ಪ್ರಸವ ನಿರೀಕ್ಷೆಯಲ್ಲಿ ಕೇಟ್

ಶುಕ್ರವಾರ, ಜೂಲೈ 19, 2019
28 °C

ಪ್ರಸವ ನಿರೀಕ್ಷೆಯಲ್ಲಿ ಕೇಟ್

Published:
Updated:

ಲಂಡನ್ (ಪಿಟಿಐ): ಮಗುವಿನ ನಿರೀಕ್ಷೆಯಲ್ಲಿ ಇರುವ ಬ್ರಿಟನ್‌ನ ರಾಜಕುಮಾರ ವಿಲಿಯಮ್ಸ ಅವರ ಪತ್ನಿ ಕೇಟ್ ಮಿಡ್ಲ್‌ಟನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ವಿಲಿಯಮ್ಸ ದಂಪತಿಗೆ ಜನಿಸಲಿರುವ ಮೊದಲ ಮಗು ಬ್ರಿಟನ್ ಅರಸೊತ್ತಿಗೆಯ ಮೂರನೇ ಪೀಳಿಗೆಯಾಗಲಿದೆ.

ಕೇಟ್ ಅವರ ಪ್ರಸವ ಸಮಯ ಸಮೀಪಿಸುತ್ತಿರುವುದರಿಂದ ಅವರನ್ನು ಸೇಂಟ್ ಮೇರಿ ಆಸ್ಪತ್ರೆಯ ಲಿಂಡೊ ವಿಂಗ್ ವಿಭಾಗಕ್ಕೆ ದಾಖಲಿಸಲಾಗಿದ್ದು, ಸಹಜ ಪ್ರಸವದ ನಿರೀಕ್ಷೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಇದೇ ಆಸ್ಪತ್ರೆಯಲ್ಲಿ ರಾಜಕುಮಾರಿ ಡಯಾನಾ ಅವರು ವಿಲಿಯಮ್ ಮತ್ತು ಹ್ಯಾರಿ ಅವರಿಗೆ ಜನ್ಮ ನೀಡಿದ್ದರು.  ಲಿಂಡೊ ವಿಂಗ್ ವಿಭಾಗದಲ್ಲಿ ಕೇಟ್ ಅವರ ಹೆರಿಗೆಗಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿತನಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸಜ್ಜುಗೊಳಿಸಲಾಗಿದೆ.ಬ್ರಿಟನ್ ರಾಣಿ ಎಲಿಜಬೆತ್ ಅವರ ಪ್ರಸೂತಿ ತಜ್ಞೆಯಾಗಿದ್ದ ಮಾರ್ಕ್‌ಸ್ ಸೆಟ್ಚೆಲ್ ಅವರೇ ಕೇಟ್ ಅವರ ಪ್ರಸೂತಿ ವೈದ್ಯ ತಂಡದ ಮುಖ್ಯಸ್ಥರಾಗಿದ್ದಾರೆ. ವಿಲಿಯಂ ಮತ್ತು ಕೇಟ್ ಅವರ ಕೋರಿಕೆಯ ಮೇರೆಗೆ ಅವರು ತಮ್ಮ ನಿವೃತ್ತಿಯ ದಿನವನ್ನು ಮುಂದೂಡಿದ್ದಾರೆ.ಗೃಹ ಕಾರ್ಯದರ್ಶಿ ಉಪಸ್ಥಿತಿ ಇಲ್ಲ:  ಬ್ರಿಟನ್ ರಾಜಮನೆತನದ ಶಿಶುವಿನ ಜನನ ಸಂದರ್ಭದಲ್ಲಿ ಬ್ರಿಟನ್‌ನ ಗೃಹ ಕಾರ್ಯದರ್ಶಿ ಆಸ್ಪತ್ರೆಯಲ್ಲಿ ಉಪಸ್ಥಿತರಿರುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.ರಾಜಮನೆತನದ ಶಿಶುವಿನ ಜನನ ಸಂದರ್ಭದಲ್ಲಿ ಮಗು ಅದಲು ಬದಲಾಗದಂತೆ ನಿಗಾವಹಿಸಲು ಆಸ್ಪತ್ರೆಯಲ್ಲಿ ಬ್ರಿಟನ್‌ನ ಗೃಹ ಕಾರ್ಯದರ್ಶಿ ಉಪಸ್ಥಿತರಿರುವುದು ಮೊದಲು ಸಂಪ್ರದಾಯವಾಗಿತ್ತು. 1936ರಲ್ಲಿ ರಾಣಿ ಎಲಿಜಬೆತ್ ಸಹೋದರ ಸಂಬಂಧಿ ಅಲೆಕ್ಸಾಂಡರ್ ಜನನ ಸಂದರ್ಭದಲ್ಲಿ ಆಗಿನ ಗೃಹ ಕಾರ್ಯದರ್ಶಿ ಹಾಜರಿದ್ದರು. ನಂತರ ಈ ಸಂಪ್ರದಾಯವನ್ನು 1948ಕ್ಕೆ ಕೊನೆಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry