ಹದಿನೆಂಟನೆ ಶತಮಾನದಲ್ಲಿ ಬ್ರಿಟನ್ ದೇಶದಲ್ಲಿ ಶ್ರೀಮಂತ ವರ್ಗದ ಜನರು ರಾತ್ರಿ ಊಟದ ನಂತರವೂ ಟೇಬಲ್ ಮುಂದೆ ಜಮಾಯಿಸುತ್ತಿದ್ದರು!

ಪುಟ್ಟ ಚೆಂಡಿನ ಆಟ ಟೇಬಲ್ ಟೆನಿಸ್ನ ಆನಂದವನ್ನು ಸವಿಯಲು ಅವರು ಸೇರುತ್ತಿದ್ದರು. ಇಂಗ್ಲೆಂಡ್ನ ಮೇಲ್ವರ್ಗದವರ ಟೇಬಲ್ನಿಂದ ಜಗತ್ತಿನ ಮೂಲೆ ಮೂಲೆಗೂ ಪುಟಿದು ಹೋದ ಈ ಆಟದ ಇತಿಹಾಸ ರೋಚಕ. ಇಂಗ್ಲಿಷರೊಂದಿಗೆ ಭಾರತಕ್ಕೂ ಕಾಲಿಟ್ಟ ಈ ಆಟದಲ್ಲಿ ನಮ್ಮವರ ಸಾಧನೆಯೂ ಕಮ್ಮಿಯಿಲ್ಲ. ಕರ್ನಾಟಕದ ಸಾಧನೆಯೂ ಹೆಮ್ಮೆ ಮೂಡಿಸುವಂತದ್ದೇ.

1956ರಲ್ಲಿ ವಿಶ್ವಕಪ್ ಟೇಬಲ್ ಟೆನಿಸ್ ಟೂರ್ನಿಯ ಕ್ವಾರ್ಟರ್ಫೈನಲ್ ತಲುಪಿದ ಏಕೈಕ ಭಾರತೀಯ ಆಟಗಾರ ಕೆ. ನಾಗರಾಜ್, ಮಹಿಳಾ ಆಟಗಾರ್ತಿ ಉಷಾ ಸುಂದರರಾಜ್, ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಚೇತನ್ ಬಬೂರ್ ರಾಜ್ಯದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟವರು.

ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಂಜಯ್ ಪೈ ಸ್ಮಾರಕ ‘ಎಸ್ಬಿಐ ಕಪ್’ ಟೇಬಲ್ ಟೆನಿಸ್ ಟೂರ್ನಿ ಸಂದರ್ಭದಲ್ಲಿ ಕನ್ನಡನಾಡಿನ ಟಿಟಿ ವೈಭವವನ್ನು ಮನಮುಟ್ಟುವಂತೆ ವಿವರಿಸಿದವರು ಹಿರಿಯ ಕೋಚ್ ಜೆ. ಪುರುಷೋತ್ತಮರಾವ್. 75ರ ಹರೆಯದ ಪುರುಷೋತ್ತಮರಾವ್ ಕಳೆದ 55 ವರ್ಷಗಳಿಂದ ಆಟಗಾರನಾಗಿ, ತರಬೇತುದಾರರಾಗಿ ಟಿಟಿಯೊಂದಿಗೆ ನಂಟು ಇಟ್ಟುಕೊಂಡವರು. ರಾಜ್ಯದಲ್ಲಿ ಉತ್ತಮ ಆಟಗಾರರು ಈಗಲೂ ಇದ್ದಾರೆ. ಆದರೆ ಅಂದಿನ ವೈಭವ ಮತ್ತೆ ಮರಳಬೇಕು ಎನ್ನುವುದು ಅವರ ಆಶಯ.

ರಾಜ್ಯದ ಮಟ್ಟಿಗೆ ಇವತ್ತು ಟಿಟಿ ಆಟಕ್ಕೆ ಬೆಂಗಳೂರು ಮತ್ತು ಮೈಸೂರು ನಗರಗಳೇ ಕೇಂದ್ರಬಿಂದು. ಅಲ್ಲಿ ಸಿಕ್ಕಷ್ಟು ಉತ್ತಮ ಸೌಲಭ್ಯಗಳು ಉತ್ತರ ಕರ್ನಾಟಕದ ನಗರಗಳಲ್ಲಿ ಇಲ್ಲ. ಸಮಗ್ರ ಕರ್ನಾಟಕದ ಪ್ರತಿಭಾವಂತರಿಗೆ ಸೂಕ್ತ ಸೌಲಭ್ಯ ಮತ್ತು ಪ್ರೋತ್ಸಾಹ ಸಿಕ್ಕರೆ ವೈಭವದ ದಿನಗಳು ಮರಳಲು ಅವಕಾಶವಿದೆ.

“ಹುಬ್ಬಳ್ಳಿ-ಧಾರವಾಡದಲ್ಲಿ ಆಟಗಾರರನ್ನು ಬೆಳೆಸಲು ಅವಕಾಶವಿದೆ. ಆದರೆ, ಒಂದು ತರಬೇತಿ ಶಿಬಿರ ಅಥವಾ ಟೂರ್ನಿ ಆಯೋಜಿಸಲು ಸೂಕ್ತ ಒಳಾಂಗಣ ಕ್ರೀಡಾಂಗಣವಿಲ್ಲ. ಇದಕ್ಕಾಗಿ ಯಾವುದಾದರೂ ಕಲ್ಯಾಣಮಂಟಪ ಅಥವಾ ಸಭಾಭವನವನ್ನು ಅವಲಂಬಿಸಬೇಕು. ಅಲ್ಲಿ ಬೆಳಕಿನ ಅಸಮರ್ಪಕ ವ್ಯವಸ್ಥೆಯಿಂದಾಗಿ ಆಟಗಾರರು ತೊಂದರೆ

ಅನುಭವಿಸಬೇಕಾಗುತ್ತದೆ. ಸ್ಥಳೀಯ ಆಟಗಾರರಿಗೆ ತರಬೇತಿ ನೀಡಲೂ ಸರಿಯಾದ ಸ್ಥಳ ಬೇಕು” ಎಂದು ನವದೆಹಲಿಯ ಕಾಮನ್ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ಧಾರವಾಡ ಟಿ.ಜಿ. ಉಪಾಧ್ಯೆಯ ಹೇಳುತ್ತಾರೆ.

ರಕ್ಷಿತ್ ಬಾರಿಗಿಡದ, ಸುಷ್ಮಿತ್ ಬಾರಿಗಿಡದರಂತಹ ಸ್ಥಳೀಯ ಪ್ರತಿಭೆಗಳು ಸೌಲಭ್ಯಗಳಿಲ್ಲದೇ ಸೊರಗಿ ಹೋಗಿವೆ. ಉತ್ತರ ಕರ್ನಾಟಕದ ಮಟ್ಟಿಗೆ ಬೆಳಗಾವಿಯ ಮೈತ್ರೇಯಿ ಬೈಲೂರ್ ಭರವಸೆಯ ಬೆಳಕು. ಟಿಟಿ ಆಟಗಾರರಾಗಿದ್ದ ತಂದೆ ಸಂಗಮ್ ಬೈಲೂರ್ರ ಸತತ ಮಾರ್ಗದರ್ಶನದಿಂದ ಮೈತ್ರೇಯಿ ಇವತ್ತು ರಾಷ್ಟ್ರೀಯ ರ್ಯಾಂಕಿಂಗ್ ಪಟ್ಟಿಯ 9ನೇ ಸ್ಥಾನದಲ್ಲಿರುವ ಆಟಗಾರ್ತಿ. ಬೆಂಗಳೂರಿನ ಶ್ರೇಯಲ್ ಕೆ. ತೇಲಂಗ್, ವೇದಾಂತ್ ಎಂ. ಅರಸ್, ಸುಚೇತ್ ಪಿ ಶೆಣೈಯ ಭರವಸೆಯ ಆಟಗಾರರಂತೂ ಹೌದು. ಆದರೆ ರಾಜ್ಯದ ಟಿಟಿ ಆಟದ ಬೆಳವಣಿಗೆಗೆ ಇಷ್ಟು ಸಾಕಾಗುವುದೇ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.

ಸೀಟಿನ ಆಸೆ:
ಎಸ್ಸೆಸ್ಸೆಲ್ಸಿ ಬರುವವರೆಗೆ ಆಟವಾಡುವ ಮಕ್ಕಳು ನಂತರ ಕಾಣುವುದೇ ಇಲ್ಲ. ನಾಲ್ಕೈದು ವರ್ಷದಲ್ಲಿ ರಾಜ್ಯ ರ್ಯಾಂಕಿಂಗ್ನಲ್ಲಿ ಒಂದಿಷ್ಟು ಶ್ರೇಯಾಂಕ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಾಗ ಆಡಿ ಪ್ರಮಾಣಪತ್ರ ಗಳಿಸುವ ಪರಿಪಾಠವೇ ಈ ಆಟದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಮುಂದೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟು ಪಡೆಯಲು ಕ್ರೀಡಾ ಕೋಟಾ ಉಪಯೋಗವಾಗುತ್ತದೆ ಎನ್ನುವ ಪಾಲಕರ ದೂರಾಲೋಚನೆಯಲ್ಲಿ ಮಕ್ಕಳ ಗುರಿಯೂ ಅಷ್ಟಕ್ಕೇ ಸೀಮಿತವಾಗುತ್ತಿದೆ. ಇದು ಆಟದ ಹಿನ್ನಡೆಗೆ ಕಾರಣ.

“ಟಿಟಿ ಒಳ್ಳೆಯ ಫಿಟ್ ನೆಸ್ ಗೇಮ್. ಪ್ರತಿ ದಿನ ಎರಡು ತಾಸು ಆಡು ವುದರಿಂದ ಅವರ ವಿದ್ಯಾಭ್ಯಾಸಕ್ಕೂ ಇದು ಸಹಕರಿಸುತ್ತದೆ. ವಿಶ್ವದ ಎರಡನೇ ಅತಿ ವೇಗದ ಆಟವಾಗಿರುವ ಇದು ಮಕ್ಕಳ ಬುದ್ಧಿಮತ್ತೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಓದಿಗೂ ಸಹಕಾರಿ. ಇದನ್ನು ಪಾಲಕರು ಮನಗಾಣಬೇಕು. ರಾತ್ರಿ ಬೆಳಗಾಗುವುದರಲ್ಲಿ ದೊಡ್ಡ ಆಟನಾರನಾಗಬೇಕು ಎಂಬ ಕನಸು ಕಾಣಬಾರದು” ಎನ್ನುವ ಸಲಹೆ ಪುರುಷೋತ್ತಮರಾವ್ ಅವರದ್ದು.

ಹುಬ್ಬಳ್ಳಿಯ ಟೂರ್ನಿ ಬಗ್ಗೆ ಹೇಳುವುದಾದರೆ ವಿಜು ಪೈ ಮತ್ತು ಸಂಗಡಿಗರ ಪ್ರಯತ್ನ ರಂಗು ತಂದಿದೆ. ಈ ಬಾರಿ ಮಹಿಳೆಯರ ವಿಭಾಗದ ಎಂಟು ಅಗ್ರ ಆಟಗಾರ್ತಿಯರ ಪಟ್ಟಿಯಲ್ಲಿರುವ ಸಹನಾ ಕುಲಕರ್ಣಿ ಮತ್ತು ಕೆಡೆಟ್ ಬಾಲಕಿಯರಲ್ಲಿ ಗಾಯತ್ರಿ ಟಂಕಸಾಲಿ ಹುಬ್ಬಳ್ಳಿಯ ಕ್ರೀಡಾಪ್ರೇಮಿಗಳಿಗೆ ಭರವಸೆ ಮೂಡಿಸಿದ್ದಾರೆ. ಪ್ರತಿವರ್ಷವೂ ವಾಣಿಜ್ಯನಗರಿಯಲ್ಲಿ ಟೂರ್ನಿ ಆಯೋಜಿಸುತ್ತಿರುವ ಪೈ ಕುಟುಂಬಕ್ಕೆ ಈ ಬಗ್ಗೆ ಅಪಾರ ಹೆಮ್ಮೆಯಂತೂ ಇದೆ. ಆದರೆ ಈ ಟೂರ್ನಿಗಳಿಂದ ಪ್ರೇರಣೆಗೊಂಡು ಶಾಲೆ, ಕಾಲೇಜುಗಳಲ್ಲಿಯೂ ಆಟ ಬೆಳೆಯಬೇಕು ಎನ್ನುವ ಕಳಕಳಿ ಅವರದ್ದು.

ಸೂಕ್ತ ಸೌಲಭ್ಯಗಳು ಸಿಕ್ಕರೆ ರಾಷ್ಟ್ರಮಟ್ಟದ ಆಟಗಾರರನ್ನು ನೀಡಲು ಅವಳಿನಗರಕ್ಕೂ ಸಾಧ್ಯವಿದೆ ಎನ್ನುವುದನ್ನು ಈ ಟೂರ್ನಿ ತೋರಿಸಿಕೊಟ್ಟಿದೆ. ದೊಡ್ಡ ಪ್ರೋತ್ಸಾಹ ಸಿಕ್ಕರೆ ಮಾತ್ರ ಪುಟ್ಟ ಚೆಂಡು ಹರ್ಷದಿಂದ ಪುಟಿಯಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.