ಬೆಂಗಳೂರು: `ಗಯಟೆ ಸಂಸ್ಥೆ, ಮ್ಯಾಕ್ಸ್ಮುಲ್ಲರ್ ಭವನ ಮತ್ತು ಇಂಡಿಯಾ ಫೌಂಡೇಶನ್ ಆಫ್ ದಿ ಆರ್ಟ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ `ಕಲಾ ಶಿಕ್ಷಣ~ ಸಮ್ಮೇಳನವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಫೆಬ್ರುವರಿ 3 ಮತ್ತು 4 ರಂದು ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಮೋಲ್ ಇರಾನಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ `ಕಲಿ-ಕಲಿಸು~ ಹೆಸರಿನ ಕಲೆಗಳ ಬೋಧನಾ ತರಬೇತಿ ಯೋಜನೆಯನ್ನು 2009 ರಿಂದ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ~ ಎಂದರು.

`ಕಲೆಗಳ ಶಿಕ್ಷಣ, ವೈವಿಧ್ಯತೆ ಮತ್ತು ಸಾಮಾಜಿಕ ನ್ಯಾಯದ ನಡುವಿನ ನಂಟಿನ ಕುರಿತು ಸಮ್ಮೇಳನ ಕೇಂದ್ರೀಕೃತವಾಗಿದ್ದು, ಲಿಂಗ, ವೈಕಲ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ವಿಷಯಗಳನ್ನು ಶೈಕ್ಷಣಿಕ ನೆಲಗಟ್ಟಿನಲ್ಲಿ ರೂಪಿಸಲಾಗಿದೆ. ಒಟ್ಟು 500 ಶಿಕ್ಷಕರು ಭಾಗವಹಿಸಲಿದ್ದಾರೆ~ ಎಂದು ಕಾರ್ಯಕ್ರಮ ಸಂಯೋಜಕಿ ಅನುಪಮಾ ಪ್ರಕಾಶ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.