ಮಂಗಳವಾರ, ಮೇ 11, 2021
24 °C
ಫ್ರೆಂಚ್ ಓಪನ್ ಟೆನಿಸ್: ಮಹಿಳಾ ವಿಭಾಗದ ಸಿಂಗಲ್ಸ್ ಫೈನಲ್ ಇಂದು

ಫೈನಲ್‌ಗೆ ರಫೆಲ್ ನಡಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಆಘಾತ ನೀಡಿದ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಸೆಣಸಾಟದಲ್ಲಿ ಮೂರನೇ ಶ್ರೇಯಾಂಕದ ನಡಾಲ್ 6-4, 3-6, 6-1, 6-7, 9-7ರಲ್ಲಿ ಜೊಕೊವಿಚ್ ಎದುರು ಪ್ರಯಾಸದ ಗೆಲುವು ಪಡೆದು ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟರು.ಭಾರಿ ಪೈಪೋಟಿ ಕಂಡು ಬಂದ ಪಂದ್ಯದಲ್ಲಿ ಸ್ಪೇನ್‌ನ ನಡಾಲ್ ಮೊದಲ ಸೆಟ್‌ನಲ್ಲಿ ಗೆಲುವು ಪಡೆದು ಎರಡನೇ ಸೆಟ್‌ನಲ್ಲಿ ಸೋಲು ಕಂಡರು. ಮತ್ತೆ ಮೂರನೇ ಸೆಟ್‌ನಲ್ಲಿ ಸುಲಭ ಜಯ ಗಳಿಸಿದರು. ಹೀಗೆ ಏರಿಳಿತದ ಹಾದಿಯಲ್ಲಿ ಸಾಗಿದ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಕಷ್ಟಪಟ್ಟು ಜಯ ಸಾಧಿಸಿ ನಡಾಲ್ ಈ ಟೂರ್ನಿಯಲ್ಲಿ ಒಂಬತ್ತನೇ  ಸಲ ಪ್ರಶಸ್ತಿ ಜಯಿಸುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಹಾಕಿದರು. ಒಟ್ಟು ಹನ್ನೊಂದು ಸಲ ನಡಾಲ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಈಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಅವಕಾಶ ಲಭಿಸಿದೆ.ಇಂದು ಫೈನಲ್: ಮಹಿಳಾ ವಿಭಾಗದ ಸಿಂಗಲ್ಸ್‌ನ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ರಷ್ಯಾದ ಮರಿಯಾ ಶರ್ಪೋವಾ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.ಸೆಮಿಫೈನಲ್‌ನಲ್ಲಿ ಶರ್ಪೋವಾ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮೇಲೂ, ಸೆರೆನಾ ಇಟಲಿಯ ಸಾರಾ ಇರಾನಿ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಘಟ್ಟ ತಲುಪಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.