ನವದೆಹಲಿ (ಪಿಟಿಐ): ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಅಭಿವೃದ್ಧಿಪಡಿಸುತ್ತಿರುವ, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ನಲ್ಲಿನ (ನೈಸ್) ತಮ್ಮ ಶೇ 15ರಷ್ಟು ವೈಯಕ್ತಿಕ ಪಾಲು ಬಂಡವಾಳದಲ್ಲಿ ಅರ್ಧದಷ್ಟನ್ನು ಅನಿಲ್ ಅಂಬಾನಿ ಅವರು ರೂ325 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ.

ದೂರಸಂಪರ್ಕ ಮತ್ತು ಹಣಕಾಸು ವಹಿವಾಟಿನ ಆರ್ಥಿಕ ಒಕ್ಕೂಟವಾಗಿರುವ ರಿಲಯನ್ಸ್ ಗ್ರೂಪ್ನ ಮುಖ್ಯಸ್ಥರಾಗಿರುವ ಅನಿಲ್ ಅಂಬಾನಿ, `ನೈಸ್~ನಲ್ಲಿನ ತಮ್ಮ ವೈಯಕ್ತಿಕ ಪಾಲು ಬಂಡವಾಳದ ಶೇ 8ರಷ್ಟನ್ನು 325 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ.2005ರಲ್ಲಿ ಅನಿಲ್ ಅಂಬಾನಿ ಅವರು ರೂ60 ಕೋಟಿಗಳಿಗೆ ಶೇ 15ರಷ್ಟು ಷೇರುಗಳನ್ನು ಖರೀದಿಸಿದ್ದರು.

7 ವರ್ಷಗಳಲ್ಲಿ ಅವರು 10 ಪಟ್ಟುಗಳಷ್ಟು ಲಾಭ ಮಾಡಿಕೊಂಡಿದ್ದಾರೆ.ಜಾಗತಿಕ ಹಣಕಾಸು ಸೇವಾ ದೈತ್ಯ ಸಂಸ್ಥೆ ಜೆಪಿ ಮಾರ್ಗನ್ಗೆ ಸೇರಿದ ಮಾರಿಷಸ್ ಮೂಲದ ನಿಧಿ ಸಂಸ್ಥೆಯೊಂದಕ್ಕೆ ಅನಿಲ್ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.