ಸೋಮವಾರ, ಏಪ್ರಿಲ್ 12, 2021
30 °C

ಪುಸ್ತಕ ಮಾಫಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಂಥಾಲಯ ಇಲಾಖೆಯಲ್ಲಿ ಏಕಗವಾಕ್ಷಿ ಅಡಿಯಲ್ಲಿ ಕನ್ನಡ ಪುಸ್ತಕಗಳ ಗರಿಷ್ಠ ಪ್ರತಿಗಳನ್ನು ಕೊಳ್ಳಲು ಬಜೆಟ್‌ನಲ್ಲಿ ರೂ. 5 ಕೋಟಿ ಹಣನೀಡಲಾಯಿತು,  ಯಾವಾಗ ಸರ್ಕಾರದಿಂದ ಪ್ರತಿ ವರ್ಷ ಐದು ಕೋಟಿ ರೂಪಾಯಿ ಹಣ ಬರಲು ಶುರುವಾಯಿತೋ, ಅಂದಿನಿಂದ ಆಯ್ಕೆಗಾಗಿ ಏಳು ಸಾವಿರ ಪುಸ್ತಕಗಳು ಬರಲಾರಂಭಿಸಿವೆ.ಗ್ರಂಥಾಲಯ ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಕರಾಮತ್ತಿನಿಂದಾಗಿ, ದಿಢೀರನೆ ಅನೇಕ ಕಳ್ಳ ಪ್ರಕಾಶಕರು ಹುಟ್ಟಿಕೊಂಡು ಕಳಪೆ ಪುಸ್ತಕಗಳು ಬರಲಾರಂಭಿಸಿತು.ನೋಡನೋಡುತ್ತಿದ್ದಂತೆ, ಕಳಪೆ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ಸರಬರಾಜು ಮಾಡುವ ಒಂದು ಬೃಹತ್ ಮಾಫಿಯಾ ಸೃಷ್ಟಿಯಾಯಿತು.ಮುದ್ರಣ, ಮರುಮುದ್ರಣ, ಪರಿಷ್ಕೃತ ಮುದ್ರಣ, ಇತ್ಯಾದಿ ಹೆಸರಿನಲ್ಲಿ ಅವೇ ಹಳೇ ಪುಸ್ತಕಗಳು ಮುದ್ರಣವಾಗುತ್ತಿದೆ. ಕೆಲವು ಹಳೇ ಪುಸ್ತಕಗಳ ಶಿರೋನಾಮೆ ಬದಲಿಸಿ ಮೋಸದಿಂದ ಇಲಾಖೆಗೆ ಸರಬರಾಜು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇಡದ ಹಳೆಯ ಸಿಲಬಸ್‌ನ ಪಠ್ಯಪುಸ್ತಕಗಳನ್ನು ಪ್ರತಿವರ್ಷ ಹೊಸದು ಎಂದು ಸರಬರಾಜು ಮಾಡುತ್ತಿರುವ ಒಂದು ದೊಡ್ಡ ಗ್ಯಾಂಗ್ ಇದೆ. `ಸಂಗತ~ದಲ್ಲಿ ಶೂದ್ರ ಶ್ರೀನಿವಾಸ್‌ರವರು ತಿಳಿಸಿದಂತೆ ಕನ್ನಡ ಪುಸ್ತಕೋದ್ಯಮ ಖಂಡಿತಾ ಬೆಳೆಯುತ್ತಿಲ್ಲ, ಪುಸ್ತಕೋದ್ಯಮದ ಹೆಸರಿನಲ್ಲಿ ಕಳ್ಳಕಾಕರ ದೊಡ್ಡ ಪಡೆ ದಂಧೆ ನಡೆಸುತ್ತಾ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದೆ.ಶೂದ್ರರವರೇ ದಯವಿಟ್ಟು ಗಮನಿಸಿ. 2011ರಲ್ಲಿ ಬಂದಿರುವ 7ಸಾವಿರ ಪುಸ್ತಕಗಳಲ್ಲಿ  3ಸಾವಿರ ಮಾತ್ರ ಒಳ್ಳೆಯ ಪುಸ್ತಕಗಳು. ಮಿಕ್ಕವು ಕಳಪೆ ಹಾಗೂ ಹಳೆಯ ಪುಸ್ತಕಗಳು. ಪ್ರಸಕ್ತ ವರ್ಷದಲ್ಲಿ ಅದೇ ಹಳೆಯ ಪುಸ್ತಕಗಳನ್ನು `ಸಮಗ್ರ~ ಎಂದು ಮುದ್ರಿಸಿ ಹಣ ಮಾಡುವ ದಂಧೆ ಮುಂದುವರಿಯುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.