ತಿಪಟೂರು: ಮೆಟ್ರಿಕ್ ನಂತರದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ತಾಲ್ಲೂಕಿನಲ್ಲಿ ವಿತರಿಸಬೇಕಾದ ವಿದ್ಯಾರ್ಥಿ ವೇತನ ರೂ.40 ಲಕ್ಷದಲ್ಲಿ ರೂ.36 ಲಕ್ಷ ಬಾಕಿ ಉಳಿಸಿಕೊಂಡಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾ.ಪಂ.ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನೌಕರರೊಬ್ಬರು ಅಂಕಿಅಂಶ ನೀಡಿದಾಗ, ಮಾರ್ಚ್ ಮೊದಲ ವಾರ ಕಳೆಯುತ್ತಿದ್ದರೂ; ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನದ ಭಾರಿ ಮೊತ್ತ ಬಾಕಿ ಉಳಿಸಿಕೊಂಡಿರುವುದಕ್ಕೆ ಸದಸ್ಯರು ಮತ್ತು ಪ್ರಭಾರಿ ಇಒ ಉಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹಣವನ್ನು ಸಕಾಲಕ್ಕೆ ನೀಡದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಇಲಾಖೆ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ವಿತರಣೆ ಸಾಧ್ಯವಾಗಿಲ್ಲ ಎಂದು ನೌಕರರು ಸಮಜಾಯಿಷಿ ನೀಡಿದ್ದಕ್ಕೆ, ಕುಂಟು ನೆಪ ಹೇಳದೆ ಮಾ.15ರೊಳಗೆ ಬಾಕಿ ಹಣ ವಿದ್ಯಾರ್ಥಿಗಳ ಕೈಸೇರಬೇಕು ಎಂದು ಇಒ ಕಟ್ಟುನಿಟ್ಟಾಗಿ ಎಚ್ಚರಿಸಿದರು.

ಈ ಇಲಾಖೆಯ ತಾಲ್ಲೂಕು ಅಧಿಕಾರಿ ಸದಾ ಬೇಜವಾಬ್ದಾರಿ ತೋರುತ್ತಾರೆ. ಕೆಡಿಪಿ ಸಭೆಗಳಿಗೂ ಬರುವುದಿಲ್ಲ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟರ ಕಾಲೊನಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಮೀಸಲು ಅನುದಾನ ಬಳಸಿಲ್ಲ ಎಂದು ಸದಸ್ಯೆ ನೇತ್ರಾವತಿ ಆಕ್ಷೇಪಿಸಿದರು.

ಕೆಲ ಶಾಲೆ ಬಿಸಿಯೂಟ ಪಡಿತರದಲ್ಲಿ ಹುಳು ಕಂಡುಬಂದಿವೆ. ಕಲುಷಿತ ನೀರನ್ನೇ ಮಕ್ಕಳಿಗೆ ಕುಡಿಯಲು ಕೊಡುತ್ತಾರೆ. ಶಿಕ್ಷಕರು ಮಾತ್ರ ಮಕ್ಕಳಿಂದ ಶುದ್ಧ ನೀರು ತರಿಸಿಕೊಳ್ಳುತ್ತಾರೆ ಎಂದು ಸದಸ್ಯರಾದ ನೇತ್ರಾವತಿ, ಕಲಾವತಿ ಆಕ್ಷೇಪ ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಮನಮೋಹನ್, ಕಳಪೆ ಪಡಿತರವಿದ್ದರೆ ಬೇರೆ ಪಡೆಯುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸದಸ್ಯರಾದ ರವಿ, ರಾಮಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಗತ್ಯವಿರುವ ಕಡೆ ಬಿಸಿ ಊಟ ಕೊಠಡಿ ನಿರ್ಮಿಸಿಕೊಳ್ಳಲು ಜಿ.ಪಂ.ನ 60 ಸಾವಿರ ರೂಪಾಯಿ ಜತೆಗೆ ಉದ್ಯೋಗ ಖಾತ್ರಿಯ 40 ಸಾವಿರ ರೂಪಾಯಿ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಶಾಲೆ ಬಿಟ್ಟ ಒಟ್ಟು 52 ಮಕ್ಕಳ ಪೈಕಿ 22ನ್ನು ಮತ್ತೆ ಸೇರಿಸಲಾಗಿದೆ. ಉಳಿದ ಮಕ್ಕಳನ್ನು ಕರೆತರಲು ಹೋದಾಗ ಪೋಷಕರಿಂದಲೇ ಕೆಟ್ಟ ಮಾತು ಕೇಳಿದ್ದೇವೆ. ಅಷ್ಟಾಗಿಯೂ ಪ್ರಯತ್ನ ಮುಂದುವರಿದಿದೆ ಎಂದ ಬಿಇಒ, ಪ್ರೌಢಶಾಲೆ ಹಂತದ ಮೂವರು ಹೆಣ್ಣು ಮಕ್ಕಳ ಮದುವೆಯಾಗಿದೆ ಎಂಬ ಸಂಗತಿ ತಿಳಿಸಿದರು.

ಪ್ರಭಾರಿ ಇಒ ಆದ ಸಹಾಯಕ ಕೃಷಿ ನಿರ್ದೇಶಕ ಉಮೇಶ್, ಮುಂದಿನ ಮುಂಗಾರಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ, ರಸಗೊಬ್ಬರವನ್ನು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು. ಉಪಾಧ್ಯಕ್ಷ ಭಾನುಪ್ರಕಾಶ್, ತಾ.ಪಂ. ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.