ಗಂಗಾವತಿ: ಪೊಲೀಸ್ ಪೇದೆಯೊಬ್ಬ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಸಾರ್ವಜನಿಕವಾಗಿ ಸಿಕ್ಕು ಬಿದ್ದರಿಂದ ಜನರೇ ಹಿಗ್ಗಾಮುಗ್ಗಾ ಥಳಿಸಿ ಗ್ರಾಮೀಣ ಪೊಲೀಸ್ಠಾಣೆಗೆ ಒಪ್ಪಿಸಿದ ಘಟನೆ ಬುಧವಾರ ನಗರದ ಲಿಂಗರಾಜ ಕ್ಯಾಂಪಿನಲ್ಲಿ ನಡೆದಿದೆ.

ಗ್ರಾಮೀಣ ಪೊಲೀಸ್ಠಾಣೆಯ ಪೇದೆ ಸ್ವಾಮಿ (ಪೂರ್ಣ ಹೆಸರು ತಿಳಿದು ಬಂದಿಲ್ಲ) ಎಂಬಾತ ಲಿಂಗರಾಜ ಕ್ಯಾಂಪಿಗೆ ಹೋಗಿ ಆಗಾಗ ಅಲ್ಲಿನ ಹಲವು ಯುವತಿ ಮತ್ತು ಮಧ್ಯ ಮಯಸ್ಸಿನ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಕೆಲ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರೂ ಕೂಡ ಕೇವಲ ಪೊಲೀಸ್ ಎಂಬ ಕಾರಣಕ್ಕಾಗಿ ಕೆಲವೊಮ್ಮೆ ಮಹಿಳೆಯರು ಮೌನ ವಹಿಸಿ ಪೇದೆಯ ಉಪಟಳ ಸಹಿಸಿದ್ದರು. ಆದರೆ ಪೇದೆಯ ಉಪಟಳ ಹೆಚ್ಚಾಗಿದ್ದರಿಂದ ಬುಧವಾರ ಸಾರ್ವಜನಿಕರೇ ಧಮದೇಟು ನೀಡಿದ್ದಾರೆ.

ಅದಕ್ಕೂ ಮುನ್ನ ಕೆಲ ಮಹಿಳೆಯರಿಗೆ ತನ್ನ ಮೊಬೈಲ್ ನಂಬರ್ ಕೊಟ್ಟ ಪೇದೆ ಕರೆ ಮಾಡುವಂತೆ ಒತ್ತಾಯಿಸುತ್ತಿದ್ದ. ಮಾತನಾಡಿದರೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಲಿಂಗರಾಜ ಕ್ಯಾಂಪಿನ ಮಹೆಬೂಬ, ಶೇಖರಪ್ಪ, ದೇವೇಂದ್ರ ದೂರಿದರು.

ಬುಧವಾರ ಮಧ್ಯಾಹ್ನದ ಸಮಯ ಇದ್ದಕ್ಕಿಂದಂತೆ ಮಹಿಳೆಯೊಬ್ಬರ ಮನೆ ಹೊಕ್ಕ ಪೇದೆ ಆಕೆಯನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೆ ಪೇದೆ ಜನರ ಕೈಗೆ ಸಿಗದೇ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಕೆಲ ಸಮಯದ ಬಳಿಕ ಕೆಲ ಯುವಕರು ಉಪಾಯ ಹೂಡಿ ಮಹಿಳೆಯೊಬ್ಬರಿಂದ ಪೇದೆಗೆ ದೂರವಾಣಿ ಕರೆ ಮಾಡಿಸಿ ಸಿ.ಬಿ.ಎಸ್ ಪೆಟ್ರೋಲ್ ಬಂಕ್ ಹತ್ತಿರ ಬರಲು ಹೇಳಿದರು. ಕಾಯ್ದು ಕುಳಿತು ಪೇದೆಯನ್ನು ಹಿಡಿದು ಥಳಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಠಾಣೆಗೆ ಒಪ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.