ಕೆಲವೇ ವರ್ಷಗಳ ಹಿಂದೆ `ಐಶ್ವರ್ಯಾ~ ಕನ್ನಡ ಚಿತ್ರದಲ್ಲಿ ನಟಿಸಿದ್ದಾಗ ದೀಪಿಕಾ ತಮಗ್ಯಾರೂ ಬಾಯ್ಫ್ರೆಂಡ್ ಇಲ್ಲ ಎಂದು ಹೇಳಿ ಕೆನ್ನೆ ಕೆಂಪಗಾಗಿಸಿಕೊಂಡಿದ್ದರು. ಈಗ ಅವರ ಕೆನ್ನೆ ಸದಾ ಕೆಂಪಾಗಿರುತ್ತದೆ.

ಆದರೆ, ಬಾಯ್ಫ್ರೆಂಡ್ಗಳು ಮಾತ್ರ ಬದಲಾಗುತ್ತಲೇ ಇದ್ದಾರೆ. ಈಗ ಅವರಿಗೆ ಹುಡುಗರ ಸಾಹಚರ್ಯದ ಬಗ್ಗೆ ಮಾತನಾಡುವುದು ಕೂಡ ಕಷ್ಟ ಎನ್ನಿಸುತ್ತಿಲ್ಲ. ಐಪಿಎಲ್ ಕ್ರಿಕೆಟ್ ಗುಂಗಿನಲ್ಲಿದ್ದಾಗ ಗೆಳೆಯ ಸಿದ್ಧಾರ್ಥ ಮಲ್ಯಗೆ ಬಿಂದಾಸ್ ಆಗಿ ಚುಂಬನ ನೀಡಿದ್ದ ದೀಪಿಕಾ ಈಗ ನಿಹಾರ್ ಪಾಂಡ್ಯ ಎಂಬ ಹುಡುಗನ ಜೊತೆಗೆ ಓಡಾಡುತ್ತಿರುವ ಸುದ್ದಿಯಿದೆ.

ಅದು ವದಂತಿಯಷ್ಟೇ ಎಂದು ಹೇಳುವ ದೀಪಿಕಾ ತಮ್ಮ ಬಾಯ್ಫ್ರೆಂಡ್ ಬೇರೆಯೇ ಒಬ್ಬನಿದ್ದಾನೆ ಎಂದು ಹೇಳಿ ಇನ್ನೊಂದು ಕುತೂಹಲ ಮೂಡಿಸಿದ್ದಾರೆ. `ರೇಸ್ 2~ ಚಿತ್ರಕ್ಕೆ ಎಂಟು ದಿನ ಚಿತ್ರೀಕರಣ ನಡೆಸಿದ ನಂತರ ಕೈಕೊಟ್ಟ ಅವರು ರಜನೀಕಾಂತ್ ಅಭಿನಯದ ಸಿನಿಮಾ ಅವಕಾಶ ಪಡೆದು ಕೃತಾರ್ಥರಾಗಿದ್ದಾರೆ.

ರಜನಿ ಜೊತೆ ನಟಿಸುವ ಭಾಗ್ಯಕ್ಕಾಗಿ ಕೈಲಿದ್ದ ಹಿಂದಿ ಚಿತ್ರವನ್ನು ಬಿಟ್ಟು ನಡೆದ ಅವರ ವರ್ತನೆ ಕೆಲವರ ಕೆಂಗಣ್ಣಿಗೂ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.