ಪ್ರಿಯ ಓದುಗರೇ

ಆಧುನಿಕ ಅಗತ್ಯಗಳಿಗೆ ತಕ್ಕಂತೆ ಪುನರ್ ವಿನ್ಯಾಸಗೊಳಿಸಿದ ಪ್ರಜಾವಾಣಿ ಅಂತರ್ಜಾಲ ತಾಣ http://beta.prajavani.net ಗಣರಾಜ್ಯ ದಿನದಿಂದ (26 ಜನವರಿ 2011) ನಿಮ್ಮ ಮುಂದಿರುತ್ತದೆ.

63 ವರ್ಷಗಳಷ್ಟು ಅವಧಿಯ ಪತ್ರಿಕೋದ್ಯಮದಲ್ಲಿ ~ಪ್ರಜಾವಾಣಿ~ ಕಾಲಕ್ಕೆ ಅನುಗುಣವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಕನ್ನಡ ಜಗತ್ತು ಕರ್ನಾಟಕವೆಂಬ ಭೌಗೋಳಿಕ ಎಲ್ಲೆಯನ್ನು ಮೀರಿ ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದು ಮಾಹಿತಿ ತಂತ್ರಜ್ಞಾನ. ಕನ್ನಡದಲ್ಲಿ ಅಂತರ್ಜಾಲ ತಾಣಗಳುಸಾಧ್ಯ ಎಂಬುದು ಅರಿವಾದ ಆರಂಭದ ದಿನಗಳಲ್ಲೇ ~ಪ್ರಜಾವಾಣಿ~ಯನ್ನು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸಲು ಹುಟ್ಟಿಕೊಂಡದ್ದು http://prajavani.net. ಅಂತರ್ಜಾಲದಲ್ಲಿ ~ಪ್ರಜಾವಾಣಿ~ಯನ್ನು ಓದುವವರಿಗೂ ಮುದ್ರಿತ ಆವೃತ್ತಿಯ ಅನುಭವವನ್ನೇ ನೀಡುವ ಸಾಧ್ಯತೆಯನ್ನು ತಂತ್ರಜ್ಞಾನ ತೆರೆದಿಟ್ಟಾಗ ಹುಟ್ಟಿಕೊಂಡದ್ದು http://www.prajavaniepaper.com. ಕಂಪ್ಯೂಟರ್ನಲ್ಲಿ ಕನ್ನಡ ಲಿಪಿಯನ್ನು ಇಂಗ್ಲಿಷ್ನಂತೆಯೇ ಸುಲಲಿತವಾಗಿ ಬಳಸಲುಅನುಕೂಲವಾಗುವಂತೆ ಜಾಗತಿಕ ಶಿಷ್ಟತೆಯಾದ ಯೂನಿಕೋಡ್ ಬಳಕೆಗೆ ಬಂದಾಗ ಅದನ್ನು ಬಳಸಿಕೊಂಡ ಕನ್ನಡ ಪತ್ರಿಕೆಗಳ ಜಾಲ ತಾಣಗಳಲ್ಲಿಮೊದಲನೆಯದ್ದೆಂಬ ಹೆಗ್ಗಳಿಕೆ ಕೂಡಾ ಪ್ರಜಾವಾಣಿಯದ್ದೇ.

ಈಗ ಪ್ರಜಾವಾಣಿ ಮತ್ತೊಂದು ಹಂತಕ್ಕೇರುತ್ತಿದೆ. ಅಂತರ್ಜಾಲದ ಹೊಸ ಸಾಧ್ಯತೆಗಳು ಮತ್ತು ವೆಬ್ ವಿನ್ಯಾಸಕ್ಕೆ ತಂತ್ರಜ್ಞಾನ ಒದಗಿಸಿಕೊಟ್ಟಿರುವ ಅವಕಾಶಗಳನ್ನು ಬಳಸಿಕೊಂಡು ಪ್ರಜಾವಾಣಿಯ ಅಂತರ್ಜಾಲ ತಾಣವನ್ನು ಪುನರ್ ವಿನ್ಯಾಸಗೊಳಿಸಲಾಗಿದೆ (http://beta.prajavani.net). ಈ ವಿನ್ಯಾಸ ಇಂಟರ್ನೆಟ್ ಎಕ್ಸ್ಪ್ಲೋರರ್, ಫೈರ್ಫಾಕ್ಸ್, ಕ್ರೋಮ್ನ ಹೊಸ ಆವೃತ್ತಿಗಳಲ್ಲಿ ನೋಡಲು ಅನುವಾಗುವಂತಿದೆ.

ಎಲ್ಲಾ ಸುದ್ದಿಗಳು, ಲೇಖನಗಳು ಮತ್ತು ಪುರವಣಿಗಳನ್ನು ತಲುಪಲು ಸುಲಭವಾಗುವಂತೆ ಹೊಸ ವಿನ್ಯಾಸವಿದೆ. ಛಾಯಾಚಿತ್ರಗಳನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ವಿನ್ಯಾಸ ಅವಕಾಶ ಕಲ್ಪಿಸಿದೆ. ಮುಂದಿನ ಹಂತಗಳಲ್ಲಿ ತಂತ್ರಜ್ಞಾನದ ಇನ್ನೂ ಹಲವು ಸಾಧ್ಯತೆಗಳನ್ನು ಕನ್ನಡ ಜಗತ್ತಿಗೆ ಒದಗಿಸಿಕೊಡುವ ಆಸೆ ನಮ್ಮದು. ಇದು ನಿಮಗೆ ಇಷ್ಟವಾಗುತ್ತದೆ, ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತದೆ ಎಂಬ ನಂಬಿಕೆಯೂ ನಮ್ಮದು.

ಹೊಸ ವಿನ್ಯಾಸ ಕುರಿತ ನಿಮ್ಮ ಅಭಿಪ್ರಾಯ, ಟೀಕೆ, ಸಲಹೆ, ಸುಧಾರಣೆಯ ಸಾಧ್ಯತೆ ಕುರಿತ ಅನಿಸಿಕೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಬರಹದ ಕೆಳಗೇ ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಬಹುದು. ಅಥವಾ ಫೀಡ್ ಬ್ಯಾಕ್ ಫಾರ್ಮ್ ತುಂಬುವ ಮೂಲಕವೂ ನಮ್ಮನ್ನು ತಲುಪಬಹುದು. ಸದ್ಯ ನಿಮ್ಮ ಮುಂದಿರುವುದು ಪ್ರಾಯೋಗಿಕ ಆವೃತ್ತಿಯಾಗಿರುವುದರಿಂದ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಅವುಗಳ ಕುರಿತು ನಮಗೆ ತಿಳಿಸಲು ಮರೆಯದಿರಿ.

ಕೆ.ಎನ್.ಶಾಂತಕುಮಾರ್
ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.