ಮಾನ್ವಿ: ಮನುಕುಲದ ರಕ್ಷಣೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಮಕ್ಕಳಿಗೆ ಪರಿಸರದ ಮಹತ್ವದ ಕುರಿತು ಅರಿವು ಮೂಡಿಸಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಮಹ್ಮದ್ ಅನ್ವರ್ ಹುಸೇನ್ ಮೊಗಲಾನಿ ಹೇಳಿದರು.

ಬುಧವಾರ ಪಟ್ಟಣದ ಮಿಲ್ಟನ್ ಪಬ್ಲಿಕ್ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ನ್ಯಾಯವಾದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಿಪ್ಪಣ್ಣ ಬಾಗಲವಾಡ ವಕೀಲ ಮಾತನಾಡಿ, ಸಸಿಗಳನ್ನು ನೆಡುವುದರ ಜತೆಗೆ ಅವುಗಳನ್ನು ಸರಿಯಾಗಿ ಆರೈಕೆ ಮಾಡಿ ಬೆಳೆಸಲು ಹೆಚ್ಚು ಒತ್ತು ನೀಡಬೇಕು ಎಂದರು.

ವಕೀಲರಾದ ದೂಮಣ್ಣ ನಾಯಕ `ಜನನ ಮರಣ ನೋಂದಣಿ ಕಾಯ್ದೆ' ಹಾಗೂ ಮಲ್ಲಿಕಾರ್ಜುನ ಪಾಟೀಲ್ ಅವರು `ಮಳೆ ನೀರು ಸಂಗ್ರಹಣೆ' ಕುರಿತು ಉಪನ್ಯಾಸ ನೀಡಿದರು.

ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಚೆನ್ನನಗೌಡ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಗುಮ್ಮಾ ಬಸವರಾಜ, ಬಿ.ಕೆ.ಅಮರೇಶಪ್ಪ, ಹನುಮಂತಪ್ಪ ನಾಯಕ ಮುಷ್ಟೂರು, ಬಸವರಾಜ ಪಾಟೀಲ್ ಡೊಣಮರಡಿ, ರಾಜಾ ಶ್ಯಾಮಸುಂದರ ನಾಯಕ, ಮಿಲ್ಟನ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಡಿ.ವಿ.ಪ್ರಕಾಶ, ಅಶೋಕ ಚಕ್ರವರ್ತಿ, ಪುರಸಭೆ ಮಾಜಿ ಸದಸ್ಯ ಎಸ್.ವೆಂಕೋಬ ಉಪಸ್ಥಿತರಿದ್ದರು.
ದೂಮಣ್ಣ ನಾಯಕ ನಿರೂಪಿಸಿದರು. ಅಂಬಿಕಾನುಲಿ ಪ್ರಾರ್ಥನೆ ಗೀತೆ ಹಾಡಿದರು. ಜಯಶ್ರೀ ವಕೀಲ ವಂದಿಸಿದರು.

ಜಾಗೃತಿ ಅಗತ್ಯ...
ಮಾನ್ವಿ: ಹೆಚ್ಚುತ್ತಿರುವ ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯ ಆತಂಕಕಾರಿ ಸಂಗತಿಯಾಗಿವೆ. ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದರು.

ಬುಧವಾರ ಪಟ್ಟಣದ ಕಾಕತೀಯ ಶಾಲಾ ಅವರಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ರಾಷ್ಟರಕವಿ ಕುವೆಂಪು ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ವಲಿಬಾಬು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ.ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಮರಿದೇವರು ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಎಸ್.ಕೆ.ಕಾಂಬ್ಳೆ ಹಾಗೂ ಶುಕ್ರಸಾಬ, ಕಾಕತೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಪ್ರಸಾದ, ಕಾರ್ಯದರ್ಶಿ ಬಲರಾಮಕೃಷ್ಣ, ಬಸವ ಕೇಂದ್ರದ ಅಧ್ಯಕ್ಷ ದೇವೇಂದ್ರ ದುರ್ಗದ್, ಆರ್.ಮುತ್ತುರಾಜ ಶೆಟ್ಟಿ, ಕರವೇ ಅಧ್ಯಕ್ಷ ಡಿ.ಬಸನಗೌಡ, ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರೀಫ್ ಮಿಯಾ ಚಾಗಬಾವಿ, ಯಾದವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಣ್ಣ ಯಾದವ್, ಕಿಶೋರಕುಮಾರ ಟಿಪ್ಪರ್ಕರ್ ಉಪಸ್ಥಿತರಿದ್ದರು.

ಪತಂಜಲಿ ಯೋಗ ಸಮಿತಿಯ ತಾಲ್ಲೂಕು ಪ್ರಭಾರಿ ಸಂಗನಗೌಡ ಸ್ವಾಗತಿಸಿದರು. ವಿಜಯರಾವ್ ಕುಪನೇಶಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಮೌನೇಶ ವಂದಿಸಿದರು.

ನಮ್ಮೆಲ್ಲರ ಹೊಣೆ...
ಲಿಂಗಸುಗೂರ: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ನೀರು, ಗಾಳಿ ಸೇರಿದಂತೆ ಪರಿಸರವನ್ನು ಕಲುಷಿತಗೊಳಿಸದಂತೆ ಎಚ್ಚರಿಕೆ ವಹಿಸಬೇಕು. ಪರಿಸರದಲ್ಲಿನ ಗಿಡಮೆಗಳನ್ನು ನಾಶ ಮಾಡುತ್ತಿರುವುದು ಜೀವ ಸಂಕುಲಕ್ಕೆ ಸಂಕಷ್ಟ ಬಂದೊದಗಿದೆ. ಅಂತೆಯೆ ಪ್ರತಿಯೋರ್ವರು ಗಿಡಮರಗಳನ್ನು ನೆಡುವ ಮೂಲಕ ಸಂರಕ್ಷಿಸಿ ಪರಿಸರ ರಕ್ಷಣೆ ಮಾಡುವುದು ಅತ್ಯವಶ್ಯವಾಗಿದೆ ಎಂದು ಡಿವೈಎಸ್ಪಿ ಅನಿತಾ ಹದ್ದಣ್ಣವರ್ ಹೇಳಿದರು.

ಬುಧವಾರ ಕೆಂಬ್ರಿಡ್ಜ್ ಪ್ರೌಢಶಾಲೆಯ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜೂನ್-5ರಂದು ಮಾತ್ರ ಪರಿಸರದ ಬಗ್ಗೆ ಜಗೃತಿ ಮೂಡಿಸುವ ಅಗತ್ಯವಿಲ್ಲ. ಪ್ರತಿನಿತ್ಯ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು.

ಮನೆಗೊಂದು ಮಗು ಹೇಗೆ ಮುಖ್ಯವೊ ಅಷ್ಟೆ ಮಗುವಿಗೊಂದು ಮರ ಬೆಳೆಸುವುದು ಮುಖ್ಯ. ಕೆಂಬ್ರಿಡ್ಜ್ ಶಾಲೆಯ ಹಸಿರು ವಾತಾವರಣ ಖುಷಿ ತಂದಿದೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಸಂಸ್ಥೆಯ ನಿರ್ದೇಶಕ ಮಹಾಂತೇಶ ಗೌಡರ, ಶಾಲಾ ಮಕ್ಕಳಾದ ಸುಮನಾ ನಂದಿಕೋಲಮಠ, ಶ್ವೇತಾ ಮಾತನಾಡಿ, ಗಿಡಮರಗಳ ಪಾಲನೆ, ಪೋಷಣೆ ಮಾಡುವುದರಿಂದ ಜೀವಜಗತ್ತಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕೆಂಬ್ರಿಡ್ಜ್ ಶಾಲಾ ಆವರಣಕ್ಕೆ ಬಂದರೆ ಸಾಕು ಹಸಿರು ಹೊದಿಕೆಯ ಉದ್ಯಾನವನ, ಗಿಡಮರಗಳು ಮನಸ್ಸಿಗೆ ಖುಷಿ ತಂದುಕೊಡುತ್ತವೆ. ಪ್ರತಿ ಮನೆ, ಶಾಲಾ ಆವರಣಗಳಲ್ಲಿ ಇಂತಹ ವಾತಾವರಣ ನಿರ್ಮಾಣದ ಅಗತ್ಯವಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಶ್ಯಾಮಣ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಪರಿಸರದ ಮಹತ್ವದ ಕುರಿತು ಕಿರು ನಾಟಕ ಪ್ರದರ್ಶನ ನಡೆಸಿಕೊಟ್ಟರು.

ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಆಕಾಶ ಕಿರಗಿ ಕಾರ್ಯಕ್ರಮ ನಿರೂಪಿಸಿದರು. ಅಜಯಕುಮಾರ ಸ್ವಾಗತಿಸಿ ವಂದಿಸಿದರು.

ಆಹಾರ: ಮಿತ ಬಳಕೆ ಇರಲಿ...
ಕವಿತಾಳ: ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು, ಗಿಡ ಮರಗಳ ರಕ್ಷಣೆ ಮಾತ್ರ ಪರಿಸರ ಸಂರಕ್ಷಣೆ ಆಗಲಾರದು. ಆಹಾರ ಪದಾರ್ಥಗಳ ಮಿತ ಬಳಕೆ ಮಾಡುವುದು ಪರಿಸರ ರಕ್ಷಣೆಗೆ ನಾವು ನೀಡುವ ಬಹುದೊಡ್ಡ ಕೊಡುಗೆ ಎಂದು ಮುಖ್ಯಗುರು ಎಚ್.ಮಲ್ಲಪ್ಪ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಅನಗತ್ಯವಾಗಿ ಆಹಾರ ಪದಾರ್ಥಗಳನ್ನು ಹಾಳು ಮಾಡದೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕು ಎನ್ನುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಚಿಸಿ, ಸೇವಿಸಿ ಮತ್ತು ಉಳಿಸಿ ಎನ್ನುವ ಘೋಷವಾಕ್ಯದೊಂದಿಗೆ ಪರಿಸರ ದಿನಾಚರಣೆಯ ಮಹತ್ವ ಹೆಚ್ಚಿಸಲಾಗಿದೆ ಎಂದರು. ವಿಜ್ಞಾನ ಶಿಕ್ಷಕ ಜಿ.ಎಸ್.ಸುಂಕದ್ ಮತ್ತು ಲಿಂಗರಾಜ ಗದ್ದಿನಕೇರಿ ಮಾತನಾಡಿದರು. ಪ್ರಕಾಶ, ಶೇಖ್ ಹಮೀದ್, ಶಾಲಿನಿ ಕುಲ್ಕರ್ಣಿ, ಮಂಜುಳಾ ಅಂಗಡಿ, ಇಂಗಳಾಂಬ ಕುಲ್ಕರ್ಣಿ ವೇದಿಕೆ ಮೇಲಿದ್ದರು. ಶಿಕ್ಷಕ ಮಹೇಶ ನಂದಿಕೋಲಮಠ ನಿರೂಪಿಸಿದರು.

ಕಸದ ತೊಟ್ಟೆ ನಿರ್ಮಾಣ...
ಮಸ್ಕಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇದೀಗ ಸಾರ್ವಜನಿಕರು ಕಸ ಚೆಲ್ಲುವ ಸ್ಥಳಗಳಲ್ಲಿ ಕಸದ ತೊಟ್ಟೆಗಳನ್ನು ನಿರ್ಮಿಸುವ ಮೂಲಕ ಗ್ರಾಮದ ಸ್ವಚ್ಛತೆಗೆ ಮುಂದಾಗಿದೆ.

ಹಲವಾರು ವರ್ಷಗಳಿಂದ ಪಟ್ಟಣದ ಹಳೇಯ ಬಸ್ ನಿಲ್ದಾಣದ ಖಾಲಿ ಜಾಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲಿ, ವಾತಾವರಣ ಗಲೀಜು ಮಾಡುತ್ತಿದ್ದರು. ಈ ಸ್ಥಳಗಳಲ್ಲಿ ಕಸದ ತೊಟ್ಟೆಗಳನ್ನು ನಿರ್ಮಿಸುವಂತೆ ಹಲವಾರು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ ಪ್ರಯೋಜವಾಗಿರಲಿಲ್ಲ.

ಇದೀಗ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟೆಗಳನ್ನು ನಿರ್ಮಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದೆ. ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ ನೇತೃತ್ವದಲ್ಲಿ ಈಗಾಗಲೇ 5 ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟೆಗಳನ್ನು ನಿರ್ಮಿಸಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಕಸದ ತೊಟ್ಟೆಗಳನ್ನು ನಿರ್ಮಿಸುವ ಮೂಲಕ ರಸ್ತೆಯ ಮೇಲೆ ಕಸ ಚೆಲ್ಲದಂತೆ ಮಾಡಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ ಹಾಗೂ ಅಭಿವೃದ್ಧಿ ಅಧಿಕಾರಿ ಹನುಮೇಶ ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು.

ಕಸದ ತೊಟ್ಟೆಯಲ್ಲಿ ಕಸ ಚೆಲ್ಲದೆ ಮತ್ತೆ ರಸ್ತೆಯ ಮೇಲೆ ಚೆಲ್ಲಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.