ಕಮಲನಗರ: ಶರಣ ಧರ್ಮವನ್ನು ಅರಿಯಲು ಚೆನ್ನಬಸವಣ್ಣನವರ ವಚನಗಳನ್ನು ಓದಬೇಕು ಎಂದು ನಿವೃತ್ತ ಪಿಎಸ್ಐ ಚಂದ್ರಕಾಂತ ಬಿರಾದಾರ ಹೇಳಿದರು.

ಪಟ್ಟಣದ ಚನ್ನಬಸವ ಪಟ್ಟದೇವರು ಸಾರ್ವಜನಿಕ ಗ್ರಂಥಾಲಯದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶರಣ ಸಂಕುಲದಲ್ಲಿಯೇ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರದು ಅಪರೂಪದ ವ್ಯಕ್ತಿತ್ವ. ವಯಸ್ಸು ಕಿರಿಯದಾದರೂ ಜ್ಞಾನದಲ್ಲಿ ಹಿರಿತನ ಹೊಂದಿದ್ದರಿಂದಲೇ ಅಂದಿನ ಅನುಭವ ಮಂಟಪದ 2ನೇ ಅಧ್ಯಕ್ಷರಾಗಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದರು’ ಎಂದರು.

ಭಾಗೀರಥಿ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಮನೋಜ ಹಿರೇಮಠ ಮಾತನಾಡಿ, ‘ಶರಣ ಸಂದೇಶ ಇಂದಿನ ಯುಗಕ್ಕೆ ಅತ್ಯವಶ್ಯಕವಾಗಿದೆ. ಸತ್ಸಂಗದಿಂದ ಮನಸ್ಸು ಶುದ್ಧ ಮಾಡುವ ಕೇಂದ್ರವಾಗಿದ್ದು ಇಂತಹ ಕಾರ್ಯಕ್ರಮ ಒತ್ತಡದ ಬದುಕಿಗೆ ಅತ್ಯವಶ್ಯಕ. ಶರಣರ, ದಾಸರ, ಸಂತರ ವಾಣಿ ನಮಗೆ ಮುಕ್ತಿಯ ಮಾರ್ಗ ತೋರಿಸಿಕೊಡುತ್ತದೆ’ ಎಂದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಮ್ ಗಳಗೆ ಮಾತನಾಡಿ, ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ; ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ ಎನ್ನುವ ಇವರ ವಚನ ನಮಗೆ ಮಹತ್ತರವಾದ ಸಂದೇಶ ನೀಡುತ್ತದೆ. ಹಿಂದೆಂದಿಗಿಂತಲೂ ಇಂದು ಮಹಾತ್ಮರ ವಚನ, ಪದ, ಅಭಂಗಗಳು ಅತಿ ಅವಶ್ಯಕವಾಗಿದೆ. ಸತ್ಸಂಗ ನಮಗೆ ಹೊಸ ಹುರುಪು, ಉಲ್ಲಾಸ ತಂದು ಕೊಡುತ್ತದೆ’ ಎಂದರು.

ತಾಲ್ಲೂಕು ವ್ಯವಸ್ಥೆ ಪರಿವರ್ತನಾ ಸಮಿತಿಯ ಅಧ್ಯಕ್ಷ ವೈಜಿನಾಥ ವಡ್ಡೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ನಿವೃತ್ತ ಶಿಕ್ಷಕರಾದ ಪ್ರಕಾಶ ಹಿಪ್ಪಳಗಾವೆ, ಪ್ರಶಾಂತ ಖಾನಾಪೂರೆ, ಇಲಾಹಿ ಬಾಗವಾನ್, ಸುನೀಲ ಧರಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.