ಮಂಗಳವಾರ, ಜೂನ್ 15, 2021
23 °C

ಪತ್ರಕರ್ತರ ಮೇಲೆ ಹಲ್ಲೆ: ಜಿಲ್ಲೆಯ ವಿವಿಧೆಡೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವಂತೆ ವರ್ತನೆ ಮಾಡಿದ ವಕೀಲರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಹೊಸಪೇಟೆ ದಿನ ಮಾಧ್ಯಮ ಪತ್ರಕರ್ತರ ಸಂಘ ಆಗ್ರಹಿಸಿದೆ.

ಈ ಕುರಿತು ಹೊಸಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪತ್ರಕರ್ತರು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಬಳಿ  ವರದಿಗೆ ತೆರಳಿದ ಮಾಧ್ಯಮಗಳ ಮೇಲೆ ವಕೀಲರೆಂದು ಹೇಳಿಕೊಂಡ ಕೆಲವರು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.ಇದನ್ನು ಮೂಕ ಪ್ರೇಕ್ಷಕರಂತೆ ನೋಡಿದ ಪೊಲೀಸರು ಕರ್ತವ್ಯ ಲೋಪವೆಸಗಿದ್ದಾರೆ ಕಾರಣ ಹಲ್ಲೆ ಮಾಡಿದವರನ್ನು ಬಂದಿಸಬೇಕು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಸಂಘದ ಅಧ್ಯಕ್ಷ ಕೆ.ಲಕ್ಷ್ಮಣ ಹಾಗೂ ಪರಶುರಾಮ ಕಲಾಲ್ ಎಸ್.ಎನ್.ಪಿ.ಪಾಟೀಲ್ ಮತ್ತು ವೆಂಕೋಬ ನಾಯಕ್ ಮಾತನಾಡಿದರು ದಿನ ಮಾಧ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

ಮನವಿ ಸ್ವೀಕರಿಸಿ ತಹಸೀಲ್ದಾರ ಬಸವರಾಜ ಸೋಮಣ್ಣನವರ ಮಾತನಾಡಿ ತಮ್ಮ ಭಾವನೆ ಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು.ದಲಿತ ಸಂಘಟನೆ ಖಂಡನೆ: ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಗೂಂಡಾಗಳ ರೀತಿ ನಡೆದುಕೊಂಡಿರುವುದು ತುಂಬಾ ವಿಷಾದನೀಯ ಎಂದು ದಲಿತ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಗ್ಯಾನಪ್ಪ ಬಡಿಗೇರ ತಿಳಿಸಿದ್ದಾರೆ.ತಪ್ಪು ಮಾಡಿದ ವ್ಯಕ್ತಿಗಳನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿಸಬೇಕು ಹಾಗೂ ಮಾಧ್ಯಮದ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.ಕುರುಗೋಡು ವರದಿ

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮಮಿತ್ರರ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಪಟ್ಟಣದ ಮುಖ್ಯ ವೃತ್ತದಿಂದ ವಿಶೇಷ ತಹಶೀಲ್ದಾರ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು, ವಕೀಲರ ವಿರುದ್ಧ  ಘೋಷಣೆಗಳನ್ನು ಕೂಗಿದರು.ಪತ್ರಕರ್ತ ಪಿ.ಆರ್.ವೆಂಕಟೇಶ್, ಸಿಪಿಐ(ಎಂ) ಮುಖಂಡ ವಿ.ಎಸ್. ಶಿವಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿದರು.ಪತ್ರಕರ್ತರಾದ ವಾಗೀಶ್ ಎ. ಕುರುಗೋಡು, ಕೆ.ಭೀಮಣ್ಣ, ಪಂಪಾಪತಿಗೌಡ, ಕೆ.ಬಸವರಾಜ, ಪ್ರಾಂತ ರೈತಸಂಘದ ಕೆ.ಗಾದಿಲಿಂಗಪ್ಪ, ಎಚ್.ಎಂ. ವಿಶ್ವನಾಥ ಸ್ವಾಮಿ, ಎಸ್.ಬಿ. ಮಹ್ಮದ್‌ಖಾನ್, ಜೆಡಿ(ಎಸ್) ಯುವ ಘಟಕದ ಅಧ್ಯಕ್ಷ ನಾಗಲಿಂಗ ಸ್ವಾಮಿ, ನಂದಿಕೋಲು ಬಸವರಾಜ, ಚನ್ನಪಟ್ಟಣ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಐ(ಎಂ), ಕರ್ನಾಟಕ ಪ್ರಾಂತ ರೈತ ಸಂಘ ವಿವಿಧ ಸಂಘಟನೆ ಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.ಸಂಡೂರು ವರದಿ

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಪರ್ತಕರ್ತರು ಹಾಗೂ ಪೋಲೀಸ್ ಸಿಬ್ಬಂಇ ಮೇಲೆ ನಡೆಸಿದ ವಕೀಲರ ವಿದುದ್ಧ ಕೂಡಲೇ ಕ್ರಮ ಜರುಗಿಸುವಂತೆ ಪತ್ರಕರ್ತ ಸಂಘದವರು ಶುಕ್ರವಾರ ಆಗ್ರಹಿಸಿದರು.ಕಾನೂನು ರಕ್ಷಣೆ ಮಾಡಬೇಕಾದ ವಕೀಲರೆ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದು ಅಮಾನವೀಯ. ಇಂಥ ಸಂದರ್ಭದಲ್ಲಿ ಸುಮ್ಮನಿದ್ದ ಪೋಲೀಸರು ಕಾನೂನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ.ಪೋಲೀಸರ ಮೇಲೆ ಹಲ್ಲೆ ಜರುಗಿದ ನಂತರ ಘಟನೆಯ ತೀವ್ರತೆ ಅರಿವು ಪೋಲೀಸರಿಗಾಗಿದೆ.ಸಿಟಿ ಸಿವಿಲ್ ನ್ಯಾಯಾಲಯ ವಕಿಕೀಲರ ಖಾಸಗಿ ಆಸ್ತಿಯಲ್ಲ, ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಅಮಾನುಷವಾಗಿ ಮಾಡಿದ್ದು ಖಂಡನಾರ್ಹ.ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಪಾಲರಿಗೆ ಮನವಿಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುರಳೀಧರ್ ಆಚಾರ್, ವಿ.ಎಂ.ನಾಗಭೂಷಣ್, ವೀರೇಂದ್ರ ಗೌಡ, ಕೋಳೂರು ಪ್ರಹ್ಲಾದ್, ಆರ್. ಶಿವರಾಮ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.