ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 27 ಜೋಡಿ ‘ಹಸೆಮಣೆ’ ಏರಿದರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮೂಡುಬಿದಿರೆ ಕರಿಂಜೆ ಮುಕ್ತಾನಂದ ಸ್ವಾಮೀಜಿ, ಜನಸೇವೆಗೆ ಬದ್ಧರಾಗಿ ಯಾವುದೇ ಜಾತಿ ಸಮುದಾಯ ಹಾಗೂ ಬಡವ -ಬಲ್ಲಿದ ಎಂಬ ಭೇದವಿಲ್ಲದೆ ಅದ್ದೂರಿಯಾಗಿ ‘ಉಚಿತ ಸಾಮೂಹಿಕ ವಿವಾಹ’ ನೆರವೇರಿಸುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಇಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಪ್ರೇರಿತಗೊಂಡು ಡಿ.11ರಂದು ಕರಿಂಜೆ ಕ್ಷೇತ್ರದಲ್ಲಿಯೂ ಬಡಜನತೆಗಾಗಿ ‘ಉಚಿತ ಸಾಮೂಹಿಕ ವಿವಾಹ’ ಕಾರ್ಯಕ್ರಮ ನಡೆಸುವುದಾಗಿ ಅವರು ಘೋಷಿಸಿದರು.ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಮಾತನಾಡಿ, ಪುಂಜಾಲಕಟ್ಟೆಯಲ್ಲಿ ಯುವ ಮುಖಂಡ ಎಂ.ತುಂಗಪ್ಪ ಬಂಗೇರ ಬಡವರ ಕಣ್ಣೀರು ಒರೆಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಆರಂಭದಲ್ಲಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ನೂತನ ವಧು-ವರರಿಗೆ ‘ಚಿನ್ನದ ತಾಳಿ’ ವಿತರಿಸಿದರು. ಇದೇ ವೇಳೆ ಸಮಾಜ ಸೇವೆಗಾಗಿ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ರಂಗಭೂಮಿ-ಎಚ್ಕೆ ನಯನಾಡು, ವೈದ್ಯಕೀಯ- ಡಾ.ಭಾಸ್ಕರ ಮುಂಬೈ, ಯಕ್ಷಗಾನ-ಶ್ರೀಧರ ಭಂಡಾರಿ ಪುತ್ತೂರು, ಕ್ರೀಡೆ-ಕೆ.ಎಂ.ಸುಬ್ರಹ್ಮಣ್ಯ ಸುಳ್ಯ ಇವರಿಗೆ ‘ಸ್ವಸ್ತಿ ಸಿರಿ’ ರಾಜ್ಯಪ್ರಶಸ್ತಿ ಮತ್ತು ಕಲಾ ಸಂಘಟನೆಗಾಗಿ ಕರ್ನೂರು ಮೋಹನ ರೈ ಮುಂಬೈ, ಯುವ ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ, ಪತ್ರಿಕೋದ್ಯಮ-ರೋನ್ಸ್ ಬಂಟ್ವಾಳ, ಸಹಕಾರಿ- ಮಾರಪ್ಪ ಪೂಜಾರಿ, ಸರಕಾರಿ ಸೇವೆ-ಮಹಮ್ಮದ್ ಪುಂಜಾಲಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಜನಪರ ಸೇವೆಗಾಗಿ ಸಂಘಕ್ಕೆ ಸ್ಥಳೀಯ ಕಟ್ಟೆಮನೆ ಉದಯ ಕುಮಾರ್ ಸಹೋದರರು 0.5ಸೆಂಟ್ಸ್ ಜಮೀನು ಉಚಿತವಾಗಿ ಹಸ್ತಾಂತರಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ ಕಾರ್ಣಿಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಭಾಕರ ಬಂಗೇರ, ಜಿ.ಪಂ.ಉಪಾಧ್ಯಕ್ಷೆ ಧನಲಕ್ಷ್ಮಿ, ಸದಸ್ಯರಾದ ಗಿರಿಜಾ, ತುಳಸಿ ಹಾರಬೆ, ತಾ.ಪಂ.ಅಧ್ಯಕ್ಷೆ ಶೈಲಜಾ ಪಿ.ಶೆಟ್ಟಿ, ಮಮತಾ ಶೆಟ್ಟಿ, ಉಪಾಧ್ಯಕ್ಷ ದಿನೇಶ ಅಮ್ಟೂರು, ಸಂತೋಷ್ ಕುಮಾರ್ ಲಾಯಿಲ, ಸದಸ್ಯ ರಮೇಶ ಕುಡ್ಮೇರು, ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ ಶುಭ ಹಾರೈಸಿದರು.

ಸಂಘದ ಸ್ಥಾಪಕಾಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮುಂಬೈ ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಕಾಶಿಮೀರ, ಕೃಷ್ಣ ಶೆಟ್ಟಿ, ಬಾಲಕೃಷ್ಣ ಭಂಡಾರಿ, ನಿತ್ಯಾನಂದ ಪೂಜಾರಿ, ಪ್ರಮುಖರಾದ ಪಿ.ಎಂ. ಪ್ರಭಾಕರ, ಪುರುಷೋತ್ತಮ ಶೆಟ್ಟಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.