ಮಂಗಳವಾರ, ಏಪ್ರಿಲ್ 20, 2021
29 °C

ಪರಿಶಿಷ್ಟರ ಉಚಿತ ಆರೋಗ್ಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶಿಷ್ಟರ ಉಚಿತ ಆರೋಗ್ಯ ತಪಾಸಣೆ

ರಾಮದುರ್ಗ: ಪುರಸಭೆಯ ಶೇ.18ರ ನಿಧಿ ಹಾಗೂ  ಎಸ್‌ಎಫ್‌ಸಿ ಯೋಜನೆಯಡಿ ಪಟ್ಟಣ ಪ್ರದೇಶ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದವರ ಉಚಿತ ಆರೋಗ್ಯ ತಪಾಸಣೆ  ಶಿಬಿರ ಗುರುವಾರ ನಡೆಯಿತು. ಪುರಸಭೆಯ ಅಧ್ಯಕ್ಷ ಗೋವಿಂದ ಪತ್ತೇಪೂರ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಶಿಷ್ಟರ ಆರೋಗ್ಯ ತಪಾಸಣೆಗೆ ಪುರಸಭೆಯ ನಿಧಿಯಲ್ಲಿ ಅನುದಾನ ನಿಗದಿ ಪಡಿಸಲಾಗಿದೆ. ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ  ಔಷಧಗಳನ್ನು  ಪುರಸಭೆಯಿಂದಲೇ  ಒದಗಿಸಲಾಗುವುದು ಎಂದು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಎಚ್. ದೊಡಮನಿ  ಮಾತನಾಡಿ, ಸರ್ಕಾರಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಈ ದಿಸೆಯಲ್ಲಿ  ಸಾಕಷ್ಟು ಪ್ರಚಾರ ಆಗಬೇಕು ಎಂದರು.ಮುಖ್ಯಾಧಿಕಾರಿ ಶಶಿಧರ ಕಾಗವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ನಾಯಕ, ಗೋವಿಂದ ಮೋಡಕ, ಶ್ರೀಧರ ಮುದ್ದಿ, ಈರಪ್ಪ ಮಾದರ, ರಾಜೇಂದ್ರ ಕೊಳದೂರ, ಕರಿಯಮ್ಮ ಬೆಳಗಲಿ, ಡಾ.ಎನ್. ಬಿ.ಬನ್ನಿಗಿಡದ, ಡಾ. ದಂಡಾವತಿಮಠ, ಸಿಬ್ಬಂದಿ ಎಂ. ಪಿ. ನದಾಫ್, ಎಂ. ಎಸ್. ರಿತ್ತಿಭಾಯಿ ಪಾಲ್ಗೊಂಡಿದ್ದರು. ಸುಮಾರು 200ಕ್ಕೂ ಹೆಚ್ಚು ರೋಗಿಗಳು ಈ ಸೌಲಭ್ಯಗನ್ನು ಪಡೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.