ಪೋಲಿಯೊ: ಕಳೆದ ವರ್ಷ ಅತಿ ಕಡಿಮೆ ಪ್ರಕರಣ
ಕೋಲ್ಕತ್ತ (ಪಿಟಿಐ): ಭಾರತ ಪೋಲಿಯೊ ನಿರ್ಮೂಲನೆಗೆ ಹತ್ತಿರವಾಗಿದ್ದು 2010ರಲ್ಲಿ ಕೇವಲ 42 ಪ್ರಕರಣ ದಾಖಲಾಗಿದೆ. ಅದರ ಹಿಂದಿನ ವರ್ಷ 741 ಪ್ರಕರಣ ದಾಖಲಾಗಿತ್ತು.
ಈ ವರ್ಷ ಫೆಬ್ರುವರಿಯವರೆಗೆ ಪಶ್ವಿಮ ಬಂಗಾಳದ ಹೌರಾ ಜಿಲ್ಲೆಲ್ಲಿ ಒಂದು ಪ್ರಕರಣ ಮಾತ್ರ ವರದಿಯಾಗಿತ್ತು ಎಂದು ರೋಟರಿ ಇಂಟರ್ನ್ಯಾಷನಲ್ನ ರಾಷ್ಟ್ರೀಯ ಪೋಲಿಯೊ ಪ್ಲಸ್ ಸಮಿತಿ ತಿಳಿಸಿದೆ.
ವಿಶೇಷ ಪೋಲಿಯೊ ಸೋಂಕು ತಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಹೌರಾ, ಕೋಲ್ಕತ್ತ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ನಡೆಸಿ ಮಕ್ಕಳಿಗೆ ಬಾಯಿ ಮೂಲಕ ಪೋಲಿಯೊ ಲಸಿಕೆ ಹಾಕಲಾಗಿತ್ತು. ಒಂದು ವಾರದ ಈ ಕಾರ್ಯಕ್ರಮದಲ್ಲಿ ಸುಮಾರು 1,62.500 ಮಂದಿ ಐದು ವರ್ಷದ ಒಳಗಿನ 93 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.