`ಪಂಚವಟಿ'- ಹೆಸರಿನಲ್ಲೇ ಮಾಧುರ್ಯವನ್ನು ಒಸರುವ ಈ ಸ್ಥಳಕ್ಕೆ ಸಂಬಂಧಿಸಿದಂತೆ ಪುರಾಣ ಕಥನಗಳ ಒರತೆಯೇ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ಸ್ಥಳವಿದು. ಪಂಚವಟಿ ಎಂದರೆ ಐದು ಆಲದಮರಗಳ ಉದ್ಯಾನ. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಕಳೆದದ್ದು ಇಲ್ಲಿಯೇ.

ಪಂಚವಟಿ ಇರುವುದು ನಾಸಿಕ್ನ ಉತ್ತರ ಭಾಗದಲ್ಲಿ. ಪಂಚವಟಿಯಲ್ಲಿ ಇರುವಾಗಲೇ ರಾವಣದ ಸಹೋದರಿ ಶೂರ್ಪನಖಿಯು ಸೀತೆಯನ್ನು ಕೊಲ್ಲಲು ಪ್ರಯತ್ನಿಸಿದ್ದು. ಆ ಪ್ರಸಂಗದ ಕಾರಣವಾಗಿಯೇ ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದನು. ಮೂಗುಭಂಗವಾದ ಸ್ಥಳವೇ ನಾಸಿಕ್.

ನಾಸಿಕ ಎಂದರೆ ಮೂಗು.

ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ' (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಇಲ್ಲಿಯೇ. ಅಂದರೆ ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ. ಹೀಗೆ ರಾಮಾಯಣದ ಹಲವು ಪ್ರಸಂಗಗಳೊಂದಿಗೆ ಪಂಚವಟಿ ತಳುಕು ಹಾಕಿಕೊಂಡಿದೆ.

ನಂಬಿಕೆಗಳು ಇನ್ನೂ ಇವೆ. ಗೋದಾವರಿ ನದಿಯಲ್ಲಿ ಪಿಂಡದಾನ ಮಾಡಿದರೆ ಅಥವಾ ಅಸ್ಥಿ ವಿಸರ್ಜಿಸಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವುದೊಂದು ನಂಬಿಕೆ. ವನವಾಸದ ಸಮಯದಲ್ಲಿ ದಶರಥನ ಅಸ್ಥಿಯನ್ನು ರಾಮ ಇಲ್ಲಿಯ ನೀರಿನಲ್ಲಿಯೇ ವಿಸರ್ಜಿಸಿದನಂತೆ.

ಅಮೃತ ಸಿಂಚನ!
ಈಗಿನ ಪೀಳಿಗೆಗೆ ನಾಸಿಕವೆಂದರೆ ನೆನಪಾಗುವುದು ಅಲ್ಲಿ ಬೆಳೆಯುವ ಈರುಳ್ಳಿ ಮತ್ತು ಸಿಹಿ ದ್ರಾಕ್ಷಿ. ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದು. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ತುಳುಕಿದವಂತೆ. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ದೈವಿಕ ಪ್ರಭಾವಳಿ.

ತ್ರಿವೇಣಿ ಸಂಗಮ ನಾಸಿಕ್ನ ಇನ್ನೊಂದು ವಿಶೇಷ. ಅರುಣ, ವರುಣ ಮತ್ತು ಗೋದಾವರಿ ನದಿಗಳ ಸಂಗಮದ ತಾಣವಿದು. ಅರುಣ ಮತ್ತು ವರುಣ ನದಿಗಳು ಗುಪ್ತಗಾಮಿನಿಗಳು. ಗೋದಾವರಿಯೋ ಜನಸಮುದಾಯದ ಮೈದೊಳೆದು ಪೊರೆವ ಜೀವದಾಯಿನಿ.

ಪಂಚವಟಿಯ ಕುರಿತು ಅನೇಕ ಬರಹಗಳನ್ನು ಓದಿದ್ದ ನನಗೆ ಆ ಪ್ರಸಿದ್ಧ ವೃಕ್ಷಗಳು ಮತ್ತು ತಾಣವನ್ನು ನೋಡಲೇಬೇಕು ಎನ್ನುವ ಕುತೂಹಲವಿತ್ತು. ನನ್ನ ಪಯಣ ಆರಂಭವಾದುದು ಗೋದಾವರಿ ಮಹಾ ದೇವಸ್ಥಾನದ ಭೇಟಿಯೊಂದಿಗೆ. ಅದು ಕುಂಭಮೇಳದ ಸಮಯ. ಅಂದರೆ 12 ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ದೇವಸ್ಥಾನವನ್ನು ನೋಡುವ ಅವಕಾಶ. ಅಲ್ಲಿನ ಪವಿತ್ರ ತೀರ್ಥದ ಪ್ರೋಕ್ಷಣೆ, ನದಿಯಲ್ಲಿ ಮೀಯುವುದು, ದೇವರ ದರ್ಶನ- ಇವೆಲ್ಲ ಪಾಪವನ್ನು ಕಳೆದುಕೊಳ್ಳುವ ಮತ್ತು ಬಯಕೆಗಳನ್ನು ಈಡೇರಿಸಿಕೊಳ್ಳುವ ಮಾರ್ಗಗಳು ಎಂದು ಅಲ್ಲಿನ ಗೈಡ್ ವಿವರಿಸಿದ.

ಪವಿತ್ರ ತೀರ್ಥವೆಂದು ಗೈಡ್ ಹೇಳಿದ ಗೋದಾವರಿ ಸಂಪೂರ್ಣ ಕಲುಷಿತಗೊಂಡಿದ್ದಳು. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿತ್ತು. 2009ರಲ್ಲಿ ಅನಿರೀಕ್ಷಿತ ಪ್ರವಾಹದಿಂದ ಹಲವು ಅಡಿಗಳಷ್ಟು ನೀರು ಏರಿತ್ತು. ಅದರ ಗುರುತು ಪಂಚವಟಿಯ ಹಲವು ಕಟ್ಟಡಗಳಲ್ಲಿ ಕಲೆಯಾಗಿ ಕಾಣಿಸಿತು.

ಮಂದಿರಗಳ ಸಾಲಿನಲ್ಲಿ...
ಗೋದಾವರಿ ತೀರದಿಂದ ತೆರಳಿದ್ದು ನರೋಶಂಕರ್ ದೇಗುಲಕ್ಕೆ. ನರೋಶಂಕರ್ ರಾಜೆಬಹದ್ದೂರ್ 1747ರಲ್ಲಿ ನಿರ್ಮಿಸಿದ, `ಮಾಯಾ' ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾದ ಮಂದಿರವದು. ಪೋರ್ಚುಗೀಸರ ವಿರುದ್ಧ ವಸಾಯಿ ಕೋಟೆ ಕದನದಲ್ಲಿ ಪಡೆದ ಗೆಲುವಿನ ನೆನಪಿಗಾಗಿ ಮರಾಠಾ ರಾಜ ಬಾಜಿರಾವ್ ಪೇಶ್ವೆಯ ತಮ್ಮ ಚಿಮಾಜಿ ಅಪ್ಪ ಅಳವಡಿಸಿದ ಗಂಟೆ ಬಲು ಪ್ರಸಿದ್ಧ. ಅದಕ್ಕೆ `ನಾರೋಶಂಕರ್ ಗಂಟೆ' ಎಂದೇ ಹೆಸರು.

ಹಲವು ಬಗೆಗಳಲ್ಲಿ ವಿಭಿನ್ನವಾಗಿರುವ ಆ ದೇವಾಲಯದ ಹಿನ್ನೆಲೆಯಲ್ಲಿ ಆಸಕ್ತಿಕರ ಕಥೆಯಿದೆ. ರಾಮಕುಂಡದ ಎದುರಿಗೇ `ಕಪಾಲೇಶ್ವರ' ಎಂದು ಕರೆಯಲಾಗುವ 250 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವಿದೆ. ಇಲ್ಲಿ ಶಿವನ ವಾಹನ ನಂದಿ ಇರುವುದು ಶಿವಲಿಂಗದ ಮುಂಭಾಗದಲ್ಲಿ ಅಲ್ಲ. ಬ್ರಹ್ಮನ ಐದು ಶಿರಗಳಲ್ಲಿ ಒಂದನ್ನು ಕತ್ತರಿಸಿದ ಶಿವ `ಬ್ರಹ್ಮ ಹತ್ಯಾದೋಷ'ಕ್ಕೆ ಒಳಗಾಗುತ್ತಾನೆ. ಇಡೀ ಜಗತ್ತನ್ನು ಸುತ್ತುವ ಶಿವ ತನ್ನ ಪಾಪ ಪರಿಹಾರಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಪರಿಹಾರ ದಕ್ಕುವುದಿಲ್ಲ. ಕೊನೆಗೆ ನಂದಿಯ ಸಲಹೆಯಂತೆ ಪವಿತ್ರ ಗೋದಾವರಿ ನದಿಯಲ್ಲಿ ಮೀಯುವ ಶಿವನಿಗೆ ಪಾಪ ನಿವಾರಣೆಯಾಗುತ್ತದೆ. ಹೀಗಾಗಿಯೇ ಇಲ್ಲಿ ಶಿವಲಿಂಗದ ಮುಂದೆ ಸ್ಥಾಪಿತಗೊಳ್ಳಲು ನಂದಿ ಒಪ್ಪಲಿಲ್ಲವಂತೆ.

ಈ ಪ್ರವಾಸದಲ್ಲಿ ನೋಡಲು ಯೋಗ್ಯವಾದ ಮತ್ತೊಂದು ತಾಣ ಕಲಾರಾಮ ದೇವಸ್ಥಾನ. ಪೇಶ್ವೆಗಳು ನಿರ್ಮಿಸಿದ ಈ ಮಂದಿರಕ್ಕೆ ಸಂಪೂರ್ಣ ಕಪ್ಪು ಕ್ಲ್ಲಲು ಬಳಸಿರುವುದರಿಂದ `ಕಲಾರಾಮ' ಎನ್ನುವ ಹೆಸರು ಬಂದಿದೆಯಂತೆ. ಇಲ್ಲಿನ ರಾಮ, ಸೀತೆ ಮತ್ತು ಲಕ್ಷ್ಮಣ ಕಡುಕಪ್ಪು ವರ್ಣೀಯರಾಗಿದ್ದು ಒಡವೆಗಳಿಂದ ಅಲಂಕೃತರಾಗಿದ್ದಾರೆ. 70 ಅಡಿ ಎತ್ತರದ ಈ ದೇವಾಲಯ ನಿರ್ಮಾಣಕ್ಕೆ 12 ವರ್ಷ ತಗುಲಿತು. ದೂರದ ರಾಮಶೆಜ್ನಿಂದ ಇದಕ್ಕೆ ಕಲ್ಲುಗಳನ್ನು ತರಿಸಲಾಗಿತ್ತು. ಆ ಕಾಲದಲ್ಲಿಯೇ 23 ಲಕ್ಷ ರೂಪಾಯಿಯಷ್ಟು ಹಣ ನಿರ್ಮಾಣಕ್ಕೆ ಖರ್ಚಾಗಿತ್ತು.

ದೇವಸ್ಥಾನದ ಒಳಗೆ 32 ಟನ್ಗಳಷ್ಟು ಚಿನ್ನವನ್ನು ಬಳಸಲಾಗಿದೆಯಂತೆ. ಈ ದೇವಾಲಯದ ದ್ವಾರಕ್ಕೆ ತಲುಪಲು ಇರುವ ಹದಿನಾಲ್ಕು ಮೆಟ್ಟಿಲುಗಳು ರಾಮನ ಹದಿನಾಲ್ಕು ವರ್ಷದ ವನವಾಸವನ್ನು ಸಂಕೇತಿಸುತ್ತವೆ. 1930ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದಿಂದ ಹರಿಜನರು ದೇವಾಲಯ ಪ್ರವೇಶಿಸುವುದು ಇಲ್ಲಿ ಸಾಧ್ಯವಾಯಿತು.

ರಾವಣನಿಂದ ಅಪಹೃತಗೊಳ್ಳುವ ಮುನ್ನ ಸೀತೆ ಇದ್ದಳೆನ್ನಲಾದ ಸೀತಾ ಗುಹೆಯೊಳಗೆ ರಾಮ, ಸೀತೆ ಮತ್ತು ಲಕ್ಷ್ಮಣನ ಪ್ರತಿಮೆಗಳಿವೆ. ಈ ಗುಹೆಗೆ ಇರುವ ಕಿರಿದಾದ ಮೆಟ್ಟಿಲಿನಲ್ಲಿ ಒಬ್ಬರು ಮಾತ್ರ ಹೋಗಲು ಸಾಧ್ಯ.

ನಾಸಿಕದಿಂದ 28 ಕಿ.ಮೀ ದೂರದಲ್ಲಿರುವ, 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ತ್ರೈಂಬಕೇಶ್ವರ ನನ್ನ ಮುಂದಿನ ಭೇಟಿಯಾಗಿತ್ತು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮುಖಗಳು ಬೆಸೆದಿರುವುದು ಇಲ್ಲಿನ ವಿಶೇಷ ಆಕರ್ಷಣೆ. ನೀರಿನ ಅತಿಯಾದ ಬಳಕೆಯ ಕಾರಣ ಶಿವಲಿಂಗ ಸವೆಯುತ್ತಿದ್ದು, ಅದನ್ನು ಸ್ಪರ್ಶಿಸಲು ಅವಕಾಶ ನೀಡುತ್ತಿಲ್ಲ. ಮೂರು ದೇವತೆಗಳ ಚಿನ್ನದ ಮುಖವಾಡವನ್ನು ಹೊತ್ತ ಲಿಂಗಗಳನ್ನು ಆಭರಣದ ಕಿರೀಟ ಅಲಂಕರಿಸಿದೆ. ಪ್ರತಿ ಸೋಮವಾರ ಸಂಜೆ 4ರಿಂದ 5 ಗಂಟೆವರೆಗಿನ ಅವಧಿಯಲ್ಲಷ್ಟೇ ಸಾರ್ವಜನಿಕರಿಗೆ ಈ ಕಿರೀಟ ವೀಕ್ಷಣೆಗೆ ಅವಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.