ಶುಕ್ರವಾರ, ಜೂನ್ 18, 2021
27 °C

ಪ್ರತಿಭಾವಂತರು ಆದರ್ಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: ದೇಶದ ಅಭಿವೃದ್ಧಿಯಲ್ಲಿ ಅರ್ಥಶಾಸ್ತ್ರಜ್ಞರ, ವಾಣಿಜ್ಯ ಶಾಸ್ತ್ರಜ್ಞರ ಕೊಡುಗೆ ಅಪಾರವಾದುದು. ಆದ್ದರಿಂದ ಯುವ ಜನತೆ ದೇಶದ ಪ್ರತಿಭಾವಂತ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯ ಬೇಕು ಎಂದು ಬೆಂಗಳೂರಿನ ಇಂಟೆಲ್ ಸಂಸ್ಥೆಯ ಡಿಸೈನಿಂಗ ವಿಭಾಗದ ಮುಖ್ಯಸ್ಥ ಜ್ಯೋತಿಬಾ ಕೋಪರ್ಡೆ ತಿಳಿಸಿದರು.ಬನಹಟ್ಟಿಯ ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ವಾಣಿಜ್ಯ ಮಹಾವಿದ್ಯಾಲಯದವರು ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಕಾಮರ್ಸ್ ಫೆಸ್ಟ್ `ಚಕ್ರವ್ಯೆಹ 2012~ ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬನಹಟ್ಟಿಯಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಂಥ ಇಂಥ ಕಾರ್ಯಕ್ರಮಗಳನ್ನು ಬೇರೆ ಮಹಾವಿದ್ಯಾ ಲಯದವರು ಹಮ್ಮಿಕೊಂಡರೆ ಮತ್ತಷ್ಟು ಅನು ಕೂಲವಾಗುವುದು. ಯುವ ಜನತೆಯು ಕೇಂದ್ರ ಮತ್ತು ರಾಜ್ಯಗಳು ನಡೆಸುವ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ಶಿಕ್ಷಣದತ್ತ ಒಲವು ತೋರಿಸಬೇಕು ಎಂದು ಕೋಪರ್ಡೆ ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪಿ.ವಿ. ಪಟ್ಟಣ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಳಿಗೆ ಇಂದಿನ ಯುಗದಲ್ಲಿ ಬೇರೆ ಬೇರೆ ರೀತಿಯ ಕೋರ್ಸುಗಳನ್ನು ಕಲಿಯುವ ಅವಕಾಶವಿದೆ. ಇಂತಹ ಅವಕಾಶಗಳು ಬೇರೆಯವರಿಗೆ ಇಲ್ಲ, ಆದ್ದರಿಂದ ಒಳ್ಳೆಯ ಜೀವನ ವನ್ನು ನಡೆಸುವುದರ ಸಲುವಾಗಿ ಓದಿನತ್ತ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಅವರು ನುಡಿದರು.ಡಾ.ಜಿ.ಆರ್.ಜುನ್ನಾಯ್ಕರ್,ಉದ್ದಮೆದಾರ ಬಸವರಾಜ ಭದ್ರನ್ನವರ ಸಮಾರಂಭದಲ್ಲಿ ಮಾತನಾಡಿದರು.

ಮೇಘಾ ಶಿರಗಿ ಪ್ರಾರ್ಥಿಸಿದರು. ಪ್ರಾಚಾರ್ಯ ಎನ್. ಎನ್.ಸಾಂಗ್ಲಿ ಸ್ವಾಗತಿಸಿದರು. ಮಾಲಾ ಹೊಸಕೋಟಿ ವಂದಿಸಿದರು.ಅಮೃತಾ ಚಿಂಡಕ ಹಾಗೂ ವಿರೇಶ ಮಾಲಾಪುರ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದಲ್ಲಿ ಜನತಾ ಶಿಕ್ಷಣ ಸಂಘದ ಸದಸ್ಯರಾದ ಬಸವರಾಜ ಜಾಡಗೌಡ, ವೀರಭದ್ರಪ್ಪ ಕೊಳಕಿ, ಬಾಗಲಕೋಟೆ ಜಿಲ್ಲೆಯ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಪ್ರೊ.ಕೆ.ಎಚ್. ಸಿನ್ನೂರ, ಪ್ರಾಚಾರ್ಯ ಬಸವರಾಜ ಕೊಣ್ಣೂರ ಡಾ. ಸಂಗಮೇಶ ಮಟೋಳಿ,ಡಾ.ಎಮ್.ಪಿ.ತಾನಪ್ಪ ಗೋಳ, ಡಾ.ಎಸ್.ಬಿ.ಸುಗಮ್ಮದ. ವಾ.ಬಿ.ಕೊರಡೂರ ಉಪಸ್ಥಿ ತರಿದ್ದರು.  ಬಾಗಲಕೋಟೆ, ವಿಜಾಪುರ, ಬೆಳಗಾವಿಯ ಒಟ್ಟು 25 ಕ್ಕೂ ಹೆಚ್ಚು ಮಹಾ ವಿದ್ಯಾಲ ಯಗಳು ವಾಣಿಜ್ಯ ಮೇಳದಲ್ಲಿ ಭಾಗವಹಿಸಿದ್ದವು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.