ಸೋಮವಾರ, ಏಪ್ರಿಲ್ 19, 2021
23 °C

ಪಡಿತರ ಅಂಗಡಿ ಬದಲಾವಣೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಪಡಿತರ ಅಂಗಡಿಗಳನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಹಾಗೂ ಕೊಕ್ಕರಗುಂದಿ ಗ್ರಾಮಸ್ಥರು ಮಂಗಳವಾರ  ತಹ ಶೀಲ್ದಾರ ಆರ್. ಡಿ. ಉಪ್ಪಿನ ಅವರಿಗೆ ಮನವಿ ಸಲ್ಲಿಸಿದರು.ವಾಲ್ಮೀಕಿ ಹಾಗೂ ಸಿದ್ಧಾರೋಡ ಲೋಕಲ್ ಸಮಿತಿಗಳ ಪಡಿತರ ಅಂಗಡಿ ಗಳನ್ನು ಬದಲಾವಣೆ ಮಾಡಿ ರುವುದು ಕಾನೂನು ಬಾಹಿರವಾಗಿದೆ. ನ್ಯಾಯ ಸಮ್ಮತವಾಗಿ ಪಡಿತರ ಅಂಗಡಿಗಳನ್ನು ನಡೆಸುತ್ತಿದ್ದ ವ್ಯಕ್ತಿಗಳ ಬದಲಾಗಿ ರಾಜಕೀಯ ಶಕ್ತಿಯನ್ನು ಬಳಸಿ ಬದಲಾ ವಣೆ ಮಾಡಿರುವುದು ಅನ್ಯಾಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.ಸ್ಥಳೀಯವಾಗಿ ಪಡಿತರವನ್ನು ವಿತರಣೆ ಮಾಡುತ್ತಿದ್ದು, ಇದೀಗ ಬದ ಲಾವಣೆ ಮಾಡಿರುವುದರಿಂದ ದೂರದ 34 ಕಿಮಿ ದೂರದ ಮಾಗಡಿ ಗ್ರಾಮಕ್ಕೆ ಹೋಗಿ ಪಡಿತರವನ್ನು ತರು ವುದು ಮಹಿಳೆಯರಿಗೆ, ವೃದ್ಧರಿಗೆ ಮತ್ತು ಮಕ್ಕಳಿಗೆ ತೀವ್ರ ತೊಂದರೆ ಯಾಗು ತ್ತಿದೆ. ಆದ್ದರಿಂದ ಮೊದಲಿನ ವ್ಯವಸ್ಥೆ ಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.ಜನರಿಗೆ ಆಗುತ್ತಿರುವ ತೊಂದರೆ ಗಳನ್ನು ಲೆಕ್ಕಿಸದೆ ರಾಜಕೀಯ ಪ್ರಭಾವ ದಿಂದ ಪಡಿತರ ಅಂಗಡಿಗಳನ್ನು ಬದಲಾ ವಣೆ ಮಾಡಿರುವುದು ಖಂಡನೀಯ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ನ್ಯಾಯಸಮ್ಮತವಾಗಿ ಮೊದಲಿದ್ದ ಪಡಿತರ ಅಂಗಡಿಗಳಿಗೆ ಅವಕಾಶ ಕಲ್ಪಿಸ ಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.    ಕಾಂಗ್ರೆಸ್ ಯುವ ಮುಖಂಡ ದೇವಪ್ಪ ಲಮಾಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಪರಮೇಶ ಲಮಾಣಿ, ಶಿಗ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಕೊಟ್ಟನಗೌಡ್ರ ಮಲ್ಲನಗೌಡ್ರ, ಮಹೇಶಪ್ಪ ಕೊಡಬಾಳ, ಮೌಲಾಸಾಬ್ ಮತ್ತೂರ, ಮೇಲಪ್ಪ ಹರಿಜನ, ಮಾರುತಿ ಉದಣ್ಣವರ, ರಾಜು ಹತ್ತಿಕಾಳ, ಹನಮಂತ ಪೂಜಾರ, ಬಸಪ್ಪ ಹರಿಜನ, ಶಂಬುರೆಡ್ಡಿ ಹೊರಕೇರಿ, ಶರಣಬಸನಗೌಡ ಪಾಟೀಲ, ಮಾಬುಸಾಬ್ ನದಾಫ್, ರೇಣವ್ವ ಹರಿಜನ, ನೀಲವ್ವ ಮುಂದಿನ ಮನಿ, ಗಿರಿಜವ್ವ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.