ಭಾನುವಾರ, ಏಪ್ರಿಲ್ 18, 2021
33 °C

ಪರಿಶ್ರಮಿಗೆ ಕಾಯಕದಲ್ಲಿಯೇ ನಂಬಿಕೆ: ಶ್ರೀಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್: ‘ಪರಿಶ್ರಮಿಗೆ ದೇವರ ಕೃಪೆ ಇಲ್ಲದಿದ್ದರೂ ನಡೆಯುತ್ತದೆ. ಪ್ರಯತ್ನ ಬಲದಿಂದಲೇ ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸೋಮಾರಿ ಯಾದವರು ದೇವರ ಕೃಪೆಗಾಗಿ ಕಾಯುತ್ತಾರೆ ಆದರೆ ಪರಿಶ್ರಮಿಯಾದವರು ದೇವರಿಗಿಂತ ಕಾಯಕದಲ್ಲಿ ನಂಬಿಕೆ ಇಟ್ಟಿರುತ್ತಾರೆ’ ಎಂದು ಗುರು ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.ಅವರು ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿ.ಮ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನೂತನ ಸ್ನಾತಕೋತ್ತರ ಹಾಗೂ ಸಂಶೋಧನೆ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ‘ಮಾಡುವ ಕೆಲಸದಲ್ಲಿ ಪೂರ್ಣತೆ ಸಾಧಿಸಲು ಪ್ರಯತ್ನಿಸಿ, ಕಷ್ಟಪಟ್ಟು ಮತ್ತು ಇಷ್ಟಪಟ್ಟು ಓದಿ, ಆಮೂಲಾಗ್ರವಾಗಿ ಓದಿ, ಸ್ವಂತ ಮಕ್ಕಳ ಬಗೆಗೆ ಇರುವ ಕಾಳಜಿಯನ್ನು ಪ್ರೀತಿಯನ್ನು ರೋಗಿಗಳ ಮೇಲೂ ಇದ್ದರೆ ನೀವೊಬ್ಬ ಯಶಸ್ವಿ ವೈದ್ಯರಾಗುತ್ತೀರಿ. ಹಣಕ್ಕಿಂತ ಮಾನವೀಯತೆಗೆ ಮಹತ್ವ ಕೊಡಿ’ ಎಂದು ಸಲಹೆ ನೀಡಿದರು.ಇಂದು ಆರಂಭವಾಗಿರುವ ಪಂಚಕರ್ಮ ಹಾಗೂ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗವು ಅಭಿವೃದ್ಧಿ ಹೊಂದಿ, ಮಾದರಿ ಸಂಶೋಧನಾ ಕೇಂದ್ರವಾಗಿ ಬೆಳೆಯಬೇಕಾದರೆ ಇಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವರ್ಗದ ಪ್ರಯತ್ನ ತುಂಬಾ ಅಗತ್ಯ. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಹಾಗೂ ಸಹಕಾರ ಕೊಡಿ ಎಂದು ಆಡಳಿತ ಮಂಡಳಿಗೆ ತಿಳಿಸಿದರು.ನೂತನ ಸ್ನಾತಕೋತ್ತರ ಕೇಂದ್ರದ ಉದ್ಘಾಟನೆಯನ್ನು ಡಾ.ಮಹಾಂತ ಸ್ವಾಮೀಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಎಂ.ವಿ. ಪಾಟೀಲ ವಹಿಸಿದ್ದರು. ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಶಿವಪ್ಪ ಮ್ಯಾಗೇರಿ, ಮಹೇಶಪ್ಪ ಸಜ್ಜನ, ಕಾರ್ಯದರ್ಶಿ ಅಶೋಕ ಬಿಜ್ಜಲ, ವೈಸ್ ಚೇರಮನ್ ಎನ್.ಎಲ್. ಕನ್ನೂರ, ಕಾಲೇಜಿನ ಆಡಳಿತ ಮಂಡಳಿ ಚೇರಮನ್ ಶ್ರೀಕಾಂತ ಹರಿಹರ, ಆರ್.ಪಿ. ಕರಡಿ ಆಯುರ್ವೇದ ಆಸ್ಪತ್ರೆಯ ಚೇರಮನ್ ವಿರೂಪಾಕ್ಷಪ್ಪ ಕಂದಕೂರ ಹಾಗೂ ಪ್ರಾಚಾರ್ಯ ಡಾ.ಕೆ.ಸಿ. ದಾಸ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.