ಬೆಂಗಳೂರು: ನಗರವನ್ನೇ ತಲ್ಲಣಗೊಳಿಸಿದ್ದ `ಡೆಲ್~ ಬಿಪಿಒ ಕಂಪೆನಿಯ ಉದ್ಯೋಗಿ ಪಾಯಲ್ ಸುರೇಖಾ (29) ಅವರ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಗೆ ಒಪ್ಪಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಅಪರಾಧ ವಿಭಾಗದ ಡಿಸಿಪಿಯವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸಿಸಿಬಿಯ ಎಸಿಪಿ ಜಿತೇಂದ್ರನಾಥ್ ಅವರಿಗೆ ನ್ಯಾಯಮೂರ್ತಿ ಎನ್.ಆನಂದ ಆದೇಶಿಸಿದ್ದಾರೆ. `ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ವಸ್ತುಗಳು ಪಾಯಲ್ ಅವರ ಪತಿಯ ಸ್ನೇಹಿತ ಜೇಮ್ಸ ಕುಮಾರನದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ. ಸ್ಥಳದಲ್ಲಿ ಸಿಕ್ಕ ಜಾಕೆಟ್ ಹಾಗೂ ಕೂದಲು ಜೇಮ್ಸ ಅವನದ್ದೇ ಹಾಗೂ ಅದರ ಮೇಲೆ ಇದ್ದ ರಕ್ತದ ಕಲೆಗಳು ಪಾಯಲ್ ಅವರದ್ದು ಎಂದು ಪರೀಕ್ಷೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸುವಂತೆ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

2010ರ ಡಿಸೆಂಬರ್ನಲ್ಲಿ ಜೆ.ಪಿ.ನಗರ ಏಳನೇ ಹಂತದ ಲಕ್ಷ್ಮಿ ಲೇಔಟ್ನಲ್ಲಿ ಹಾಡಹಗಲೇ ಪಾಯಲ್ ಅವರ ಕೊಲೆ ನಡೆದಿತ್ತು.

ಬೆಂಗಳೂರು ಹಾಗೂ ಒಡಿಶಾದಲ್ಲಿ ಪಾಯಲ್ ಅವರ ಪತಿ ಅನಂತನಾರಾಯಣ್ ಮಿಶ್ರಾ ಜಿಮ್ ಕೇಂದ್ರ ನಡೆಸುತ್ತಿದ್ದರು. ಜೇಮ್ಸ ಕೂಡ ಅಲ್ಲಿಯೇ ಕೆಲಸದಲ್ಲಿದ್ದ. ಆದರೆ ಆತ ಅವ್ಯವಹಾರದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಆತನನ್ನು ಅನಂತ್ ಕೆಲಸದಿಂದ ತೆಗೆದಿದ್ದರು. ಈ ಸಿಟ್ಟಿನ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನುವುದು ಪೊಲೀಸರ ಹೇಳಿಕೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಬೇರೆ ತನಿಖಾದಳಕ್ಕೆ ಒಪ್ಪಿಸುವಂತೆ ಕೋರಿ ಸಿಬಿಐ, ಹೈಕೋರ್ಟ್ ಮೊರೆ ಹೋಗಿತ್ತು. ತನಿಖೆಯನ್ನು ಸಿಸಿಬಿ ಮುಂದುವರಿಸಲು ಸಿದ್ಧವಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ವಾದಿಸಿದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿತು.

ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಜೇಮ್ಸ ಸಲ್ಲಿಸಿರುವ ಅರ್ಜಿಯೊಂದು ಇತ್ಯರ್ಥಕ್ಕೆ ಬಾಕಿ ಇದೆ.

ಮೆಟ್ರೊ: ಕಾಂಕ್ರೀಟ್ ಮಿಶ್ರಣಕ್ಕೆ ತಡೆ
`ನಮ್ಮ ಮೆಟ್ರೊ~ ಯೋಜನೆಗಾಗಿ ಕನಕಪುರ ಮುಖ್ಯ ರಸ್ತೆಯಲ್ಲಿರುವ `ರೆಡಿಮಿಕ್ಸ್ ಕಾಂಕ್ರೀಟ್~ (ಆರ್ಎಂಸಿ) ಪೂರೈಕೆ ಮಾಡುವ ಘಟಕವು ತನ್ನೆಲ್ಲ ಕಾರ್ಯಗಳನ್ನು ಸದ್ಯ ನಿಲ್ಲಿಸುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

`ಭೂಮಿ ಜಿಯೊ ಎಂಜಿನಿಯರಿಂಗ್ ಲಿಮಿಟೆಡ್~ ಕಂಪೆನಿಯು ಹಸಿರು ವಲಯದಲ್ಲಿ ಘಟಕ ಸ್ಥಾಪನೆ ಮಾಡಿ ಕಾರ್ಯ ಆರಂಭಿಸಿದೆ ಎಂದು ದೂರಿ `ಸುವಿಧಾ ರಿಟೈರ್ಮೆಂಟ್ ವಿಲೇಜ್~ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಯಾವುದೇ ಸಂಬಂಧಿತ ಇಲಾಖೆಗಳ ಅನುಮತಿ ಪಡೆದುಕೊಳ್ಳದೇ ಈ ಘಟಕ ಸ್ಥಾಪನೆ ಮಾಡಲಾಗಿದೆ. ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎನ್ನುವುದು ಅರ್ಜಿದಾರರ ದೂರಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ಇದುವರೆಗೆ ಕ್ರಮ ತೆಗೆದುಕೊಳ್ಳದ ಕ್ರಮಕ್ಕೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. `ಇದು ಮಾಲಿನ್ಯ ನಿಯಂತ್ರಣ ಮಂಡಳಿ ಅಲ್ಲ. ಬದಲಿಗೆ ಇದನ್ನು ಮಾಲಿನ್ಯ ಮಂಡಳಿ ಅಥವಾ ಮಾಲಿನ್ಯ ಉತ್ತೇಜನ ಮಂಡಳಿ ಎಂದರೆ ತಪ್ಪಾಗಲಿಕ್ಕಿಲ್ಲ~ ಎಂದರು.

`ಇಲ್ಲಿ ಯಾವುದೇ ರಾಸಾಯನಿಕ ತಯಾರು ಮಾಡುತ್ತಿಲ್ಲ~ ಎಂದು ಮಂಡಳಿ ಪರ ವಕೀಲರು ಸಮಜಾಯಿಷಿ ನೀಡಿದರು. ಅದಕ್ಕೆ ಕೋಪಗೊಂಡ ನ್ಯಾಯಮೂರ್ತಿಗಳು, `ಮೆಟ್ರೊ ಯೋಜನೆಯಲ್ಲಿ ಗಣ್ಯ ವ್ಯಕ್ತಿಗಳು ಇರುವ ಹಿನ್ನೆಲೆಯಲ್ಲಿ ನೀವು ಹೀಗೆ ವಾದ ಮಾಡುತ್ತಿದ್ದೀರಿ ಎನ್ನುವುದು ನಮಗೆ ಚೆನ್ನಾಗಿ ಗೊತ್ತು. ಮೆಟ್ರೊ ಯೋಜನೆ ಎಂದ ಮಾತ್ರಕ್ಕೆ ಕಾನೂನು ಬೇರೆಯಾಗುತ್ತದೆಯೇ, ನೀವು (ಮಂಡಳಿ) ಮಾಲಿನ್ಯ ತಡೆಗೆ ಕ್ರಮ ತೆಗೆದುಕೊಳ್ಳುವುದು ಬಿಟ್ಟು, ಅದಕ್ಕೆ ಉತ್ತೇಜನ ನೀಡುತ್ತಿರುವುದು ವಿಷಾದಕರ~ ಎಂದು ನ್ಯಾಯಮೂರ್ತಿಗಳು ಹೇಳಿದರು.

`ಆಟೊ ಪರವಾನಗಿ ವರ್ಗ ಸಲ್ಲ~
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಟೊರಿಕ್ಷಾ ಚಾಲನೆಗೆ ನೀಡಲಾಗುವ ಪರವಾನಗಿಯನ್ನು (ಪರ್ಮಿಟ್) ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸಬಾರದು ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.

ಒಂದು ವೇಳೆ ಆಟೊರಿಕ್ಷಾ ಬೇರೆಯವರಿಗೆ ಮಾರಾಟ ಮಾಡಿದರೂ, ಪರವಾನಗಿಯನ್ನು ಮಾತ್ರ ಸರ್ಕಾರಕ್ಕೆ ವಾಪಸು ನೀಡಬೇಕು. ಆಟೊ ಖರೀದಿ ಮಾಡಿದವರು ಅದನ್ನು ಓಡಿಸಬೇಕಿದ್ದರೆ ಸಾರಿಗೆ ಇಲಾಖೆಯಿಂದಲೇ ಹೊಸದಾಗಿ ಪರವಾನಗಿ ಪಡೆದುಕೊಳ್ಳುವುದು ಈ ಆದೇಶದಿಂದ ಇನ್ನು ಮುಂದೆ ಕಡ್ಡಾಯ.

ಪರವಾನಗಿ ಮಾರಾಟ ನಡೆಯುತ್ತಿರುವ ಕಾರಣ, ಅದರಿಂದ ದುರುಪಯೋಗ ಆಗುತ್ತಿದೆ ಎಂದು ದೂರಿ `ಆಟೊರಿಕ್ಷಾ ಚಾಲಕರ ಸೌಹಾರ್ದ ಸಹಕಾರ ಸಂಘ~ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ.ಎಸ್.ಪಾಟೀಲ್ ಅವರು ನಡೆಸಿದರು.

`ಪರವಾನಗಿಯನ್ನು ಕುಟುಂಬ ವರ್ಗದವರಿಗೂ ಮಾರಾಟ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಆಟೊ ಮಾಲೀಕ ಸತ್ತ ನಂತರ ಮಾತ್ರ ಅದು ಆತನ ಕಾನೂನು ಹಕ್ಕುದಾರನಿಗೆ ವರ್ಗಾವಣೆಗೊಳ್ಳುತ್ತದೆ ಅಷ್ಟೇ. ಆದರೆ ಈಗ ಪರವಾನಗಿ ಬೇಕಾಬಿಟ್ಟೆಯಾಗಿ ಮಾರಾಟ ಮಾಡಲಾಗುತ್ತಿದೆ~ ಎಂಬ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ಅವರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.