ಸಂಸಾರದ ಜಗಳ, ಅಳು, ಗೋಳಾಟ, ಅದೇ ಪುನಾರವರ್ತಿತ ಘಟನೆಗಳು, ಕಪ್ಪು-ಬಿಳುಪಿನ ಪಾತ್ರಗಳು, ಮನೆ ಒಳಗೆ ನಡೆಯುವ ಚರ್ವಿತಚರ್ವಣ ಸನ್ನಿವೇಶಗಳು. ಇಂಥ ಮೆಗಾ ಧಾರಾವಾಹಿಗಳನ್ನು ನೋಡಿ ಬೇಸತ್ತವರಿಗೆ ಇದೀಗ ಪತ್ತೇದಾರಿ ಧಾರಾವಾಹಿ ನೋಡುವ ಅವಕಾಶ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ `ಅಜಿತನ ಸಾಹಸ~ಗಳನ್ನು ನೋಡಿದ್ದ ಪ್ರೇಕ್ಷಕರಿಗೆ ಇಷ್ಟವಾಗುವಂತೆ `ಅಡ್ವೋಕೇಟ್ ಅರ್ಜುನ್~ ಈಗ ಸಿದ್ಧವಾಗುತ್ತಿದೆ.

`ವಾರಕ್ಕೊಂದು ಕಥೆ ಪ್ರಸಾರ ಮಾಡಲಾಗುವುದು. ಅನವಶ್ಯಕವಾಗಿ ಕಥೆಯನ್ನು ಎಳೆಯುವುದಿಲ್ಲ~ ಎನ್ನುವ ಭರವಸೆ ನಿರ್ದೇಶಕ ಸುಧಾಕರ್ ಸಾಜ ಅವರಿಂದ ದೊರೆಯಿತು.

`ಬರುತ್ತಿರುವ ಎಲ್ಲಾ ಮೆಗಾ ಧಾರಾವಾಹಿಗಳಿಗಿಂತ ತಮ್ಮದು ವಿಭಿನ್ನ. ಬಹುತೇಕ ಎಲ್ಲ ಧಾರಾವಾಹಿಗಳಲ್ಲಿ ಮನೆಯೊಳಗಿನ ಸನ್ನಿವೇಶಗಳೇ ಜಾಸ್ತಿ. ಮನೆಯ ಹೊರಗೆ ಅಂದರೆ ಒಂದೇ ಊರಿನಲ್ಲಿ ಚಿತ್ರೀಕರಣವಾಗುವುದೇ ಹೆಚ್ಚು. ಆದರೆ, ತಮ್ಮ ಧಾರಾವಾಹಿಯ ಪ್ರತಿ ಎಪಿಸೋಡನ್ನು ಬೇರೆ ಬೇರೆ ಊರುಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ~ ಎಂದು ಸುಧಾಕರ್ ಹೇಳಿದರು. ಹೀಗೆ ಊರಿಂದ ಊರಿಗೆ ಪಯಣ ಬೆಳೆಸುವುದರಿಂದ ನಿರ್ಮಾಣ ವೆಚ್ಚ ಹೆಚ್ಚುವುದಾದರೂ ಗುಣಮಟ್ಟದ ಬಗ್ಗೆ ಅವರ ಗಮನವಂತೆ.

`ಬದುಕಿನ ನೈಜ ಘಟನೆಗಳ ಸ್ಫೂರ್ತಿ ಈ ಧಾರಾವಾಹಿಗಿದೆ. ಆದರೆ ಯಾವ ಘಟನೆಗಳನ್ನೂ ನೇರವಾಗಿ ತೆಗೆದುಕೊಂಡಿಲ್ಲ. ನೈಜ ಘಟನೆಗಳ ಸ್ಫೂರ್ತಿಯಿಂದ ಕಾಲ್ಪನಿಕವಾಗಿ ಸೃಷ್ಟಿಸಿದ ಕಥಾಗುಚ್ಚ ಇದರಲ್ಲಿದೆ~ ಎಂದರು ಸಾಜ.

ಅಡ್ವೊಕೇಟ್ ಅರ್ಜುನ್ ಪಾತ್ರದಲ್ಲಿ ರಾಜೇಶ್ ಕಾಣಿಸಿಕೊಳ್ಳುತ್ತಿದ್ದು, ಪ್ರತಿ ವಾರವೂ ಒಂದೊಂದು ಪ್ರಕರಣವನ್ನು ಬಗೆಹರಿಸಲಿದ್ದಾರೆ. ರಿಕಿ ಕೇಜ್ ಸಂಗೀತ ಮತ್ತು ಗುರು ಪ್ರಶಾಂತ್ ರೈ ಕಾಮೆರಾ ಈ ಧಾರಾವಾಹಿಗಿದೆ. ಸುಧಾಕರ್ ಸಾಜ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಅಂದಹಾಗೆ, ಟಿ.ಎನ್.ಸೀತಾರಾಂ ಅವರ `ಮುಕ್ತ ಮುಕ್ತ~ ಧಾರಾವಾಹಿಯಲ್ಲಿನ ನ್ಯಾಯಾಲಯದ ದೃಶ್ಯಗಳು ವೀಕ್ಷಕರಿಗೆ ರೋಮಾಂಚನ ನೀಡುತ್ತಿರುವ ಸಂದರ್ಭದಲ್ಲೇ, ಅದಕ್ಕಿಂತಲೂ ಭಿನ್ನವಾದ ಕೋರ್ಟ್ ಸೀನ್ಗಳು `ಅಡ್ವೊಕೇಟ್ ಅರ್ಜುನ್~ ಧಾರಾವಾಹಿಯಲ್ಲಿ ಇರಲಿವೆಯಂತೆ.

`ಅಡ್ವೊಕೇಟ್ ಅರ್ಜುನ್~ ಜೂನ್ 11ರಿಂದ ಪ್ರತಿ ಶನಿವಾರ ರಾತ್ರಿ 9ರಿಂದ ಒಂದು ತಾಸು `ಉದಯ ವಾಹಿನಿ~ಯಲ್ಲಿ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.