ಮುಂಬೈ (ಪಿಟಿಐ): 2005ಕ್ಕಿಂತ ಮೊದಲು ಮುದ್ರಣಗೊಂಡಿರುವ, ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಿಸಿಕೊಳ್ಳಲು ಸಾರ್ವಜನಿಕರಿಗೆ ನೀಡಿದ್ದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಚ್ಚುವರಿಯಾಗಿ 9 ತಿಂಗಳು ವಿಸ್ತರಿಸಿದೆ. ಸಾರ್ವಜನಿಕರು 2015ರ ಜನವರಿ 1ರವರೆಗೆ ಈ ನೋಟುಗಳನ್ನು ಬದಲಿಸಿಕೊಳ್ಳಬಹುದು.

‘ನೋಟುಗಳನ್ನು ಬದಲಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಈ ಗಡುವು ಮುಗಿಯುವುದರೊಳಗೆ ಬದಲಿಸಿಕೊಂಡರೆ ಸಾಕು. ಸದ್ಯ ಈ ನೋಟುಗಳನ್ನು ಬಳಸಿ ವಹಿವಾಟು ನಡೆಸಲು ಯಾವುದೇ ಭಯ ಬೇಡ. ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಬೀಳಬಾರದು’ ಎಂದೂ ‘ಆರ್ಬಿಐ’ ಹೇಳಿದೆ.

ಬದಲಿ ನೋಟುಗಳನ್ನು ನೀಡುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಸಂಪೂರ್ಣ ಮೊತ್ತ (ಮುಖ ಬೆಲೆ ಮೌಲ್ಯ) ಪಾವತಿಸಬೇಕು ಎಂದೂ ‘ಆರ್ಬಿಐ’ ಬ್ಯಾಂಕುಗಳಿಗೆ ಸೂಚನೆ ನೀಡಿದೆ. 2005ಕ್ಕಿಂತ ಮೊದಲು ಮುದ್ರಣಗೊಂಡ ನೋಟುಗಳ ಹಿಂಭಾಗದಲ್ಲಿ ಮುದ್ರಣ ವರ್ಷ ನಮೂದಾಗಿರುವುದಿಲ್ಲ. ಆದರೆ, 2005ರ ನಂತರ ಮುದ್ರಣಗೊಂಡ ನೋಟುಗಳ ಹಿಂಭಾಗದಲ್ಲಿ ಮುದ್ರಣ ವರ್ಷ ನಮೂ-ದಾಗಿರುತ್ತದೆ. ಖೋಟಾ ನೋಟುಗಳ ಹಾವಳಿ ತಡೆಯಲು ಏಕರೂಪದ ಭದ್ರತಾ ಗುಣಲಕ್ಷಣಗಳನ್ನು ಹೊಂದಿರುವ ನೋಟುಗಳನ್ನೇ ಚಲಾವಣೆಗೆ ಬಿಡಬೇಕು ಎಂಬ ಅಂತರರಾಷ್ಟ್ರೀಯ ಮಾನದಂಡ ಇದೆ.

ಈ ಹಿನ್ನೆಲೆಯಲ್ಲಿ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಏಪ್ರಿಲ್ 1ರಿಂದ ಚಲಾವಣೆಯಿಂದ ವಾಪಸ್ ಪಡೆಯುವುದಾಗಿ ‘ಆರ್ಬಿಐ’ ಹೇಳಿತ್ತು. ಆದರೆ, ಸಾರ್ವಜನಿಕರು ಮತ್ತು ಬ್ಯಾಂಕುಗಳಿಂದ ಮನವಿ ಬಂದ ಹಿನ್ನೆಲೆಯಲ್ಲಿ ಈಗ ಗಡುವು ವಿಸ್ತರಿಸಲಾಗಿದೆ.

ಈಗಾಗಲೇ ಬಹುಪಾಲು ನೋಟುಗಳನ್ನು ಬದಲಿಸಿಕೊಳ್ಳಲಾಗಿದೆ. ಸಾರ್ವಜನಿಕರ ಬಳಿ ಸೀಮಿತ ಸಂಖ್ಯೆಯ ನೋಟುಗಳು ಮಾತ್ರ ಉಳಿದುಕೊಂಡಿವೆ. ಇದನ್ನು ಬದಲಿಸಿಕೊಳ್ಳಲು ಗಡುವು ವಿಸ್ತರಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.