ಶನಿವಾರ, ಜನವರಿ 18, 2020
20 °C

ನೇತಾಜಿ ದೇಶಪ್ರೇಮ ಅನುಕರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಸ್ವಾತಂತ್ರ್ಯ ಸಂಗ್ರಾಮದ ಅಂದಿನ ದಿನಗಳಲ್ಲಿ ಜಗತ್ತನ್ನು ಸುತ್ತಿ ವಿವಿಧ ದೇಶಗಳಲ್ಲಿ ಸ್ವತಂತ್ರ ಸೈನ್ಯವನ್ನು ಕಟ್ಟಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ಸೇನಾನಿ ನೇತಾಜಿ ಸುಭಾಷಚಂದ್ರರ ದೇಶಪ್ರೇಮ    ಹೋರಾಟದ ಕಿಚ್ಚು ಅನುಕರಣೀಯವೆಂದು ಮಿಣಜಗಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಹೇಳಿದರು.ಅವರು ಸ್ಥಳೀಯ ಶ್ರಿ ಸಂಗಮಾರ್ಯ ಶಿವಯೋಗಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಎ.ಬಿ.ವಿ.ಪಿ. ಸ್ಥಳೀಯ ಘಟಕದ ವತಿಯಿಂದ ಆಯೋಜಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್‌ರ 115ನೇ ಜನ್ಮ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಶಾಲಾ ಜೀವನದಲ್ಲಿ ಅವರ ಜೀವನಕಥೆಯಿಂದ ಪ್ರೇರಿತರಾದ ತಾವು ಆಗಲೇ ನೇತಾಜಿ ಕ್ಲಬ್ ಕಟ್ಟಿದ್ದಾಗಿ  ಸ್ಮರಿಸಿದರು.ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ತಾಯ್ನಾಡಿಗೆ ಸ್ವಾತಂತ್ರ್ಯ ದೊರಕಿಸುವುದಕ್ಕಾಗಿ ವಿದೇಶಗಳಿಗೆ ಹೋಗಿದ್ದ ಸುಭಾಷಚಂದ್ರರು    ವಿಮಾನ ಅಪಘಾತದಲ್ಲಿ ದುರ್ಮರಣಕ್ಕೆ ಈಡಾಗದೇ ಹೋಗಿದ್ದರೆ,   ಭಾರತ ದೇಶ ಸ್ವಾತಂತ್ರ್ಯದ ಸವಿಯನ್ನು 1947ಕ್ಕೂ ಮುಂಚೆ ಸವಿಯಲು ಸಾಧ್ಯವಿತ್ತು ಎಂದು ಅಭಿಪ್ರಾಯಪಟ್ಟ ಅವರು, ಅಂತಹ ವೀರನ ಬದುಕು, ಹೋರಾಟ ನಮ್ಮ ಆದರ್ಶವಾಗಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎಚ್. ಎಸ್. ಪಾಟೀಲ,  ದೇಶದ ಸ್ವಾತಂತ್ರ್ಯ ಹೋರಾಟದ ಹಿಂದಿನ ತ್ಯಾಗ- ಬಲಿದಾನಗಳನ್ನು ಸ್ಮರಿಸಿ ನಾಡನ್ನು ಕಟ್ಟಿ ಬೆಳೆಸಬೇಕಾದ ಯುವಪಡೆ  ಕವಲುದಾರಿಯಲ್ಲಿದ್ದು ಅದಕ್ಕೆ ಯೋಗ್ಯ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದರು.ಆರಂಭದಲ್ಲಿ ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಎಚ್.ಎಸ್. ಪಾಟೀಲ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಬಸವರಾಜ ಮೇಟಿ ಇದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಎ.ಬಿ.ವಿ.ಪಿ. ತಾಲ್ಲೂಕು ಘಟಕದ ಕಾರ್ಯದರ್ಶಿ ಬಸವರಾಜ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಿರಾಜ ವಠಾರ ಸ್ವಾಗತಿಸಿ, ನಿರ್ವಹಿಸಿದರು. ಡಿ.ಇಡಿ ಕಾಲೇಜಿನ ಅಧೀಕ್ಷಕ ಹರೀಶ ಬಸರಿಕಟ್ಟಿ ವಂದಿಸಿದರು.ಸ್ವಾಮೀಜಿ ನಿಧನ:ಸಂತಾಪ

 ಸಿಂದಗಿ:  ಕಕ್ಕಳಮೇಲಿ ನೂರಂದೇಶ್ವರ ಶಿವಾಚಾರ್ಯರ ನಿಧನಕ್ಕೆ ಸಿಂದಗಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕ ವಿ.ಡಿ. ವಸ್ತ್ರದ, ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಾರದ, ಉಪಾಧ್ಯಕ್ಷ ಅಶೋಕ ಮನಗೂಳಿ, ಶಾಂತೇಶ್ವರಮಠದ ಶಿವಾನಂದ ಶಿವಾಚಾರ್ಯರು, ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)