ಪಾಲಕ್ಕಾಡ್, (ಪಿಟಿಐ): ಜಿಲ್ಲೆಯ ಶೊರ್ನೂರ್ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಯಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದಾಗ ಈ ಘಟಕದಲ್ಲಿ 12 ಮಂದಿ ಕಾರ್ಮಿಕರಿದ್ದರು. ರೈಲ್ವೆ ಹಳಿಗೆ ಸಮೀಪದ ಖಾಲಿ ಸ್ಥಳದಲ್ಲಿ ಈ ಘಟಕ ಇತ್ತು. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿಯೇ ರೈಲೊಂದು ಸಾಗಿ ಹೋಯಿತಾದರೂ ರೈಲಿನಲ್ಲಿದ್ದವರಿಗೆ ಯಾರಿಗೂ ತೊಂದರೆಯಾಗಲಿಲ್ಲ.

‘ರಿಸೋರ್ಸ್ಸ್ಯಾಟ್-2’ ಉಡಾವಣೆಗೆ ಸಿದ್ಧತೆ
ಚೆನ್ನೈ (ಐಎಎನ್ಎಸ್): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಫೆಬ್ರುವರಿ ಅಂತ್ಯದಲ್ಲಿ ಭೂನಿರೀಕ್ಷಣ ಉಪಗ್ರಹ ‘ರಿಸೋರ್ಸ್ಸ್ಯಾಟ್-2’ ಅನ್ನು ಉಡಾವಣೆ ಮಾಡಲಿದೆ. ಇಸ್ರೊ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈ ದೂರ ಸಂವೇದಿ ಉಪಗ್ರಹ ವಿವಿಧ ಬಗೆಯ ಚಿತ್ರಗಳನ್ನು ಭೂ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಫೆ. 20-25ರ ಅವಧಿಯಲ್ಲಿ ಉಡಾವಣೆ ನಡೆಯಲಿದೆ.

ಪೊಲೀಸರ ಮೇಲೆ ಸೀಮೆಎಣ್ಣೆ ಮಾಫಿಯಾ ದಾಳಿ
ನಾಗಪುರ, (ಐಎಎನ್ಎಸ್):  ತೈಲ ಕಲಬೆರಕೆ ಮಾಫಿಯ ನಾಸಿಕ್ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಣೆ ಅವರನ್ನು ಸಜೀವವಾಗಿ ದಹಿಸಿ ವಾರ ಕಳೆಯುವಷ್ಟರಲ್ಲೇ ಅಕ್ರಮ ಸೀಮೆಎಣ್ಣೆ ಮಾರಾಟಗಾರರ ಜಾಲ ಮಂಗಳವಾರ ಪೊಲೀಸರ ಮೇಲೆ ದಾಳಿ ನಡೆಸಿರುವ ಪ್ರಕರಣ ನಾಗಪುರ ಜಿಲ್ಲೆಯ ಉಮ್ರೆದ್ ತೆಹಸಿಲ್ನ ರಜೂರ್ವಾಡಿ ಗ್ರಾಮದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.