‘ನಿಜಕ್ಕೂ ಅದೊಂದು ಭಯಾನಕ ಅನುಭವ. ಈಗಲೂ ದುಃಸ್ವಪ್ನವಾಗಿ ಕಾಡುತ್ತಿದೆ. ನಾನು ಮರುಜೀವ ಪಡೆದುಕೊಂಡೆ ಅಂದರೂ ಅಚ್ಚರಿಯೇನಲ್ಲ. ಜಗತ್ತಿನಾದ್ಯಂತ ಇರುವ ಎಲ್ಲ ಪತ್ರಕರ್ತರು, ಅದರಲ್ಲೂ ವಿಶೇಷವಾಗಿ ಮಹಿಳಾ ಪತ್ರಕರ್ತರಿಗೆ ಈ ಘಟನೆಯೊಂದು ಪಾಠವಾಗಲಿ...’

- ‘ಸಿಬಿಎಸ್’ ಮುಖ್ಯ ವರದಿಗಾರ್ತಿ ಲಾರಾ ಲೋಗನ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳಿವು.

ಫೆಬ್ರುವರಿಯಲ್ಲಿ ಈಜಿಪ್ಟ್ನ ಸರ್ವಾಧಿಕಾರಿ ಅಧ್ಯಕ್ಷ ಹೋಸ್ನಿ ಮುಬಾರಕ್, ಅಧಿಕಾರ ಗದ್ದುಗೆಯಿಂದ ಕೆಳಗಿಳಿದ ಕ್ಷಣಗಳನ್ನು ವರದಿ ಮಾಡಲೆಂದು ಲಾರಾ ಕೈರೋಗೆ ತೆರಳಿದ್ದರು. ಆಗ ಉದ್ರಿಕ್ತ ಗುಂಪೊಂದು ಇವರನ್ನು ಅಮಾನುಷವಾಗಿ ಥಳಿಸಿದ್ದಲ್ಲದೆ, ಇವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿತ್ತು. ಇತ್ತೀಚೆಗಿನ ಈಜಿಪ್ಟ್ ಕ್ರಾಂತಿಯ ಸಂದರ್ಭದಲ್ಲಿ ಲಾರಾ ಸೇರಿದಂತೆ ಕನಿಷ್ಠ 52 ಪತ್ರಕರ್ತರು ಹಲ್ಲೆಗೊಳಗಾಗಿದ್ದರು ಮತ್ತು 76 ಮಂದಿ ಬಂಧನಕ್ಕೊಳಗಾಗಿದ್ದರು. ಅಲ್ಲದೆ ವರದಿಗಾರನೊಬ್ಬ ಹತ್ಯೆಯಾಗಿರುವುದಾಗಿ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಇಂಥ ಘಟನೆಗಳು ನಡೆದಾಗಲೆಲ್ಲ ಪತ್ರಿಕಾ ಸ್ವಾತಂತ್ರ್ಯದ ಹಾಗೂ ಪತ್ರಕರ್ತರ ಸುರಕ್ಷತೆಯ ಪ್ರಶ್ನೆಗಳು ಮತ್ತೆ ಮತ್ತೆ ಚರ್ಚೆಗೆ ಕಾರಣವಾಗುತ್ತವೆ.

ಈಗ ಮತ್ತೆ ಲಾರಾ ವಿಷಯಕ್ಕೆ ಬರೋಣ. ಹಿಂದೆ ಬ್ರಿಟನ್ನ ಜಿಎಂ ಟಿವಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದ ಲಾರಾ ಲೋಗನ್ ಆಗಲೇ, ‘ವಾರ್ ಕರೆಸ್ಪಾಂಡೆಂಟ್’ ಎಂದು ಗುರುತಿಸಿಕೊಂಡಿದ್ದರು. 2001ರಲ್ಲಿನ ಇರಾಕ್ ಯುದ್ಧ ಹಾಗೂ ಆ ಬಳಿಕ ನಡೆದ ಹಿಂಸಾಚಾರಗಳನ್ನು ದಿಟ್ಟತನದಿಂದ ವರದಿ ಮಾಡಿ ಖ್ಯಾತಿ ಪಡೆದರು. 2002 ರಿಂದ ಈಚೆಗೆ ಸಿಬಿಎಸ್ ಚಾನೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೈರೋ ಘಟನೆಯಿಂದ ಲಾರಾ ವಿಚಲಿತರಾಗಿಲ್ಲ ಎಂಬುದಕ್ಕೆ ಅವರು ಈಗ ಮತ್ತೆ ಕೆಲಸಕ್ಕೆ ಮರಳಿರುವುದೇ ಸಾಕ್ಷಿ. ತಮ್ಮಂತೆಯೇ ದೌರ್ಜನ್ಯಕ್ಕೊಳಗಾದ ಪತ್ರಕರ್ತೆಯರಿಗೆ ಧೈರ್ಯ ಹೇಳುವ ಈಕೆ, ‘ಇಂಥ ಘಟನೆಗಳಿಂದ ಭೀತಿಗೊಂಡರೆ ಅದು ನಮ್ಮ ವೃತ್ತಿ ಬದುಕಿಗೆ ಪೆಟ್ಟು ನೀಡುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

ಹಾಗೆ ನೋಡಿದರೆ ಪತ್ರಕರ್ತರು ಸಂಘರ್ಷದ ಪ್ರದೇಶಗಳಲ್ಲಿ ಮಾತ್ರವೇ ಅಪಾಯಕಾರಿಯಾದಂಥ ಸನ್ನಿವೇಶವನ್ನು ಎದುರಿಸುತ್ತಿಲ್ಲ. ಸಂಘಟಿತ ಅಪರಾಧ, ಮಾದಕ ವಸ್ತು ಕಳ್ಳಸಾಗಣೆ, ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣಗಳನ್ನು ವರದಿ ಮಾಡುವವರೂ ಜೀವ ಬೆದರಿಕೆ ಎದುರಿಸಬೇಕಾಗುತ್ತದೆ.

‘2010 ರಲ್ಲಿ ಜಗತ್ತಿನಾದ್ಯಂತ 66 ಪತ್ರಕರ್ತರು ಹಾಗೂ ಇತರ ಮಾಧ್ಯಮ ಪ್ರತಿನಿಧಿಗಳು ಹತ್ಯೆಯಾಗಿದ್ದಾರೆ. ಈ ಅವಧಿಯಲ್ಲಿ ಪಾಕಿಸ್ತಾನ ಹಾಗೂ ಮೆಕ್ಸಿಕೊ, ಪತ್ರಕರ್ತರ ಪಾಲಿಗೆ ಅಪಾಯಕಾರಿ ದೇಶಗಳಾಗಿ ಪರಿಣಮಿಸಿದ್ದವು’ ಎಂದು ವಿಶ್ವ ಸುದ್ದಿ ಪತ್ರಿಕೆಗಳ ಹಾಗೂ ಪ್ರಕಾಶಕರ ಸಮೂಹ (ವಾನ್-ಇಫ್ರಾ) ಹೇಳಿದೆ.

ಜಗತ್ತಿನಾದ್ಯಂತ 2009 ರಲ್ಲಿ 99, 2008 ರಲ್ಲಿ 70, 2007 ರಲ್ಲಿ 95, 2006 ರಲ್ಲಿ 110 ಹಾಗೂ 2005 ರಲ್ಲಿ 58 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂದೂ ಅದು ತನ್ನ ವರದಿಯಲ್ಲಿ ವಿವರಿಸಿದೆ. ಬಹುತೇಕ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗದಿರುವುದು ಮಾತ್ರ ವಿಪರ್ಯಾಸ!

ತೀರ ಇತ್ತೀಚೆಗೆ ಅಂದರೆ ಜನವರಿ 23 ರಂದು ‘ನಯಿ ದುನಿಯಾ’ ಹಿಂದಿ ಪತ್ರಿಕೆಯ ವರದಿಗಾರ ಉಮೇಶ್ ರಜಪೂತ್ ಅವರನ್ನು, ಛತ್ತೀಸ್ಗಡ ರಾಜ್ಯದ ರಾಯ್ಪುರ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಘಟನೆ ನಡೆಯುವುದಕ್ಕೂ ಮುನ್ನ ಉಮೇಶ್ಗೆ ಆರೋಗ್ಯ ಕಾರ್ಯಕರ್ತನೊಬ್ಬನಿಂದ ಬೆದರಿಕೆ ಕರೆ ಬಂದಿತ್ತಂತೆ.

ಶಸ್ತ್ರಚಿಕಿತ್ಸೆ ಬಳಿಕ ರೋಗಿಯೊಬ್ಬ ಕಣ್ಣಿನ ಸೋಂಕಿಗೆ ತುತ್ತಾದ ಬಗ್ಗೆ ಉಮೇಶ್ ವರದಿ ಬರೆದಿದ್ದರು. ಆದರೆ ಕೊಲೆಗೆ ನಿಖರವಾದ ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ‘ಪತ್ರಕರ್ತರ ಮೇಲೆ ನಡೆಯುವ ಇಂಥ ದೌರ್ಜನ್ಯಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ’ ಎಂದು ಯುನೆಸ್ಕೊ ಮಹಾನಿದೇರ್ಶಕರಾದ ಇರಿನಾ ಬೊಕೊವಾ ಈ ಘಟನೆಯನ್ನು ಖಂಡಿಸಿದ್ದಾರೆ.

ಇಂಥ ಅಪಾಯಗಳಿಂದ ಪತ್ರಕರ್ತರನ್ನು ರಕ್ಷಿಸುವುದು ಪೊಲೀಸರ ಹೊಣೆಯೇ? ಅಥವಾ ಸ್ವಯಂ ರಕ್ಷಣೆಯೇ ಇದಕ್ಕೆ ಪರಿಹಾರವೇ? ಎಂಬ ಪ್ರಶ್ನೆಗಳು ಏಳುತ್ತವೆ.

ಸರ್ಕಾರದ ಕ್ರಮಕ್ಕೆ ಪತ್ರಕರ್ತರು ಯಾಕೆ ಎದುರು ನೋಡಬೇಕು. ಅದರ ಬದಲು ಸ್ವಯಂ ರಕ್ಷಣೆಗೆ ಮಿಲಿಟರಿ ಮಾದರಿಯ ತರಬೇತಿ ಪಡೆದರಾಗದೇ ಎಂದು ವಾದ ಮಾಡುವವರೂ ಇದ್ದಾರೆ. ಆದರೆ ಇಂಥ ತರಬೇತಿಗಳು ಪತ್ರಿಕಾ ಮೌಲ್ಯಗಳ ಮಧ್ಯೆ ಮೂಗು ತೂರಿಸಿದಂತೆ ಆಗುವುದಿಲ್ಲವೇ? ‘ಪತ್ರಕರ್ತರನ್ನು ಬಂಧಿಸಿದಾಗ, ಅಪಹರಣ ಮಾಡಿದಾಗ ಅವರ ರಕ್ಷಣೆಗೆ ಯಾರು ಬರುತ್ತಾರೆ? ನಮ್ಮ ದೇಶದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದೆ. ಹಾಗಂತ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಾಮಾಜಿಕ ನೆಟ್ವರ್ಕ್ ಬೇಕು. ಅಂದರೆ ಬೆದರಿಕೆ ಕರೆಗಳನ್ನು ಹೇಗೆ ನಿಭಾಯಿಸಬೇಕು...ಭಯೋತ್ಪಾದನೆ ಹಾಗೂ ಸಂಘರ್ಷ ಪೀಡಿತ ವಲಯಗಳಲ್ಲಿ ಯಾವ ರೀತಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು...ಇತ್ಯಾದಿ ಅಂಶಗಳನ್ನು ವಿನಿಮಯ ಮಾಡಿಕೊಳ್ಳುವಂಥ ವ್ಯವಸ್ಥೆ ಇರಬೇಕು’ ಎನ್ನುತ್ತಾರೆ ಇಂಡೋನೇಷ್ಯಾದ ಪತ್ರಕರ್ತರೊಬ್ಬರು. ಇದು ಅಲ್ಲಿನ ಪತ್ರಕರ್ತರ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಬಿಂಬಿಸುತ್ತದೆ.

ಪತ್ರಿಕಾ ಸ್ವಾತಂತ್ರ್ಯ..
ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗ. ಇದನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವದಾದ್ಯಂತ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಸಂಪರ್ಕ ಕ್ರಾಂತಿಯ ಕಾಲಘಟ್ಟದಲ್ಲಿದ್ದರೂ ಎಷ್ಟೋ ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವು ಆಳುವವರ ಹಿಡಿತಕ್ಕೆ ಸಿಲುಕಿದೆ. ಕೆಲವೊಂದು ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ವರದಿಗಳಲ್ಲಿ ‘ಸುದ್ದಿ ಮೂಲ’ ಬಹಿರಂಗಪಡಿಸುವಂತೆ ಸರ್ಕಾರಗಳು ಒತ್ತಡ ತಂದ ನಿದರ್ಶನಗಳು ಅದೆಷ್ಟೋ ಇವೆ. ಚೀನಾ, ಇರಾನ್, ವೆನಿಜುವೆಲದಂಥ ದೇಶಗಳು ಸಂಪರ್ಕ ತಂತ್ರಜ್ಞಾನಗಳ ಸಂಪೂರ್ಣ ಬಳಕೆಗೆ ಅಡ್ಡಿಪಡಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಹೊಸಬಗೆಯ ಅಸ್ತ್ರಗಳನ್ನು ಹುಡುಕಿಕೊಂಡಿವೆ.

ಚೀನಾ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ವರದಿ ಮಾಡಿದ್ದಕ್ಕೆ ವಾಲ್ಸ್ಟ್ರೀಟ್ ಜರ್ನಲ್ ದಕ್ಷಿಣ ಏಷ್ಯಾ ಪ್ರತಿನಿಧಿ ಪೀಟರ್ ವೊನಾಕಾಟ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೆ ಅವರ ಕಚೇರಿಯ ಮೇಲೆ ದಾಳಿಯೂ ನಡೆದಿತ್ತು. ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಇರಾಕ್ನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ವೊನಾಕಾಟ್ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ.

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶವಿದೆ ಎನ್ನಬಹುದು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಭ್ರಷ್ಟಾಚಾರ, ಅನ್ಯಾಯಗಳನ್ನು ತಡೆಯುವಲ್ಲಿ, ಸರ್ಕಾರ ಹಾಗೂ ಅದರ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಆಸಕ್ತಿ ಮತ್ತು ಅರಿವು ಮೂಡಿಸುವಲ್ಲಿ ಮಾಧ್ಯಮಗಳು ಸಾಕಷ್ಟು ಶ್ರಮಿಸಿವೆ. ಹಾಗೆಯೇ ಕೆಲವೊಮ್ಮೆ ಪತ್ರಿಕಾ ಸ್ವಾತಂತ್ರ್ಯದ ದುರ್ಬಳಕೆ ಕೂಡ ಆಗುತ್ತಿದೆ. ಅದರಲ್ಲೂ 24 ಗಂಟೆಗಳ ಕಾಲ ಸುದ್ದಿ ನೀಡುವ ಖಾಸಗಿ ವಾಹಿನಿಗಳು ರೋಚಕತೆ ಹಾಗೂ ಅತಿರಂಜಕತೆಯ ಹಿಂದೆ ಬಿದ್ದು ‘ವಸ್ತುನಿಷ್ಠ ವರದಿ’ ಸಿದ್ಧಾಂತವನ್ನೇ ಬುಡಮೇಲು ಮಾಡುತ್ತಿವೆ.

ಈಗ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಚಾನೆಲ್ಗಳ ಸಂಖ್ಯೆ ಹೆಚ್ಚಿದ್ದು, ಟಿಆರ್ಪಿ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗ ಸುದ್ದಿಯ ಸತ್ಯಾಸತ್ಯತೆಗೆ ಬೆಲೆಯಾದರೂ ಎಲ್ಲಿರುತ್ತದೆ?

ಆರುಷಿ ಕೊಲೆ ಪ್ರಕರಣವಿರಲಿ ಅಥವಾ ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣವಿರಲಿ..ಇಂಥ ಪ್ರಕರಣಗಳ ವರದಿಯಲ್ಲಿ ಸುದ್ದಿವಾಹಿನಿಗಳು ತಳೆದ ಧೋರಣೆ ತೀವ್ರ ಚರ್ಚೆಗೆ ಆಸ್ಪದ ನೀಡಿದ್ದವು. ಆರುಷಿ ಕುಟುಂಬದವರಂತೂ ಒಂದು ಹಂತದಲ್ಲಿ ಮಾಧ್ಯಮದವರಿಗೆ ರೋಸಿ ಹೋಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವಂತಾಯಿತು. ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಮಾಧ್ಯಮಗಳು ಬೇಜವಾಬ್ದಾರಿಯುತವಾಗಿ ಸುದ್ದಿ ಪ್ರಸಾರ ಮಾಡದಿರುವಂತೆ ಕೋರಿ ಆರುಷಿ ತಂದೆ ಡಾ.ರಾಜೇಶ್ ತಲ್ವಾರ್ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.

ನಿತ್ಯಾನಂದ ಸ್ವಾಮಿ ಹಾಗೂ ಹಾಲಪ್ಪ ಪ್ರಕರಣಗಳಲ್ಲಿಯೂ ಪ್ರಾದೇಶಿಕ ವಾಹಿನಿಗಳು ಕೆಲವೊಂದು ದೃಶ್ಯಗಳನ್ನು ದಿನಗಟ್ಟಲೇ ಪುನರಾವರ್ತಿಸುವ ಮೂಲಕ ಮುಜುಗರವನ್ನುಂಟುಮಾಡಿದ್ದವು.

ಸುದ್ದಿ ವಾಹಿನಿಗಳು ‘ಕುಟುಕು ಕಾರ್ಯಾಚರಣೆ’ ಮೂಲಕ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳನ್ನು ಬಯಲಿಗೆಳೆಯುವಂಥ ಪ್ರಯತ್ನಗಳನ್ನು ಮಾಡಿವೆ ನಿಜ. ತನಿಖಾ ಪತ್ರಿಕೋದ್ಯಮದ ಭಾಗವಾಗಿ ನಡೆಯುವ ಇಂಥ ಕಾರ್ಯಾಚರಣೆಗಳು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂಬುದೂ ಚರ್ಚೆಯಲ್ಲಿದೆ. ಈ ಚರ್ಚೆಯಿಂದಾಗಿ ಸುಪ್ರೀಂ ಕೋರ್ಟ್ ಕೂಡ ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಆಗಿದೆ. ಕುಟುಕು ಕಾರ್ಯಾಚರಣೆಗಳಿಗೆ ಸೂಕ್ತ ಕಾನೂನು ತರಬೇಕೆಂಬುದು ಸಿಬಿಐ ವಾದ.

ಆಧುನಿಕತೆ ಹಾಗೂ ತಂತ್ರಜ್ಞಾನದ ಕೊಡುಗೆಯಾಗಿ ಇಂದು ಮಾಧ್ಯಮ ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಿದೆ. ಸಿಟಿಜನ್ ಜರ್ನಲಿಸಂನಲ್ಲಿ ಸೆಲ್ಫೋನ್ಗಳು ಹಾಗೂ ಇಂಟರ್ನೆಟ್ ಪ್ರಭಾವವನ್ನು ದಟ್ಟವಾಗಿ ಕಾಣುವಂತಾಗಿದೆ. ಇತ್ತೀಚೆಗಿನ ಲಿಬಿಯಾ ಕ್ರಾಂತಿ, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟದಲ್ಲಿ ಎಸ್ಎಂಎಸ್, ಟ್ವಿಟರ್ ಹಾಗೂ ಫೇಸ್ಬುಕ್ ವಹಿಸಿದ ಪಾತ್ರ ಮಹತ್ವದ್ದೇ ಆಗಿದೆ.

ಹಾಗಂತ ‘ನ್ಯೂ ಮೀಡಿಯಾ’ ಕುರಿತ ನಮ್ಮೆಲ್ಲ ಗ್ರಹಿಕೆಗಳು ಎಲ್ಲ ಸಂದರ್ಭಗಳಲ್ಲಿಯೂ ಸರಿಯಾಗಿರಬೇಕೆಂದೇನೂ ಇಲ್ಲ. ನೀರಾ ರಾಡಿಯಾ ಟೇಪ್ ಪ್ರಕರಣವೇ ಇದಕ್ಕೆ ಸಾಕ್ಷಿ. ದೊಡ್ಡ ದೊಡ್ಡ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು ಹಾಗೂ ಮಧ್ಯವರ್ತಿಗಳ ನಡುವಣ ಅಪವಿತ್ರ ಮೈತ್ರಿ ಯನ್ನು ಈ ಹಗರಣವು ಬಹಿರಂಗಪಡಿಸಿತು. ಇನ್ನು ಪಾಕಿಸ್ತಾನದ ವಿಷಯಕ್ಕೆ ಬಂದರೆ, ಅಲ್ಲಿನ ಪ್ರಭಾವಿ ಪತ್ರಿಕೆಯೊಂದು ಅಲ್-ಖೈದಾ ವಿರುದ್ಧದ ಸಮರವನ್ನು ವಿರೋಧಿಸಿತು.

ತಂತ್ರಜ್ಞಾನ ಕ್ರಾಂತಿ, ದಿಢೀರ್ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಿಕ್ಕ ಜಯ...ಇವೇ ಮುಂತಾದ ಕಾರಣಗಳಿಂದ ‘ನ್ಯೂ ಮೀಡಿಯಾ’ದ ಈ ಎಲ್ಲ ವಿರೋಧಾಭಾಸಗಳನ್ನು ನೋಡುವಂತಾಗಿದೆ. ಅದೇನೇ ಇರಲಿ, ಆಯಾ ಕಾಲಘಟ್ಟದ ಅಗತ್ಯಗಳಿಗೆ ತಕ್ಕಂತೆ ಎಲ್ಲವೂ ಬದಲಾಗುತ್ತ ಹೋಗುತ್ತವೆ. ದೇಶದ ಅಭಿವೃದ್ಧಿಗೆ ಪೂರಕವಾಗಿ, ಲಕ್ಷಾಂತರ ಬಡಜನರ, ಶೋಷಿತರ ದನಿಯಾಗಿ ಕೆಲಸ ಮಾಡುವ ‘ಪ್ರಜ್ಞೆ’ ಪತ್ರಿಕಾ ಸ್ವಾತಂತ್ರ್ಯದ ಆದ್ಯತೆಯಾಗಲಿ. ‘ಮೌನವು ಪ್ರಜಾಪ್ರಭುತ್ವವನ್ನು ನಿಷ್ಕ್ರಿಯಗೊಳಿಸುತ್ತದೆ; ಆದರೆ ಸ್ವತಂತ್ರ ಮಾಧ್ಯಮವು ಅದನ್ನು ಎಚ್ಚರಿಸುವ ಕೆಲಸ ಮಾಡುತ್ತದೆ’- ಇದು ಈ ವರ್ಷದ ಪತ್ರಿಕಾ ಸ್ವಾತಂತ್ರ್ಯ ದಿನದ ಘೋಷವಾಕ್ಯ. ಇದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ..!
(ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.