ಬೆಂಗಳೂರು: ಅರವಿಂದ್ ಮತ್ತು ಹರಿಶ್ ಅವರ ಅಮೋಘ ಆಟದ ಬಲದಿಂದ ಬ್ಯಾಂಕ್ ಆಫ್ ಬರೋಡಾ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ರಾಜ್ಯ ‘ಎ’ಡಿವಿಷನ್ ಲೀಗ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ಜಯಿಸಿತು.

ಭಾನುವಾರ ಎಂಎನ್ಕೆ ರಾವ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೊಡಾ ತಂಡವು 91–77 (46–36) ರಿಂದ ಬೆಂಗಳೂರಿನ ಡಿವೈಇಎಸ್ (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ತಂಡವನ್ನು ಸೋಲಿಸಿತು. ಬ್ಯಾಂಕ್ ತಂಡದ ಅರವಿಂದ್ ಮತ್ತು ಹರೀಶ್ ಕ್ರಮವಾಗಿ 25 ಹಾಗೂ 22 ಅಂಕ ಗಳಿಸಿದರು. ಡಿವೈಇಎಸ್ ತಂಡದ ಕುಶಾಲ್ ಹಾಗೂ ಆದರ್ಶ್ ತಲಾ 14 ಅಂಕ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಎಂಎನ್ಕೆ ರಾವ್ ಪಾರ್ಕ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡವು 76–66ರಿಂದ ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ ಎದುರು ಜಯಿಸಿತು. ಪಾರ್ಕ್ ತಂಡದ ಅಜಿನ್ (22) ಹಾಗೂ ವೆಂಕಟ್ (12) ಉತ್ತಮವಾಗಿ ಆಡಿದರು. ವಿವೇಕ್ಸ್ ತಂಡದ ಮುಕೇಶ್ (21) ಮತ್ತು ವಿನೋದ್ (14) ಉತ್ತಮವಾಗಿ ಆಡಿದರು.

ಮತ್ತೊಂದು ಪಂದ್ಯದಲ್ಲಿ ಎಸ್.ಬ್ಲ್ಯೂಸ್ ತಂಡವು 90–83ರಿಂದ ಬೀಗಲ್ಸ್ ಬ್ಯಾಸ್ಕೆಟ್ಬಾಲ್ ಕ್ಲಬ್ ಎದುರು ಗೆದ್ದಿತು. ಬ್ಲ್ಯೂಸ್ ತಂಡದ ವೆಂಕಟ್ ಹಾಗೂ ಧ್ರುವ ತಲಾ 12 ಅಂಕ ಗಳಿಸಿದರು. ಬೀಗಲ್ಸ್ ತಂಡದ ಅಚಿಂತ್ಯ ಮತ್ತು ಪ್ರಥಮ್ ಕ್ರಮವಾಗಿ 25 ಹಾಗೂ 22 ಅಂಕ ಕಲೆಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.