ಪಕ್ಷಗಳಿಗೆ ಹಣ: ನಿಯಂತ್ರಣಕ್ಕೆ ವಿಶೇಷ ತಂಡ

ಭಾನುವಾರ, ಮೇ 26, 2019
33 °C

ಪಕ್ಷಗಳಿಗೆ ಹಣ: ನಿಯಂತ್ರಣಕ್ಕೆ ವಿಶೇಷ ತಂಡ

Published:
Updated:

ನವದೆಹಲಿ, (ಪಿಟಿಐ): ರಾಜಕೀಯ ಪಕ್ಷಗಳಿಗೆ ವಿವಿಧೆಡೆಯಿಂದ ದೊರೆಯುವ ವಂತಿಗೆ ಮತ್ತು ನಿಧಿಯ ಮೇಲೆ ನಿಯಂತ್ರಣ ಹೇರಲು ಹಣಕಾಸು ಸಚಿವಾಲಯ ವಿಶೇಷ ತನಿಖಾ ತಂಡವನ್ನು ರಚಿಸಿದೆ.ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಡಿ ಇದು ಕಾರ್ಯ ನಿರ್ವಹಿಸಲಿದೆ. ಚುನಾವಣಾ ಆಯೋಗ ಕಳೆದ ವರ್ಷ ಆರಂಭಿಸಿದ ಪ್ರತ್ಯೇಕ ವೆಚ್ಚ ನಿರ್ವಹಣಾ ಘಟಕದ ಹಿನ್ನೆಲೆಯಲ್ಲಿ ಈ ಹೊಸ ತನಿಖಾ ತಂಡವನ್ನು ಆರಂಭಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಆಯುಕ್ತರ ಶ್ರೇಣಿಯ ಅಧಿಕಾರಿ ಇದರ ಮುಖ್ಯಸ್ಥರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಚುನಾವಣಾ ಸಂಬಂಧದ ಖರ್ಚು, ರಾಜಕೀಯ ಪಕ್ಷಗಳು ತೆರಿಗೆ ನಿಯಮ ಪಾಲಿಸುವಂತೆ ಆದೇಶಿಸುವುದು ಇತ್ಯಾದಿ ಕಾರ್ಯಗಳನ್ನು ಹೊಸ ತಂಡ ನಿರ್ವಹಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry