ಶನಿವಾರ, ಮೇ 21, 2022
23 °C

ನ್ಯೂಜಿಲೆಂಡ್ ಭೂಕಂಪನ: ಭೀತಿಗೊಂಡ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಲಿಂಗ್ಟನ್ (ಎಪಿಎಫ್): ನ್ಯೂಜಿಲೆಂಡ್‌ನ ರಾಜಧಾನಿ ವೆಲಿಂಗ್ಟನ್ ದಕ್ಷಿಣ ಭಾಗ ಒಳಗೊಂಡಂತೆ 57 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಭಾನುವಾರ ಭಾರೀ ಪ್ರಮಾಣದ ಭೂಕಂಪನ ಉಂಟಾಗಿದ್ದು, ಯಾವುದೇ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗಿರುವ ಬಗ್ಗೆ ವರದಿ ಲಭ್ಯವಾಗಿಲ್ಲ. ಪಾಕ್‌ನಲ್ಲೂ ಭೂಕಂಪ ಸಂಭವಿಸಿದೆ.



ಅಂತರರಾಷ್ಟ್ರೀಯ ಕಾಲಮಾನದ ಪ್ರಕಾರ ಭಾನುವಾರ ಬೆ. 5.09ರ ಕ್ಕೆ ಭೂಮಿ ಕಂಪಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ  6.9ರಷ್ಟಿತ್ತು.  ಅವಘಡದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಿಸುವಂತೆ ಕೋರಿ ಅನೇಕ ದೂರವಾಣಿ ಕರೆಗಳು ಅಗ್ನಿ ಶಾಮಕ ದಳದ ಸಹಾಯವಾಣಿಗೆ ಬಂದಿವೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.