ಬೆಂಗಳೂರು: ನಗರದ ಪಶ್ಚಿಮ ವಲಯದ ಸಂಚಾರ ಪೊಲೀಸರಿಗೆ ಬುಧವಾರ ಮೆಡ್ಪ್ಲಸ್ ಪಾರ್ಮಸಿ ಸಂಸ್ಥೆ ಮಲ್ಲೇಶ್ವರದ ಯುವಶಕ್ತಿ ಸ್ವಯಂ ಸೇವಾ ಸಂಘದೊಂದಿಗೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನಗರ ಪಶ್ಚಿಮ ವಲಯ ಸಂಚಾರ ಡಿಸಿಪಿ ಎಂ.ಎಂ.ಮಹದೇವಯ್ಯ ಶಿಬಿರವನ್ನು ಉದ್ಘಾಟಿಸಿ, `ಪ್ರತಿಕೂಲ ಹವಾಮಾನದಲ್ಲಿ ಸಂಚಾರ ಪೊಲೀಸರು ಟ್ರಾಫಿಕ್ನಲ್ಲಿ ಪ್ರತಿದಿನ ಸುಮಾರು 8 ರಿಂದ 10 ತಾಸು ಕೆಲಸ ಮಾಡುವುದರಿಂದ ದೂಳು ಅವರ ದೇಹಕ್ಕೆ ಹೋಗಿ ವಯಸ್ಸಾದಂತೆ ಅನೇಕ ಸಮಸ್ಯೆಗಳು ಹೆಚ್ಚಾಗಲಿವೆ.

ಅವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಶಿಬಿರವನ್ನು ಏರ್ಪಡಿಸಲಾಗಿದ್ದು, ಪೊಲೀಸ್ರಿಗೆ ಹೆಚ್ಚಾಗಿ ಮೂಳೆ, ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ. ಸಿಬ್ಬಂದಿಯ ಆರೋಗ್ಯ ಬಹಳ ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಿಟಿ ಹೆಲ್ತ್ ಸಂಸ್ಥೆಯಿಂದ ಎಲ್ಲ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಅವರಲ್ಲಿರುವ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಮತ್ತಿತರ ಕಾಯಿಲೆಗಳ ಬಗ್ಗೆ ದತ್ತಾಂಶವನ್ನು ಕಲೆ ಹಾಕಲಾಗುವುದು~ ಎಂದರು.

ಐವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ಜನರಗೆ ಮಾತ್ರ ತಪಾಸಣೆ ಬಹಳ ಮುಖ್ಯಪಾತ್ರವನ್ನು ನಿರ್ವಹಿಸುತ್ತದೆ. ಶಿಬಿರವು ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ನಿತ್ಯ 200 ಪೊಲೀಸರು ಹಾಗೂ ಕುಟುಂಬದವರು ಮಧ್ಯಾಹ್ನ 1ರಿಂದ 5 ಗಂಟೆಯ ವರೆಗೆ ತಪಾಸಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.