ಕುಮಟಾ: ಮುಟ್ಟಿದರೆ ಪುಡಿ ಪುಡಿಯಾಗುವ 175 ವರ್ಷಗಳಿಗೂ ಹಿಂದಿನ ಭೂ ದಾಖಲೆಗಳನ್ನು ಬದಲಾಯಿಸಿ ಸಾರ್ವಜನಿಕರ ಕೆಲಸ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಮೋಜಣಿ ವಿಭಾಗದ ಸಿಬ್ಬಂದಿ ಸಾರ್ವಜನಿಕರು ಹಾಗೂ ಪತ್ರಕರ್ತರ ಎದುರು ತಹಶೀಲ್ದಾರ್ ಅವರನ್ನು ಕಳಕಳಿಯಾಗಿ ಮನವಿ ಮಾಡಿದ ಪ್ರಸಂಗ ಮಂಗಳವಾರ ತಾಲ್ಲೂಕಿ ಕಚೆರಿಯಲ್ಲಿ ಜರುಗಿತು.

ಇತ್ತೀಚೆಗೆ ಶಾಸಕಿ ಶಾರದಾ ಶೆಟ್ಟಿ ಅವರು ಸಾರ್ವಜನಿಕರ ಕುಂದು ಕೊರತೆ ವಿಚಾರಿಸಲು ತಾಲ್ಲೂಕು ಕಚೇರಿಯ ಮೋಜಣಿ ವಿಭಾಗಕ್ಕೆ ಆಗಮಿಸಿದರು. ಅಲ್ಲಿದ್ದ ಸಾರ್ವಜನಿಕರು ತಮ್ಮ ಕೆಲಸ ವಿಳಂಬವಾಗುತ್ತಿರುವ ಬಗ್ಗೆ ಶಾಸಕರಲ್ಲಿ ದೂರಿದಾಗ ಅವರು ಮೋಜಣಿ ವಿಭಾಗದ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಶಾಸಕರು ಅಲ್ಲಿಂದ ಹೋದ ನಂತರ ಮೋಜಣಿ ಇಲಾಖೆ ಸಿಬ್ಬಂದಿ, ‘1826ರಷ್ಟು ಹಿಂದಿನ ಮೂಲ ಭೂ ನಕ್ಷೆಯ ದಾಖಲೆಗಳು ಕೈಯಲ್ಲಿ ಹಿಡಿದರೆ ಪುಡಿಯಾಗುವಂತಿವೆ. ಅವುಗಳನ್ನು ನಿತ್ಯ ಕಡತದಿಂದ ತೆಗೆದು ಮತ್ತೆ ಇಡುವಾಗ ತುಂಡಾಗಿ ಹೋಗುತ್ತವೆ. ಇಂಥ ಲಕ್ಷಾಂತರ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಪ್ರಮಾಣೀಕರಿಸಿ ಹೊಸ ಕಡತದೊಳಗೆ ಇಡಲು ತಗಲುವ ವೆಚ್ಚದವನ್ನು ಅನಿವಾರ್ಯವಾಗಿ ಮೋಜಣಿ ವಿಭಾಗದ ಸಿಬ್ಬಂದಿಯೇ ಭರಿಸುತ್ತಿದ್ದಾರೆ.

ಹಳೆಯ ಮೂಲ ಕಡತಗಳು ಆಗಾಗ ತುಂಡಾಗಿ ಹೋಗುವುದರಿಂದ ಸಾರ್ವಜನಿಕರಿಗೆ ಕೊಡುವ ಭೂ ನಕ್ಷೆಯ ದಾಖಲೆ ಪ್ರತಿಗಳಲ್ಲೂ ವ್ಯತ್ಯಾಸವಾಗುತ್ತದೆ. ಹೀಗಾಗಿ ಸಾರ್ವಜನಿಕರ ಕೆಲಸ ಕೂಡ ವಿಳಂಬವಾಗುತ್ತದೆ’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ತಿಳಿಸಿದರು.

ತಹಶೀಲ್ದಾರ್ ಚಿನ್ನರಾಜು ಅವರು, ‘ಜಿಲ್ಲಾಧಿಕಾರಿ ಕಚೇರಿಯಿಂದ ಇದಕ್ಕೆ ಹಣ ಬರುವುದಿಲ್ಲವೇ ಎಂದು ಮೋಜಣಿ ಸಿಬ್ಬಂದಿ ಪ್ರಶ್ನಿಸಿದರು. ಮೋಜಣಿ ವಿಭಾಗದ ಈ ಸಮಸ್ಯೆ ಶಾಸಕರ ಗಮನಕ್ಕೂ ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.