ಪಾರ್ಕಿನ್ಸನ್ ರೋಗಿಗಳಿಗೆ ಏರೋಬಿಕ್ಸ್ ಮದ್ದು!

ಪಾರ್ಕಿನ್ಸನ್ ರೋಗಿಗಳಿಗೊಂದು ಶುಭ ಸುದ್ದಿ. ಏರೋಬಿಕ್ಸ್ ಸೇರಿದಂತೆ ವೇಗದ ನಡಿಗೆಯು ಪಾರ್ಕಿನ್ಸನ್ ರೋಗಿಗಳಲ್ಲಿ ಕುಗ್ಗುತ್ತಿರುವ ಮೆದುಳನ್ನು ರಕ್ಷಿಸಲು ನೆರವಾಗುತ್ತದೆಯಂತೆ. ಹೌದು. ಏರೋಬಿಕ್ಸ್ ಅಭ್ಯಾಸ ಪಾರ್ಕಿನ್ಸನ್ ರೋಗದ ಗತಿಯನ್ನು ನಿಧಾನಗೊಳಿಸಲಿದೆ ಎನ್ನುತ್ತಾರೆ ನ್ಯೂಯಾರ್ಕ್ನ ನರರೋಗ ತಜ್ಞರು.
ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ರೋಗ ಇದಾಗಿದ್ದು, ಪಾರ್ಕಿನ್ಸನ್ ರೋಗಿಗಳಿಗೆ ಏರೋಬಿಕ್ ವ್ಯಾಯಾಮ ಹಾಗೂ ಫಿಟ್ನೆಸ್ ಬಗ್ಗೆ ಉತ್ತೇಜಿಸಬೇಕು ಎಂದು ಮಿನ್ನೇಸೊಟದ ಮೆಯೊ ಕ್ಲಿನಿಕ್ನ ನರರೋಗ ತಜ್ಞ ಜೆ. ಎರಿಕ್ ಅಹಲ್ಸ್ಕೋಗ್ ಶಿಫಾರಸು ಮಾಡುತ್ತಾರೆ.
ಏರೋಬಿಕ್ಸ್ನಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮವಾಗುತ್ತದೆ. ಇದರಿಂದ ದೇಹದಿಂದ ಹೆಚ್ಚಿನ ಬೆವರು ಆಚೆ ಹೋಗುತ್ತದೆ. ಅಲ್ಲದೆ, ದೇಹಕ್ಕೆ ಆಯಾಸ ಹೆಚ್ಚಾಗುತ್ತದೆ. ಇಂಥ ಆಯಾಸ ಮೆದುಳಿಗೆ ಒಳ್ಳೆಯದು ಎಂಬುದು ಎರಿಕ್ ಸಲಹೆ.
ಬಿರುಸಿನ ನಡಿಗೆ ಹಾಗೂ ಎಲಿಪ್ಟಿಕಲ್ ಯಂತ್ರದ ಬಳಕೆಯು ಮೆದುಳು ಕುಗ್ಗುವಿಕೆ ವಿರುದ್ಧ ಕೆಲಸ ಮಾಡುತ್ತದೆ. ಆದರೆ ಸ್ಟ್ರೆಚಿಂಗ್ ಅಥವಾ ಬ್ಯಾಲೆನ್ಸ್ ವ್ಯಾಯಾಮ ಇದಕ್ಕೆ ಸಹಕಾರಿ ಅಲ್ಲ ಎನ್ನುತ್ತಾರೆ ಎರಿಕ್.
ಈ ರೀತಿಯ ವ್ಯಾಯಮಗಳು ಪಾರ್ಕಿನ್ಸನ್ ರೋಗಿಗಳಿಗೆ ಸಹಾಯವಾಗಲಿವೆ. ಕಾಯಿಲೆಯ ಗತಿ ಕಡಿಮೆ ಮಾಡುವಲ್ಲಿ ನೆರವಾಗಲಿವೆ. ಅಲ್ಲದೇ ಬುದ್ಧಿಮಾಂದ್ಯತೆಯಿಂದ ಬಳಲುವವರಿಗೂ ಇದು ಸಹಾಯವಾಗಲಿದೆ. ಏರೋಬಿಕ್ಸ್ ವ್ಯಾಯಾಮವು ಮೆದುಳಿಗೆ ರಕ್ಷಣಾತ್ಮಕ ಪರಿಣಾಮ ಬೀರಲಿದೆ.
ಏರೋಬಿಕ್ಸ್ನಿಂದ ಮೆದುಳಿನಲ್ಲಿ ಸಣ್ಣ ಪ್ರೋಟಿನ್ಗಳು ಉತ್ಪಾದನೆಯಾಗುತ್ತವೆ. ಈ ಪ್ರೋಟಿನ್ಗಳು ಮೆದುಳಿನ ನರಗಳ ಆರೋಗ್ಯಕ್ಕೆ ಸಹಕಾರಿ ಎಂಬುದು ಎರಿಕ್ ಅವರ ಮಾತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.