವೆ. ಹಾಗೆಯೇ ವಿದೇಶಿ ಕಂಪೆನಿಗಳಿಂದಲೂ ಖರೀದಿಸುತ್ತೇವೆ.

ರಕ್ಷಣಾ ಸಚಿವಾಲಯದಲ್ಲಿ ಕೆಲವು ಓರೆಕೋರೆಗಳು ಇರುವಂತೆಯೇ ಸೇನೆಯಲ್ಲಿ ಕೂಡ ಎಲ್ಲವೂ ಸರಿಯಾಗಿಲ್ಲ ಎಂಬುದು ತಿಳಿದಿದೆ. ಶಸ್ತ್ರಾಸ್ತ್ರಗಳ ವ್ಯಾಪಾರಿಗಳು ನಿವೃತ್ತ ಸೇನಾಧಿಕಾರಿಗಳ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಬರುವಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ಅವರು ಉಡುಗೊರೆಗಳು, ಸ್ವಿಸ್ ಬ್ಯಾಂಕ್ ಖಾತೆಗಳು ಮತ್ತು ಬೆಲೆವೆಣ್ಣುಗಳನ್ನೂ ಬಳಸಿಕೊಳ್ಳುತ್ತಾರೆ.

ರಕ್ಷಣಾ ಖರೀದಿ ನೀತಿ ರೂಪಿಸಲು ನಮ್ಮಲ್ಲಿ ತಜ್ಞರು, ಪ್ರಾಮಾಣಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರಕ್ಷಣಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಾವು ಪ್ರತ್ಯೇಕ ನಿರ್ದೇಶನಾಲಯವೊಂದನ್ನು ಹೊಂದಬೇಕು. ಸಾಧ್ಯವಾದರೆ ಐಎಎಸ್ ಅಧಿಕಾರಿಗಳನ್ನು ಅಲ್ಲಿಂದ ದೂರ ಇಡಬೇಕು.

ಇಚ್ಛಾಶಕ್ತಿ ಮತ್ತು ಅಗತ್ಯ ಎದುರಾದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯ. ರಕ್ಷಣಾ ಪಡೆಗಳಿಗೆ ಯಾವ ಯುದ್ಧ ವಿಮಾನ ಬೇಕು, ಎಂಥ ಶಸ್ತ್ರಾಸ್ತ್ರಗಳು ಬೇಕು ಎಂಬ ಮಾಹಿತಿ ಸಚಿವರಿಗೆ ತಿಳಿದಿರಬೇಕು ಎಂದೇನಿಲ್ಲ. ಆದರೆ ತಮ್ಮ ಇಲಾಖೆಯ ಬಗ್ಗೆ ತಿಳಿವಳಿಕೆಯೇ ಇಲ್ಲದ, ರಾಜಕೀಯದಲ್ಲಿ ಮುಳುಗಿರುವ ಅಧಿಕಾರಿಗಳ ಮಾತು ಕೇಳುವ, ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗದ ಸಚಿವರು ನಮಗೆ ಬೇಡ. ರಕ್ಷಣಾ ಪಡೆಗಳನ್ನು ಮುಂದೆ ನಿಂತು ಮುನ್ನಡೆಸುವ ತಾಕತ್ತಿರುವ ಸಚಿವರು ನಮಗೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.