ಸೋಮವಾರ, ಏಪ್ರಿಲ್ 19, 2021
31 °C

ಪದಕ ಗೆದ್ದವರಿಗೆ ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರಿಗೆ ಬುಧವಾರ ಲೋಕಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.`ಈ ಸಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಿದ ಶೂಟರ್ ವಿಜಯ್ ಕುಮಾರ್, ಗಗನ್ ನಾರಂಗ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಅಭಿನಂದನೆಗಳು. ಮುಂದೆ ಕ್ರೀಡೆಯಲ್ಲಿ ಸಾಧನೆ ಮಾಡುವವರಿಗೆ ಈ ಕ್ರೀಡಾಪಟುಗಳು ಸ್ಫೂರ್ತಿ~ ಎಂದು ಲೋಕಸಭೆಯಲ್ಲಿ ಸ್ಪೀಕರ್ ಮೀರಾ ಕುಮಾರಿ ನುಡಿದರು.ಸೇನಿಯಾ ನಿವೃತ್ತಿ

ಲಂಡನ್ (ಐಎಎನ್‌ಎಎಸ್): ಈ ಸಲದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ರಷ್ಯಾದ ಜಿಮ್ನಾಸ್ಟಿಕ್ ಸ್ಪರ್ಧಿ ಸೇನಿಯಾ ಫಾನಾಸೇವಾ ನಿವೃತ್ತಿ ಪ್ರಕಟಿಸಿದ್ದಾರೆ. 20 ವರ್ಷದ ಈ ಸ್ಪರ್ಧಿ ಎರಡು ಸಲ ವಿಶ್ವ ಚಾಂಪಿಯನ್ ಕಿರೀಟ ಪಡೆದಿದ್ದರು.`ಆರೋಗ್ಯದ ದೃಷ್ಟಿಯಿಂದ ನಿವೃತ್ತಿ ನಿರ್ಧಾರ ಕೈಗೊಂಡಿದ್ದೇನೆ. ಈ ಒಲಿಂಪಿಕ್ಸ್‌ನಲ್ಲಿ ಪ್ರಾಥಮಿಕ ಸುತ್ತಿಗೂ ಹಾಗೂ ಫೈನಲ್‌ಗೂ ಸಾಕಷ್ಟು ಸಮಯವಿತ್ತು. ಈ ವೇಳೆ ಕಠಿಣ ಅಭ್ಯಾಸ ನಡೆಸಿದ್ದರಿಂದ ಪದಕ ಗೆಲ್ಲಲು ಸಾಧ್ಯವಾಯಿತು~ ಎಂದು ಅವರು ಹೇಳಿದರು.ವಿಜಯ್‌ಗೆ 20 ಲಕ್ಷ ರೂ. ಬಹುಮಾನ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಶೂಟರ್ ವಿಜಯ್ ಕುಮಾರ್ ಹಾಗೂ ಕಂಚು ಗೆದ್ದ ಗಗನ್ ನಾರಂಗ್ ಅವರಿಗೆ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಬುಧವಾರ ಬಹುಮಾನ ಘೋಷಿಸಿದೆ.ವಿಜಯ್‌ಗೆ 20 ಲಕ್ಷ ರೂಪಾಯಿ ಹಾಗೂ ಗಗನ್‌ಗೆ 15 ಲಕ್ಷ ರೂ. ನೀಡುವುದಾಗಿ ರೈಫಲ್ ಸಂಸ್ಥೆ ಅಧ್ಯಕ್ಷ ರಾಣಿಂದರ್ ಸಿಂಗ್ ಪ್ರಕಟಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ `ಯೋಧ~ ವಿಜಯ್ 25 ಮೀಟರ್ಸ್‌ ರ‌್ಯಾಪಿಡ್ ಫೈರ್ ಪಿಸ್ತೂಲ್ ಹಾಗೂ ನಾರಂಗ್ 10ಮೀ. ಏರ್ ರೈಫಲ್ ವಿಭಾಗಗಳಲ್ಲಿ ಪದಕ ಜಯಿಸಿದ್ದರು. ಗಗನ್‌ಗೆ ಮಂಗಳವಾರ ಆಂಧ್ರ ಪ್ರದೇಶ ಸರ್ಕಾರ 50 ಲಕ್ಷ ರೂ. ಬಹುಮಾನ ಪ್ರಕಟಿಸಿತ್ತು.`ಹನ್ನೊಂದು ಮಂದಿ ಶೂಟರ್‌ಗಳಲ್ಲಿ ಕೆಲವರು ಈಗಾಗಲೇ ತವರಿಗೆ ಮರಳಿದ್ದಾರೆ. ಅಭಿನವ್ ಬಿಂದ್ರಾ, ಟ್ರಾಪ್ ಶೂಟರ್ ರೊಂಜನ್ ಸೋಧಿ ಮತ್ತು ಮಾನವ್‌ಜಿತ್ ಸಿಂಗ್ ಸಂಧು ಅವರು ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ಇಟಲಿಗೆ ತೆರಳಿದ್ದಾರೆ~ ಎಂದು ಶೂಟಿಂಗ್ ತಂಡದ ಕೋಚ್ ಸನ್ನಿ ಥಾಮಸ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.