2001ರ ಆಸುಪಾಸು. ಗುಜರಾತ್ನ ನರ್ಮಾದಾ ಬಚಾವೋ ಆಂದೋಲನ ಉತ್ತುಂಗದಲ್ಲಿದ್ದ ಕಾಲ. ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಸೇರಿದಂತೆ ಅನೇಕ ಉತ್ಸಾಹಿಗಳು ರಾಜ್ಯಕ್ಕೂ ಬಂದು ನರ್ಮದೆಯ ಮಹತ್ವವನ್ನು ಸಾರುತ್ತಿದ್ದ ಕಾಲ. ಬುದ್ಧಿಜೀವಿಗಳು, ಸಾಕ್ಷ್ಯಚಿತ್ರ ತಯಾರಕರು ಆಂದೋಲನದ ಬಗ್ಗೆ ಅರಿವು ಮೂಡಿಸುತ್ತಿದ್ದರು.
ನರ್ಮದೆ ಕುರಿತು ದೇಶದ ಖ್ಯಾತ ಸಾಕ್ಷ್ಯಚಿತ್ರ ತಯಾರಕ ಆನಂದ್ ಪಟವರ್ಧನ್ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದರು. ಆಗ ಬೆಂಗಳೂರಿನ ಕೆಲವು ಉತ್ಸಾಹಿಗಳಿಗೆ ತಾವೂ ಯಾಕೆ ಒಂದು ಮಾಧ್ಯಮ ಸಂಘಟನೆ ರೂಪಿಸಬಾರದು ಎಂಬ ಕನಸು ಮೊಳೆಯಿತು. ಆ ಕನವರಿಕೆಯ ಫಲವೇ `ಪೆಡೆಸ್ಟ್ರಿಯನ್ ಪಿಕ್ಚರ್ಸ್~. ಸಿನಿಮಾ ಕೇವಲ ನೋಡಿ ಮರೆಯುವಂತಹ ಮಾಧ್ಯಮವಾಗಬಾರದು.

ಬದಲಿಗೆ ಅದು ಚರ್ಚೆಯ ಸಾಧನವಾಗಬೇಕು ಎಂಬುದೇ ಆ ಯುವಕರ ಒತ್ತಾಸೆ. ಅದರಲ್ಲಿಯೂ ಮುಖ್ಯವಾಗಿ ಹಳ್ಳಿಗಳಿಗೆ, ಕಾಲೇಜಿನ ಹುಡುಗ ಹುಡುಗಿಯರಿಗೆ ಸಾಕ್ಷ್ಯಚಿತ್ರಗಳು ಲಭಿಸುವಂತಾಗಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಕೆ.ಪಿ.ಶಶಿ, ಯುವರಾಜ್, ದಿ.ಶರತ್, ದೀಪು ಮುಂತಾದವರಿಗೆಲ್ಲಾ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನ ಮಾಡಿದ ಅನುಭವವಿತ್ತು.

ಇದೇ ಸಂಘಟನೆಯ ಹುಟ್ಟಿಗೆ ಮುನ್ನುಡಿ ಬರೆಯಿತು. ಸಂಜನಾ, ಉಷಾ, ನಿಶಾ ಸೂಸನ್, ರುಮಾ ರಜಕ್, ವಿಜಯ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಇತರ ಪ್ರಮುಖರು.
ದೀಪು ಹಾಗೂ ಯುವರಾಜ್ ಅವರ ಕತೆ ಹೇಳದಿದ್ದರೆ `ಪೆಡೆಸ್ಟ್ರಿಯನ್ ಪಿಕ್ಚರ್ಸ್~ನ ಕಥನ ಪೂರ್ಣಗೊಂಡಂತೆ ಆಗದು. ದೀಪು ಮೂಲತಃ ಕೇರಳದ ತಿರುವೂರು ಜಿಲ್ಲೆಯ ಮಲಪ್ಪುರಂನವರು.

ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟಕರಾಗಿ ಗುರುತಿಸಿಕೊಂಡವರು. ಇಪ್ಪತ್ತಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಸಹಾಯಕ ಛಾಯಾಗ್ರಾಹಕನಾಗಿ, ಛಾಯಾಗ್ರಾಹಕನಾಗಿ ದುಡಿದವರು. ವನ್ಯಜೀವಿ ಛಾಯಾಗ್ರಹಣ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ. ನ್ಯಾಷನಲ್ ಜಿಯಾಗ್ರಫಿಕ್ ನಿಯತಕಾಲಿಕಕ್ಕೆ ಕೆಲವು ಸರಣಿಗಳನ್ನು ಬರೆದು ಅದಾಗಲೇ ಜನಮನ್ನಣೆಗೆ ಪಾತ್ರರಾಗಿದ್ದರು.

ಹಾಗೆ ಅವರು ಕೇರಳ ಬಿಟ್ಟದ್ದೇ ಪೆಡಸ್ಟ್ರಿಯನ್ ಪಿಕ್ಚರ್ಸ್ ಸಲುವಾಗಿ. ಈ ಹತ್ತು ವರ್ಷಗಳಲ್ಲಿ ಅವರು ಕನ್ನಡ ಕಲಿತರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡಿಗರೇ ಆದರು. ಯುವರಾಜ್ ಮೂಲತಃ ವಿಜ್ಞಾನದ ವಿದ್ಯಾರ್ಥಿ. ಸಂಘಟನಾ ಚತುರರಾಗಿದ್ದ ಅವರಿಗೆ ಕ್ಯಾಮೆರಾ ಎಂದರೆ ಎಲ್ಲಿಲ್ಲದ ಆಸಕ್ತಿ. ಬಗೆಬಗೆಯಲ್ಲಿ ನೀರೆರೆದು ಸಂಘಟನೆಯನ್ನು ಬೆಳೆಸಿದ್ದು ನೆರಳು ನೀಡಿ ಪೋಷಿಸಿದ್ದು ಯುವರಾಜ್.

ಪ್ರದರ್ಶನ, ಚಲನಚಿತ್ರೋತ್ಸವಗಳನ್ನು ನಡೆಸಲು ಹಣ ಬೇಕಲ್ಲ? ಸಾಕ್ಷ್ಯಚಿತ್ರಗಳ ಮಾರಾಟ, ಪುಸ್ತಕಗಳ ಮಾರಾಟ, ಕ್ಯಾಮೆರಾ ಮುಂತಾದ ಪರಿಕರಗಳನ್ನು ಬಾಡಿಗೆ ನೀಡುವುದು ಮುಂತಾದ `ಉಪಕಸುಬು~ಗಳನ್ನು ಹೊತ್ತು ಸಂಸ್ಥೆ ಮುನ್ನಡೆಯಿತು. ಗೆಳೆಯರು, ಹಿತೈಷಿಗಳು ಹಣದ ಸಹಾಯ ಮಾಡಿದರು.

ಸಂಘಟನೆ ಜನ್ಮ ತಳೆದ ವರ್ಷವೇ `ಪಾಲಿಟಿಕ್ಸ್ ಆಫ್ ಡೆವಲಪ್ಮೆಂಟ್~ ಹೆಸರಿನ ಚಲನಚಿತ್ರೋತ್ಸವ ಅಣಿಯಾಯಿತು. ಸುಮಾರು ಹತ್ತಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು, ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಆಗ ನಾಡಿನ ಅನೇಕರಿಂದ ಶಹಬ್ಬಾಸ್ಗಿರಿ. ಅನೇಕ ಪ್ರಗತಿಪರ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳಿಂದ ಪ್ರದರ್ಶನಕ್ಕೆ ಆಹ್ವಾನ.

ಅಪಾರ್ಟ್ಮೆಂಟ್ಗಳು, ಕೊಳೆಗೇರಿಗಳು ಹೀಗೆ ಎಲ್ಲೆಡೆಗೂ ಚಿತ್ರಗಳನ್ನು ಕೊಂಡೊಯ್ಯಲಾಯಿತು. ರಾಯಚೂರಿನ ಹಳ್ಳಿಗಳಲ್ಲಿ ಸಿನಿಮಾ ತೋರಿಸಿದ್ದು ಸಂಘಟಕರ ಪಾಲಿಗೆ ಮರೆಯಲಾರದ ಅನುಭವ. ಹಳ್ಳಿಗಳಲ್ಲಿ ಆಗ ವಿದ್ಯುತ್ ಅಭಾವ. ಆ ಕತ್ತಲ ಕಾಲವನ್ನೇ ಬಂಡವಾಳ ಮಾಡಿಕೊಂಡ ಅವರು ಗ್ರಾಮೀಣ ಜನರಿಗೆ ಹೊಸ ಬಗೆಯ ಸಿನಿಮಾಗಳ ರುಚಿ ಹತ್ತಿಸಿದರು.

ಒಮ್ಮೆ ಒಡಿಶಾದ ಆದಿವಾಸಿಗಳಿಗೆ ಸಾಕ್ಷ್ಯಚಿತ್ರಗಳನ್ನು ತೋರಿಸುವ ಕಾರ್ಯಕ್ರಮ. ಸಂಘಟಕರಿಗೆ ಒಂದು ಅಳುಕು. ಬೇರೆ ಬೇರೆ ಭಾಷೆಗಳ ಚಿತ್ರಗಳನ್ನು ತೋರಿಸುವುದಿರಲಿ ಒಡಿಯಾ ಕೂಡ ಆ ಮಲೆ ಮಕ್ಕಳಿಗೆ ಬರುತ್ತಿರಲಿಲ್ಲ. ಅವರದೇ ಭಾಷೆ ಬಿಟ್ಟರೆ ಬೇರೇನನ್ನೂ ಮಾತನಾಡಲು ಒಲ್ಲರು.

ಸರಿ ರಾತ್ರಿ ಎಂಟು ಗಂಟೆಗೆ ತೆರೆ ಮೇಲೆ ಚಿತ್ರ ಮೂಡಿತು. ಮೂರು ಸಾವಿರ ಗಿರಿಜನರು ತೆರೆಯ ಮೇಲೆ ನಡೆಯುತ್ತಿರುವುದನ್ನು ಕಣ್ಣರಳಿಸಿ ನೋಡುತ್ತಿದ್ದಾರೆ. ಸಿನಿಮಾ ಮುಗಿದ ಮೇಲೆ ಚಪ್ಪಾಳೆ ಹೊಡೆದು ಘೋಷಣೆ ಕೂಗಿ ಹುರಿದುಂಬಿಸುತ್ತಿದ್ದಾರೆ. ಒಂದಾದ ನಂತರ ಒಂದರಂತೆ ಸುಮಾರು ಹತ್ತು ಚಿತ್ರಗಳನ್ನು ತೋರಿಸಲಾಗಿದೆ.

ಮಧ್ಯರಾತ್ರಿಯಿಂದ ಬೆಳಗಿನ ಜಾವಕ್ಕೆ ಕಾಲ ಸರಿದಿದೆ. ಜನ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದಾರೆ. ಸಂಘಟಕರಿಗೆ ಯಕ್ಷಗಾನವನ್ನೋ ಪೌರಾಣಿಕ ನಾಟಕವನ್ನೋ ಆಡಿಸಿದ ಅನುಭವ! ಭಾಷೆಯ ಹಂಗಿಲ್ಲದೆಯೂ ಜನರನ್ನು ತಲುಪುವ ಸಿನಿಮಾದ ಮಾಂತ್ರಿಕ ಶಕ್ತಿಗೆ ಅವರೆಲ್ಲಾ ಶರಣು ಎಂದಾಗಿತ್ತು.

ಸಿನಿಮಾ ತೋರಿಸುವುದು ಸರಿ. ಇದಿಷ್ಟೇ ತಮ್ಮ ಕೆಲಸವಾಗಬಾರದು ಎಂದು ತಂಡಕ್ಕೆ ಅನಿಸತೊಡಗಿತ್ತು. ಅದರ ಜತೆಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿ ಎಂಬ ಬೇಡಿಕೆಯೂ ಹಲವರಿಂದ ಬಂತು. ಹಾಗಾಗಿ ಚಿತ್ರಗಳ ತಯಾರಿಕೆಗೂ ಸಂಸ್ಥೆ ಇಳಿಯಿತು. ಕಳೆದ 11 ವರ್ಷಗಳಲ್ಲಿ ಸಂಸ್ಥೆ ಸುಮಾರು 18 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ.

ಕೋಮುಸೌಹಾರ್ದದ ಮಹತ್ವ ತಿಳಿಸುವ `ಗಿರಿಗಿಡಿದ ಗ್ರಹಣ~, ಆಸಿಡ್ ದಾಳಿ ಕುರಿತ `ಸುಟ್ಟರೂ ಸೋಲೊಪ್ಪದಿರು~, ನರ್ಮದಾ ಆದಿವಾಸಿಗಳ ಬದುಕನ್ನು ಹೇಳುವ `ಇನ್ ಜಸ್ಟ್ ಲ್ಯಾಂಡ್~, ಸುನಾಮಿ ಸಂತ್ರಸ್ತರಿಗೆ ಉಂಟಾದ ಅನ್ಯಾಯವನ್ನು ಸಾರುವ `ಔಟ್ಸೈಡ್ ಮರ್ಸಿ~, ಬೆಂಗಳೂರಿನ ಪೌರಕಾರ್ಮಿಕರ ಮೇಲೆ ಬೆಳಕು ಚೆಲ್ಲುವ

`ದಿ ಹ್ಯಾಂಡ್ಸ್ ದಟ್ ಪ್ರೊಟೆಕ್ಟ್ ಹೆಲ್ತ್~, ದೇವದಾಸಿ ಪದ್ದತಿಯ ಕರಾಳತೆಯನ್ನು ಬಿಂಬಿಸುವ `ದಿ ಹೋಲಿ ವೈವ್ಸ್~ ಮುಂತಾದವು ಸಂಘಟನೆಯ ಕೆಲ ಪ್ರಮುಖ ಸಾಕ್ಷ್ಯಚಿತ್ರಗಳು. ನಾಲ್ಕು ಸಾಕ್ಷ್ಯಚಿತ್ರಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಕನ್ನಡದ ನೆಲಕ್ಕೆ ಸಂಬಂಧಿಸಿದವು, ಕನ್ನಡದಲ್ಲಿ ಮೂಡಿ ಬಂದವುಗಳು.

ಸಂಘಟನೆ ಈವರೆಗೆ ಹಮ್ಮಿಕೊಂಡಿರುವ ಚಲನಚಿತ್ರೋತ್ಸವಗಳ ಸಂಖ್ಯೆ 30ಕ್ಕೂ ಹೆಚ್ಚು. ದಲಿತರು, ಮಹಿಳೆಯರು, ಆದಿವಾಸಿಗಳು, ಲೈಂಗಿಕ ಅಲ್ಪಸಂಖ್ಯಾತರು ಹೀಗೆ ದಮನಿತರ ಹಕ್ಕುಗಳನ್ನು ಪ್ರತಿಪಾದಿಸಿ ಸಾಕ್ಷ್ಯಚಿತ್ರಗಳನ್ನು ಸಂಸ್ಥೆ ರೂಪಿಸಿದೆ. ಮೂರು ವಾರಗಳಲ್ಲಿ ಸಂಘಟನೆ ತಯಾರಿಸಿದ ಸಾಕ್ಷ್ಯಚಿತ್ರವೊಂದರ 2000 ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ಸೃಷ್ಟಿಸಿದೆ.

ಮತ್ತೊಂದು ಸಾಕ್ಷ್ಯಚಿತ್ರ ಈವರೆಗೆ 500 ಬಾರಿ ಪ್ರದರ್ಶನ ಕಂಡಿದೆ. `ದಿ ಹೋಲಿ ವೈವ್ಸ್~ಗೆ ಕೇಂದ್ರ ಸರ್ಕಾರ ಆಯೋಜಿಸಿದ್ದ ದಾದಾ ಸಾಹೇಬ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಮನ್ನಣೆ ಕೂಡ ದೊರೆತಿದೆ. ಅಲ್ಲದೆ ಅನೇಕ ಆಂದೋಲನಗಳ ಫಲವಾಗಿ ನೀರಿನ ಖಾಸಗೀಕರಣ, ಎನ್ಕೌಂಟರ್ ಬಲಿ ಕುರಿತ ಸಂಕ್ಷಿಪ್ತ ವರದಿಗಳನ್ನು, ಇಸ್ರೇಲ್ ಭಯೋತ್ಪಾದನೆ ಹಾಗೂ ಪ್ಯಾಲೆಸ್ತೇನ್ ಪ್ರತಿರೋಧ, ಏಕತೆಯ ಮಹತ್ವ ಸಾರುವ ಪುಸ್ತಕಗಳನ್ನು ಸಂಘಟನೆ ಹೊರತಂದಿದೆ.

ಸಾಕ್ಷ್ಯಚಿತ್ರಗಳನ್ನೇ ಗಂಭೀರವಾಗಿ ದೀಪು ಪರಿಗಣಿಸಿರುವುದಕ್ಕೆ ದೊಡ್ಡದೊಂದು ಹಿನ್ನೆಲೆಯಿದೆ. `ಗಂಭೀರ ವಿಚಾರಗಳನ್ನು ಹೊಂದಿರುವ ಚಿತ್ರಗಳನ್ನು ನೋಡುವುದಿಲ್ಲ ಎಂಬ ಅಳಲು ಎಲ್ಲರದ್ದು. ಆದರೆ ಅವುಗಳನ್ನು ತೋರಿಸುವ ಪ್ರಯತ್ನವನ್ನೇ ಯಾರೂ ಮಾಡುತ್ತಿಲ್ಲ.

ಚಿತ್ರ ಸಮಾಜಗಳು ಕೂಡ ಚಲನಚಿತ್ರೋತ್ಸವಗಳ ಆಚೆಗೆ ಏನನ್ನೂ ಮಾಡುತ್ತಿಲ್ಲ. ಸೌಂದರ್ಯ ಪ್ರಜ್ಞೆಯ ಕಾಳಜಿ ಹೊಂದಿರುವ ಅವು ವಾಸ್ತವವನ್ನು ಬಿಂಬಿಸಲು ಶ್ರಮಿಸುವುದಿಲ್ಲ. ಆ ಕೊರತೆಯನ್ನು ತುಂಬುವ ಏಕೈಕ ಉದ್ದೇಶ ನಮ್ಮದು~ ಎನ್ನುತ್ತಾರೆ ಅವರು.

ಸಂಘಟನೆ ಕರ್ನಾಟಕದಾಚೆಗೂ ಬೆಳೆದು ನಿಂತಿದೆ. ಕೇರಳ, ದೆಹಲಿಯಲ್ಲಿ ತನ್ನ ಕವಲುಗಳನ್ನು ಚಾಚಿದೆ. ಕೆಲ ಉತ್ಸಾಹಿಗಳು ಅಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಮುಂಬೈ, ಅಹಮದಾಬಾದ್, ಸೂರತ್, ಈಶಾನ್ಯ ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಗಳನ್ನು ನಡೆಸಿದೆ.

ಲಂಡನ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಚಲನಚಿತ್ರೋತ್ಸವಗಳನ್ನು ಸಂಘಟಿಸಿದೆ. ಚಿತ್ರೋತ್ಸವಗಳಿಗೆ ಆಗಾಗ ಕೃತಿಗಳನ್ನು ಕಳುಹಿಸಿ ವಿದೇಶಗಳ ದೊಡ್ಡ ದೊಡ್ಡ ಚಲನಚಿತ್ರ ತಯಾರಕರಿಂದಲೂ ಬೆನ್ನು ತಟ್ಟಿಸಿಕೊಂಡಿದೆ.

ಸಾಮಾನ್ಯರಿಗಾಗಿ ಸಿನಿಮಾ ಎಂಬ ಪರಿಕಲ್ಪನೆಯಿಂದಾಗಿ ಸಂಘಟನೆಗೊಂದು ವಿಶಿಷ್ಟ ಹೆಸರು ಪ್ರಾಪ್ತವಾಯಿತು. `ಪೆಡೆಸ್ಟ್ರಿಯನ್ ಪಿಕ್ಚರ್ಸ್~ ತಳ ಸಮುದಾಯವನ್ನು ನೆನಪಿಗೆ ತರುವ, ಥಟ್ಟಂತ ಎಲ್ಲರನ್ನೂ ಮುಟ್ಟಬಲ್ಲ ಹೆಸರು. ಸಂಘಟನೆ ತನ್ನದೇ ಆದ ದೃಶ್ಯಾಲಯವನ್ನೂ ಹೊಂದಿದೆ. ಅಲ್ಲಿ ಅಪರೂಪದ ನೂರಾರು ಸಾಕ್ಷ್ಯಚಿತ್ರಗಳು ಲಭಿಸುತ್ತವೆ. ದೇಶ ವಿದೇಶಗಳ ಪ್ರಮುಖ ಸಾಕ್ಷ್ಯಚಿತ್ರಗಳು ಇಲ್ಲಿವೆ.

`ಕತೆ ಹೇಳುವುದು ನಮ್ಮ ಕೆಲಸ. ಮುಖ್ಯವಾಹಿನಿಯ ಸಿನಿಮಾಗಳು ಕೂಡ ಅದೇ ಕೆಲಸ ಮಾಡುತ್ತವೆ. ಆದರೆ ಸಾಕ್ಷ್ಯಚಿತ್ರ ತಯಾರಿಸುವಾಗ ಯಾವುದೇ ಹಿಡಿತ ನಮಗೆ ಇರದು. ಘಟನೆ ನಡೆಯುತ್ತಿರುವಾಗಲೇ ಸಾಕ್ಷ್ಯಚಿತ್ರ ರೂಪುಗೊಳ್ಳುತ್ತಿರುತ್ತದೆ. ವ್ಯಕ್ತಿಯೊಬ್ಬರ ಸಂದರ್ಶನವೊಂದು ಸಾಕ್ಷ್ಯಚಿತ್ರವೊಂದರ ಮೂಲ ಉದ್ದೇಶವನ್ನೇ ಬುಡಮೇಲು ಮಾಡಬಲ್ಲದು. ಅಂಥ ಸವಾಲುಗಳೊಡನೆ ನಾವು ಕೆಲಸ ಮಾಡುತ್ತಿರುತ್ತೇವೆ.

ಪರ್ಯಾಯ ಚಿತ್ರಗಳಿಗೆ ಜ್ವಲಂತ ಚಿತ್ರಣವನ್ನು ನೀಡುವ ಶಕ್ತಿಯಿದೆ~ ಎಂಬುದು ಯುವರಾಜ್ ಮಾತು. ಈಗಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಜತೆಗೆ ಯುವ ಪಡೆಯನ್ನು ಕಟ್ಟುವುದು ಸಂಸ್ಥೆಯ ಆಶಯ. ಕೆಲವು ಮಹತ್ವದ ಸಾಕ್ಷ್ಯಚಿತ್ರಗಳನ್ನು ಆಯಾ ಭಾಷೆಗಳಲ್ಲಿಯೇ ನೀಡಲು ಸಂಸ್ಥೆ ಉತ್ಸಾಹ ತೋರಿದೆ. ದೃಶ್ಯ ಮಾಧ್ಯಮದಲ್ಲಿ ಆಸಕ್ತಿ ಇರುವ ಹೊಸತನಕ್ಕೆ ಹಂಬಲಿಸುವ ಯುವ ಮನಸ್ಸುಗಳಿಗೆ ಪೆಡೆಸ್ಟ್ರಿಯನ್ ಪಿಕ್ಚರ್ಸ್ನಲ್ಲಿ ಸದಾ ಜಾಗವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.