ಮೀರತ್: `ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಾರಣ ಕ್ರೀಸ್ಗೆ ಅಂಟಿಕೊಂಡು ನಿಲ್ಲುವ ಅಗತ್ಯವಿತ್ತು. ಆದ್ದರಿಂದ ಆರಂಭದಲ್ಲಿ ರನ್ ಗಳಿಸಲು ಅವಸರ ಮಾಡಲಿಲ್ಲ. ನಂತರ ನಿಧಾನವಾಗಿ ಶತಕದತ್ತ ಹೆಜ್ಜೆ ಹಾಕಿದೆ~ ಎಂದು ಉತ್ತರಪ್ರದೇಶ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಪರ್ವಿಂದರ್ ಸಿಂಗ್ ಹೇಳಿದರು.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು ಎಂಟು ಶತಕ ಗಳಿಸಿರುವ ಈ ಬ್ಯಾಟ್ಸ್ಮನ್, ರಣಜಿಯಲ್ಲಿ ಏಳು ಶತಕ ಕಲೆ ಹಾಕಿದ್ದಾರೆ. ದುಲೀಪ್ ಟ್ರೋಫಿಯ ಪಂದ್ಯದಲ್ಲಿಯೂ ಒಂದು ಶತಕ ಗಳಿಸಿದ್ದಾರೆ. ಸೋಮವಾರದ ದಿನದಾಟದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಪರ್ವಿಂದರ್, `ಅನುಭವಿ ಮಹಮ್ಮದ್ ಕೈಫ್ ಮೊದಲ ಅವಧಿಯಲ್ಲಿಯೇ ವಿಕೆಟ್ ಒಪ್ಪಿಸಿದರು. ತಂಡಕ್ಕೆ ರನ್ ಗಳಿಸುವುದು ಮುಖ್ಯವಾಗಿರಲಿಲ್ಲ.

ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದರೆ ಸಾಕಿತ್ತು. ಈ ಕುರಿತು ದಿನದಾಟ ಆರಂಭಕ್ಕೆ ಮುನ್ನವೇ ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಾತನಾಡಿಕೊಂಡಿದ್ದೆವು. ಅದಕ್ಕಾಗಿ ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದೆ~ ಎಂದು ನುಡಿದರು.

`ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಓವರ್ನಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದೆ. ನಂತರ ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಬಾರಿಸುತ್ತಿದ್ದೆ. ಜೊತೆಗೂಡಿ ಆಡಿದ ಭುವನೇಶ್ವರ್ ಕುಮಾರ್ ಸಹ ಉತ್ತಮ ನೆರವು ನೀಡಿದರು. ಇಲ್ಲವಾದರೆ ದ್ವಿಶತಕದ ಜೊತೆಯಾಟ ಸಾಧ್ಯವಾಗುತ್ತಿರಲಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟರು.

ಬೆಳಿಗ್ಗೆ ಡಿಕ್ಲೇರ್: `ನಮ್ಮ ತಂಡದವರು ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ. 300 ರನ್ ಗಳಿಸಿದ ನಂತರ ಡಿಕ್ಲೇರ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆವು. ವಿನಾಕಾರಣ ಅಪಾಯಕ್ಕೆ ಅವಕಾಶ ನೀಡುವುದು ಬೇಡ ಎನ್ನುವ ಕಾರಣಕ್ಕೆ ಮೂರನೇ ದಿನ ಪೂರ್ತಿ ಬ್ಯಾಟಿಂಗ್ ಮಾಡಲು ನಿರ್ಧರಿಸಲಾಯಿತು~ ಎಂದು ಉತ್ತರಪ್ರದೇಶ ತಂಡದ ತರಬೇತುದಾರ ಕನ್ನಡಿಗ ವೆಂಕಟೇಶ್ ಪ್ರಸಾದ್ ಹೇಳಿದರು. ಈ ತಂಡ ಮಂಗಳವಾರ ಮೊದಲ ಅವಧಿಯ ಪೂರ್ವದಲ್ಲಿಯೇ ಡಿಕ್ಲೇರ್ ಮಾಡಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.