ದಕ್ಷಿಣ ಫ್ರಾನ್ಸ್ನ ಪುಟ್ಟ ಹಳ್ಳಿ ವಲ್ಲೌರಿಸ್. ಹಾಗೆಂದರೆ ಚಿನ್ನದ ಕಣಿವೆ ಎಂದರ್ಥ. ಅಲ್ಲಿನ ಜೇಡಿ ಮಣ್ಣಿನಲ್ಲಿ ಚಿನ್ನದ ಅಂಶ ಹೆಚ್ಚಿದ್ದರಿಂದ ಈ ಹೆಸರು ಬಂದಿದೆ. ಎರಡನೇ ಯುದ್ಧಕ್ಕೂ ಮುನ್ನ ಅಲ್ಲಿನ ಮಣ್ಣಿಗೂ ಚಿನ್ನದಂಥ ಬೆಲೆ. ಮಡಿಕೆಗೆ ಹೇಳಿ ಮಾಡಿಸಿದ ಮಣ್ಣು ಅದು. ಯುದ್ಧದ ಸಂದರ್ಭದಲ್ಲಿ ಲೋಹದ ಪಾತ್ರೆಗಳ ಬಳಕೆ ಹೆಚ್ಚಿತು. ವಲ್ಲೌರಿಸ್ ಮಣ್ಣು ಬೆಲೆ ಕಳೆದುಕೊಂಡಿತು. ನೂರಾರು ಸಂಖ್ಯೆಯಲ್ಲಿದ್ದ ಕುಂಬಾರರು ಬೆರಳೆಣಿಕೆಯಷ್ಟಾದರು.

ಯುದ್ಧ ಮುಗಿದ ಬಳಿಕ 1946ರಲ್ಲಿ ಸ್ಪೇನ್ನ ಕಲಾವಿದ ಪಾಬ್ಲೊ ಪಿಕಾಸೊ ಇಲ್ಲಿಗೆ ಸಮೀಪದ ನಗರವೊಂದಕ್ಕೆ ಬೇಸಿಗೆ ಕಳೆಯಲು ಬಂದರು. ಅವರ ಖ್ಯಾತಿ ಅಷ್ಟರಲ್ಲಾಗಲೇ ಉತ್ತುಂಗಕ್ಕೇರಿತ್ತು. ಒಂದು ದಿನ ಗೆಳೆಯರ ಒತ್ತಾಯದ ಮೇರೆಗೆ ವಲ್ಲೌರಿಸ್ ನೋಡಲು ಬಂದರು.

ಕುಂಬಾರಿಕೆಯ ಜತೆಗೆ ಬೆರೆತುಕೊಂಡಿದ್ದ ಚಿತ್ರಕಲೆಯನ್ನು ನೋಡಿದಾಗ ಅವರ ಕಣ್ಣು ಅರಳಿದವು. ಆ ವರ್ಷ ಅವರ ಮನಸ್ಸೆಲ್ಲಾ ವಲ್ಲೌರಿಸ್ ಮೇಲೆಯೇ. ಕೆಂಪು ಜೇಡಿಮಣ್ಣಿನೊಂದಿಗೆ ವಿವಿಧ ಪ್ರಯೋಗ. ರವಿಯತ್ತ ಸೂರ್ಯಕಾಂತಿ ತಿರುಗಿದಂತೆ ಕಲಾಸಕ್ತರ ಗಮನ ಪಿಕಾಸೊ ಇದ್ದೆಡೆಗೆ ಹೋಯಿತು. ವಲ್ಲೌರಿಸ್ನ ಕುಂಬಾರಿಕೆಗೆ ಅಕ್ಷರಶಃ ಜೀವ ಬಂತು.

`ಗೆರೆಗಳ ಮಾಂತ್ರಿಕ~ ವಲ್ಲೌರಿಸ್ನ ಸುತ್ತಮುತ್ತ ಉಳಿದುಕೊಳ್ಳುವುದು ಸಾಮಾನ್ಯವಾಗಿತ್ತು. ಕುಂಬಾರರ ಮಕ್ಕಳಿಗೆ `ಪಿಕಾಸೊ ಅಂಕಲ್~ ಪರಿಚಿತರಾದರು. ತಮ್ಮ ಬೀದಿಗಳಲ್ಲಿ ಅಲೆಯುವ ಅವರೊಬ್ಬ ದೊಡ್ಡ ಕಲಾವಿದ ಎಂಬುದನ್ನು ತಿಳಿಯಲು ಪುಟಾಣಿಗಳಿಗೆ ಹೆಚ್ಚುಕಾಲ ಹಿಡಿಯಲಿಲ್ಲ. ಇತ್ತ ಮಹಾನ್ ಕಲಾವಿದನ ಪ್ರಯೋಗಗಳ ಅನುಕರಣೆ ಜೋರಾಯಿತು. ಕಡೆಗೊಂದು ದಿನ ಹಳ್ಳಿಯ ಚೌಕದಲ್ಲಿ ಅವರು ತಯಾರಿಸಿದ ಪ್ರತಿಮೆ `ಮ್ಯಾನ್ ವಿತ್ ಎ ಶಿಪ್~ ಸ್ಥಾಪನೆಯಾಯಿತು.

ಪಿಕಾಸೊಗೆ ಗೂಳಿಕಾಳಗ ಎಂದರೆ ಅಪಾರ ವ್ಯಾಮೋಹ. ತಾಯ್ನಾಡು ಸ್ಪೇನ್ ತೊರೆದು ಎಷ್ಟೋ ವರ್ಷ ಕಳೆದರೂ ಗೂಳಿ ಕಾಳಗದ ನೆನಪುಗಳು ಹಸಿಯಾಗಿದ್ದವು. ದಕ್ಷಿಣ ಫ್ರಾನ್ಸ್ ಹಾಗೂ ರೋಮ್ ಗಡಿನಾಡಿನಲ್ಲಿ ನಡೆಯುವ ಕಾಳಗಗಳನ್ನು ಅವರೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆಗೆಲ್ಲಾ ಅವರ ಕುಂಚ ಕೂಡ ಗೂಳಿಯಂತೆ ಮುನ್ನುಗ್ಗತೊಡಗಿತು. ಗೂಳಿ ಕಾಳಗ ಅವರ ಕೈಯಲ್ಲಿ ಅಮೂರ್ತ ಲೋಕಕ್ಕೆ ಜಿಗಿಯಿತು.

ಸರಿ ತಮ್ಮೂರಿಗೆ ಎಷ್ಟೆಲ್ಲಾ ಬದಲಾವಣೆ ತಂದ ಮಹಾಶಯನಿಗೆ ಏನಾದರೂ ಕೊಡುಗೆ ನೀಡಬೇಕಲ್ಲಾ? ಪಿಕಾಸೊ ಅವರ 85ನೇ ಹುಟ್ಟುಹಬ್ಬ ಬೇರೆ ಹತ್ತಿರ ಬರುತ್ತಿತ್ತು. ಮಕ್ಕಳು ಕೂಡ ಕುಂಚ ಹಿಡಿದು ತಯಾರಾದರು. ಗೂಳಿಕಾಳಗ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಚಿತ್ರ ರಚಿಸಿದರು. ನೂರಕ್ಕೂ ಹೆಚ್ಚು ಕೃತಿಗಳು ಮೂಡಿದವು. ಮಕ್ಕಳ ಕೊಡುಗೆ ಕಂಡು ಪಿಕಾಸೊ ಹಿರಿ ಹಿರಿ ಹಿಗ್ಗಿದರು. ಅವುಗಳಲ್ಲಿ ಇಷ್ಟದ ಚಿತ್ರಗಳನ್ನು ಆಯ್ದು ತನ್ನ ಕಲಾಕೃತಿಗಳೊಡನೆ ಪ್ರಕಟಿಸಬೇಕೆಂದು ಹಂಬಲಿಸಿದರು.

ಪರಿಣಾಮ ನ್ಯೂಯಾರ್ಕ್ನ ಪ್ರಸಿದ್ಧ ಪ್ರಕಾಶನ ಸಂಸ್ಥೆಯೊಂದು `ಚಿಲ್ಡ್ರನ್ ಹೋಮೇಜ್ ಟು ಪಿಕಾಸೊ~ ಎಂಬ ಕೃತಿ ಹೊರತಂದಿದೆ. ಪಿಕಾಸೊ ಅವರ ಐವತ್ತೆರಡು ಕೃತಿಗಳ ಜೊತೆಗೆ ಮಕ್ಕಳ 48 ಕೃತಿಗಳು ಇದರಲ್ಲಿ ಅಡಕವಾಗಿವೆ. ಒಬ್ಬ ಕಲಾವಿದನಿಗೆ ಇದ್ದಕ್ಕಿಂತ ದೊಡ್ಡ ಉಡುಗೊರೆ ಇನ್ನೊಂದಿರಲು ಸಾಧ್ಯವಿಲ್ಲ ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.