ಭಾನುವಾರ, ಜೂನ್ 20, 2021
28 °C

ಬಜೆಟ್ ತುಣುಕು: ಯಾವುದಕ್ಕೆ ಎಷ್ಟೆಷ್ಟು ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶಿಷ್ಟರ ಕೃಷಿ ಸಾಲ ಮನ್ನಾ

ಬೆಂಗಳೂರು:
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮಗಳು ಕೃಷಿ ಚಟುವಟಿಕೆಗಳಿಗೆ 2005-06ನೇ ಸಾಲಿನವರೆಗೆ ನೀಡಿರುವ ರೂ 25,000ವರೆಗಿನ ಸಾಲ ಹಾಗೂ ಅದರ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

 

2005-06ನೇ ಸಾಲಿನವರೆಗೆ ಕೃಷಿಯೇತರ ಅಗತ್ಯಗಳಿಗೆ ಒದಗಿಸಲಾದ ಸಾಲದ ಅಸಲನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಿದರೆ, ಬಡ್ಡಿ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.ಸಮಾಜ ಕಲ್ಯಾಣ ಇಲಾಖೆಗೆ ನೀಡುವ ಅನುದಾನದಲ್ಲಿ ಈ ಬಾರಿ ರೂ 729 ಕೋಟಿ ಹೆಚ್ಚಳ ಮಾಡಲಾಗಿದೆ.  ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಆಯೋಗ ರಚಿಸುವ ಘೋಷಣೆಯೂ ಇದೆ.ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಖರೀದಿಸುವ ಭೂಮಿಯ ಆರ್ಥಿಕ ಮಿತಿಯನ್ನು ರೂ 5 ಲಕ್ಷಕ್ಕೆ ಹೆಚ್ಚಿಸಲಾಗುವುದು. ಈ ಪಂಗಡಗಳ ಮಕ್ಕಳ ಶಿಕ್ಷಣಕ್ಕೆ ಪ್ರತಿ ಕಂದಾಯ ವಿಭಾಗದಲ್ಲಿ ಎರಡರಂತೆ ಒಟ್ಟು ಎಂಟು ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆ ಆರಂಭಿಸಲಾಗುವುದು. ಪ್ರತಿ ಶಾಲೆಗೆ ರೂ 10 ಕೋಟಿ ಅನುದಾನ ನೀಡಲಾಗುವುದು.ನೆಡುತೋಪು ನಿರ್ವಹಣೆಗೆ 180 ಕೋಟಿ

ಬೆಂಗಳೂರು:
ನೆಡುತೋಪುಗಳ ನಿರ್ವಹಣೆಗೆ ಈ ಬಾರಿಯ ಬಜೆಟ್‌ನಲ್ಲಿ ರೂ 180 ಕೋಟಿ ನಿಗದಿ ಮಾಡಲಾಗಿದೆ. ರೈತರು ಮತ್ತು ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ 70 ಸಾವಿರ ಹೆ. ಪ್ರದೇಶದಲ್ಲಿ 1.75 ಕೋಟಿ ಸಸಿಗಳನ್ನು ಬೆಳೆಸಲಾಗುತ್ತದೆ.ಅರಣ್ಯ ಇಲಾಖೆಯ ಪ್ರಮುಖ ಸಿಬ್ಬಂದಿಗೆ ವಸತಿಗೃಹ ಒದಗಿಸಲು ಹಾಗೂ ಈಗಾಗಲೇ ಇರುವ ವಸತಿಗೃಹಗಳ ದುರಸ್ತಿಗೆ ತಲಾ ರೂ 20 ಕೋಟಿ ನೀಡಲಾಗಿದೆ. ಅರಣ್ಯ ಪಡೆಗಳಿಗೆ ಆಧುನಿಕ ಸಾಮಗ್ರಿ ಕೊಳ್ಳಲು, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು, ಇಲಾಖೆಯ ಗಣಕೀಕರಣಕ್ಕೆ ಒಟ್ಟು ರೂ 20 ಕೋಟಿ ಒದಗಿಸಲಾಗಿದೆ.ಆನೆ ಮತ್ತು ಮಾನವ ನಡುವಿನ ಸಂಘರ್ಷ ತಡೆಯಲು ಅಗತ್ಯವಿರುವ ಕಂದಕ, ಸೌರ ವಿದ್ಯುತ್ ಬೇಲಿ ನಿರ್ಮಾಣ ಮತ್ತಿತರ ಕಾರ್ಯಕ್ರಮಗಳಿಗೆ ರೂ 10 ಕೋಟಿ ಮೀಸಲಿಡಲಾಗಿದೆ. ರಾಷ್ಟ್ರೀಯ ಉದ್ಯಾನ, ವನ್ಯಧಾಮ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ಇರುವ ಕುಟುಂಬಗಳ ಪುನರ್ವಸತಿಗೆ ರೂ 10 ಕೋಟಿಶಿಕ್ಷಣ ಕ್ಷೇತ್ರಕ್ಕೆ ಹಣದ ಹೊಳೆ

* 1994-95ರವರೆಗೆ ಪ್ರಾರಂಭವಾಗಿರುವ ಮತ್ತು ಮಾನದಂಡಗಳನ್ನು ಪೂರೈಸಿರುವ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು.* ಜನಪದ ವಿಶ್ವವಿದ್ಯಾಲಯಕ್ಕೆ 7.5 ಕೋಟಿ ರೂಪಾಯಿ ಅನುದಾನ* ಮಂಗಳೂರು ವಿವಿ ಜೈನ ವಿದ್ಯಾಪೀಠ ಸ್ಥಾಪನೆಗೆ 1 ಕೋಟಿ ಆರ್ಥಿಕ ನೆರವು.* ಉನ್ನತ ಶಿಕ್ಷಣದಲ್ಲಿ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಕಚೇರಿ ಮತ್ತು ಕಾಲೇಜುಗಳಲ್ಲಿ ಗುಣಮಟ್ಟ ಕೋಶ ಪ್ರಾರಂಭ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೋಧಕರ ಸಾಮರ್ಥ್ಯ ಹೆಚ್ಚಿಸಲು ಬಲವರ್ಧನಾ ಕೋಶ ರಚನೆ.* ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲೀನವಾದ ಸಮಗ್ರ ನೀತಿ ರೂಪಿಸುವುದು. ಅನಗತ್ಯ ಕೋರ್ಸ್, ಸಂಯೋಜನೆ ರದ್ದು. ಹೊಸ ಕೋರ್ಸ್ ಮತ್ತು ಸಂಯೋಜನೆಗಳ ಪ್ರಾರಂಭ.* ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ನೀಡುವ ಆರ್ಥಿಕ ನೆರವು ಎರಡು ಕೋಟಿ ರೂಪಾಯಿಗೆ ಏರಿಕೆ.ಪ್ರವಾಸೋದ್ಯಮಕ್ಕಾಗಿ ಸಂಚಾರಪಥ

* ಪ್ರವಾಸೋದ್ಯಮ ಅಭಿವೃದ್ಧಿಗಾಗಿ 247 ಕೋಟಿ ರೂಪಾಯಿ.* ಪ್ರವಾಸೋದ್ಯಮ ಮೂಲಸೌಕರ್ಯ ವೃದ್ಧಿಗೆ ರೂ 100 ಕೋಟಿ. ರಸ್ತೆಗಳ ಅಭಿವೃದ್ಧಿಗೆ ರೂ 50 ಕೋಟಿ.* ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಚಾರಪಥ ನಿರ್ಮಾಣ. ಬೆಂಗಳೂರು ಮತ್ತು ಮೈಸೂರಿನಲ್ಲಿ ಆರೋಗ್ಯ ಪಥ ನಿರ್ಮಾಣ.* ಹೆಸರಘಟ್ಟದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಥೀಮ್‌ಪಾರ್ಕ್ ಸ್ಥಾಪನೆ.* ಮಂಗಳೂರಿನ ಪಿಲಿಕುಳ ನಿಸರ್ಗ ಧಾಮದಲ್ಲಿ ರೂ 5 ಕೋಟಿ ವೆಚ್ಚದಲ್ಲಿ ಜಾನಪದ ಲೋಕ.* ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ಮೈಸೂರಿನಲ್ಲಿ ರೂ 7 ಕೋಟಿ ವೆಚ್ಚದಲ್ಲಿ ಲೇಸರ್ ತಂತ್ರಜ್ಞಾನದ ಮೂಲಕ ಕಾರಂಜಿ ಪ್ರದರ್ಶನ.* ಪ್ರವಾಸೋದ್ಯಮ ಕೌಶಲ ಅಭಿವೃದ್ಧಿಗಾಗಿ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಾವಧಿ ಕೋರ್ಸ್ ಪ್ರೋತ್ಸಾಹ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.