ಫುಟ್‌ಬಾಲ್: ಎಡಿಇ ತಂಡಕ್ಕೆ ಗೆಲುವು

ಗುರುವಾರ , ಜೂಲೈ 18, 2019
24 °C

ಫುಟ್‌ಬಾಲ್: ಎಡಿಇ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಎಡಿಇ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.



ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಡಿಇ 3-1 ಗೋಲುಗಳಿಂದ ಸ್ಟೂಡೆಂಟ್ಸ್ ಯೂನಿಯನ್ ತಂಡವನ್ನು ಮಣಿಸಿತು.



ಶ್ರೀಧರನ್ ಪಂದ್ಯದ 10ನೇ ನಿಮಿಷದಲ್ಲಿ ಎಡಿಇಗೆ ಮೊದಲ ಗೋಲು ತಂದಿತ್ತರೆ, ಮುರುಗನ್ 30ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಮೊದಲ ಅವಧಿ ಕೊನೆಗೊಳ್ಳಲು ಕೆಲವೇ ಸೆಕೆಂಡ್‌ಗಳಿರುವಾಗ ಜಯವಂದನ್ ಗೋಲು ಗಳಿಸಿ ಸ್ಟೂಡೆಂಟ್ಸ್ ತಂಡದ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದರು.



 86ನೇ ನಿಮಿಷದಲ್ಲಿ ಮಣಿವಣ್ಣನ್ ತಂಡದ ಮೂರನೇ ಗೋಲು ಗಳಿಸಿ ಗೆಲುವನ್ನು ಖಚಿತಪಡಿಸಿಕೊಂಡರು. ಞ

ಮಾರ್ಸ್‌ಗೆ ಜಯ: `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಬೆಂಗಳೂರು ಮಾರ್ಸ್‌ 2-1 ಗೋಲುಗಳಿಂದ ಡಿವೈಎಸ್‌ಎಸ್ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry