ಶುಕ್ರವಾರ, ಮೇ 14, 2021
32 °C
ಶ್ರೀಶಾಂತ್,ಅಂಕಿತ್ ಬಿಡುಗಡೆ

`ನ್ಯಾಯಾಂಗದ ಬಗ್ಗೆ ಪೂರ್ಣ ನಂಬಿಕೆಯಿದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ದೇಶದ ಕಾನೂನಿಗೆ ತಲೆಬಾಗುತ್ತೇನೆ' ಎಂದು ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪಿ ಶ್ರೀಶಾಂತ್ ಹೇಳಿದ್ದಾರೆ.`ಜೈಲಿನ ಅನುಭವ ಸಾಕಷ್ಟು ಪಾಠಗಳನ್ನು ಕಲಿಸಿದೆ' ಎಂದೂ ಅವರು ತಿಹಾರ್ ಜೈಲಿನಿಂದ ಮಂಗಳವಾರ ಬಿಡುಗಡೆಗೊಂಡ ನಂತರ ಪತ್ರಕರ್ತರ ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಸೋಮವಾರ ಜಾಮೀನು ಸಿಕ್ಕಿದ್ದರಿಂದ ಆಟಗಾರರಾದ ಶ್ರೀಶಾಂತ್, ಅಂಕಿತ್ ಅವರಲ್ಲದೆ, 17 ಮಂದಿ ಬುಕ್ಕಿಗಳು ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು.ಸ್ಪಾಟ್ ಫಿಕ್ಸಿಂಗ್: ಮತ್ತಿಬ್ಬರಿಗೆ ಜಾಮೀನು

ನವದೆಹಲಿ (ಪಿಟಿಐ
): ಸ್ಪಾಟ್ ಫಿಕ್ಸಿಂಗ್ ಹಗರಣ ಪ್ರಕರಣದ ಮತ್ತಿಬ್ಬರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.ಬುಕ್ಕಿಗಳಾದ ರಾಕೇಶ್ ಅಲಿಯಾಸ್ ರಾಕಿ ಹಾಗೂ ಅಮಿತ್ ಕುಮಾರ್ ಸಿಂಗ್ ಅವರಿಗೆ ಜಾಮೀನು ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರು ಇಬ್ಬರು ಆರೋಪಿಗಳು ತಲಾ 50 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸುವಂತೆ ಆದೇಶಿಸಿದ್ದಾರೆ.`ಇತರ 18 ಮಂದಿ ಸಹ ಆರೋಪಿಗಳಿಗೂ ಈಗಾಗಲೇ ಜಾಮೀನು ನೀಡಲಾಗಿದ್ದು, ಆ ಆರೋಪಗಳ ಸ್ವರೂಪ ಮತ್ತು ಅರ್ಜಿದಾರರ ಪಾತ್ರಗಳನ್ನು  ಹೋಲಿಕೆ ಮಾಡುವ ಮೂಲಕ ರಾಕೇಶ್ ಹಾಗೂ ಅಮಿತ್ ಕುಮಾರ್‌ಗೆ ಜಾಮೀನು ನೀಡಲಾಗಿದೆ' ಎಂದು ನ್ಯಾಯಾಲಯ ಹೇಳಿದೆ.ಪೊಲೀಸ್ ವಶಕ್ಕೆ ಅಗರ್‌ವಾಲ್ (ಚೆನ್ನೈ ವರದಿ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಹೋಟೆಲ್ ಉದ್ಯಮಿ ವಿಕ್ರಮ್ ಅಗರ್‌ವಾಲ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಸ್ಥಳೀಯ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.ಸೋಮವಾರ ಅಗರ್‌ವಾಲ್ ಅವರನ್ನು ಬಂಧಿಸಿದ್ದ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ತಮಿಳುನಾಡು ಅಪರಾಧ ವಿಭಾಗದ ಸಿಐಡಿ ಪೊಲೀಸರು ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.