ಕೊಳಾರ ಪಂಚಾಯಿತಿ ಮಹಾನಗರ ಪಾಲಿಕೆಗೆ ಸೇರಿದೆ. ಆದರೆ ಬಕಚೌಡಿ ಬೆಳ್ಳೂರ ಗ್ರಾಮಗಳನ್ನು ಇದುವರೆಗೆ ಯಾವುದೇ ಪಂಚಾಯಿತಿಗೆ ಸೇರ್ಪಡೆ ಮಾಡಿಲ್ಲ. ಯಾವುದೇ ಕೆಲಸಗಳು ಆಗುತ್ತಿಲ್ಲ. ಬಹಳ ತೊಂದರೆಯಾಗುತ್ತಿದೆ.
ವಿನೋದ್ ಚಿಂತಾಮಣಿ ಬಕಚೌಡಿ ಗ್ರಾಮಸ್ಥ
ಇನ್ನೂ ಯಾವುದೇ ಪಂಚಾಯಿತಿಗೆ ನಮ್ಮ ಗ್ರಾಮ ಸೇರ್ಪಡೆ ಮಾಡಿಲ್ಲ. ಯಾವುದೇ ಕೆಲಸವಿದ್ದರೆ ಎಲ್ಲಿ ಅರ್ಜಿ ಕೊಡಬೇಕು ಗೊತ್ತಾಗುತ್ತಿಲ್ಲ. ಐದಾರು ತಿಂಗಳಿಂದ ಹುಚ್ಚರಂತೆ ಓಡಾಡುತ್ತಿದ್ದೇವೆ. ಅಧಿಕಾರಿಗಳನ್ನು ಕೇಳಿದರೆ ಸಮಂಜಸ ಉತ್ತರ ಸಿಗುತ್ತಿಲ್ಲ.
ಗಣೇಶ ಬಕಚೌಡಿ ಗ್ರಾಮಸ್ಥ
ಮಹಾನಗರ ಪಾಲಿಕೆಗೆ ಸೇರದ ಕೆಲವು ಗ್ರಾಮಗಳನ್ನು ಸಮೀಪದ ಪಂಚಾಯಿತಿಗೆ ಸೇರ್ಪಡೆ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಿಕ್ಕುಳಿದ ಪ್ರಕ್ರಿಯೆ ಅವರ ಹಂತದಲ್ಲಿಯೇ ನಡೆಯಲಿದೆ.
ಡಾ. ಗಿರೀಶ ಬದೋಲೆ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪಂ. ಬೀದರ್
ಮಹಾನಗರ ಪಾಲಿಕೆಗೆ ಕೆಲ ಪಂಚಾಯಿತಿಗಳು ಸೇರಿದ್ದು ಅವುಗಳ ವ್ಯಾಪ್ತಿಯ ಕೆಲ ಗ್ರಾಮಗಳು ಸೇರಿಲ್ಲ. ಅವುಗಳನ್ನು ಸಮೀಪದ ಪಂಚಾಯಿತಿಗಳಿಗೆ ಸೇರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.