ಬಂಗಾಲದ ಕಾಳಿ ಮಾತೆ, ರಾಜಸ್ತಾನದ ಅಂಬಾಭವಾನಿಯಂತೆ ಕರ್ನಾಟಕದ ಜಾಗೃತ ಶಕ್ತಿಪೀಠ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ದೇವಿ. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 6 ರಿಂದ ಪ್ರಾರಂಭವಾಗಿ 14ರ ತನಕ ಸಂಭ್ರಮದಿಂದ ನಡೆಯುತ್ತದೆ.

ರಾಜ್ಯದ ಹಲವು ಜಿಲ್ಲೆಗಳಿಂದ ಮಾತ್ರವಲ್ಲ, ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಸಹ ಅಸಂಖ್ಯಾತ ಭಕ್ತರು ಬಂದು ಮಾರಿಕಾಂಬೆಗೆ ಪೂಜೆ ಸಲ್ಲಿಸುತ್ತಾರೆ.

ಸಾತ್ವಿಕ ಸ್ವರೂಪದ ಶಿರಸಿ ಮಾರಿಕಾಂಬಾ ಜಾತ್ರೆ ಮಾದರಿ ಜಾತ್ರೆಯಾಗಿದೆ. ಮಾರಿ ಜಾತ್ರೆಯೆಂದರೆ ಥಟ್ಟನೆ ಮನಃಪಟಲದಲ್ಲಿ ಮೂಡುವದು ಭಯಾನಕ ಪ್ರಾಣಿ ವಧೆ.

ಆದರೆ ಮಾರೆಮ್ಮ, ಕಾಳಮ್ಮ, ದುರ್ಗಿ, ದ್ಯಾಮವ್ವ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುವ ಮಹಾಶಕ್ತಿ ಮಾರಿಕಾಂಬೆಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷಿದ್ಧ. ಎಂಟು ದಿನ ವೈಭವದಿಂದ ನಡೆಯುವ ಜಾತ್ರೆಯ ಹೆಸರಿನಲ್ಲಿ ಕೋಣ, ಕುರಿ, ಕೋಳಿ ಬಲಿ ಕೊಡುವ ಪದ್ಧತಿ ಇಲ್ಲಿ ಇಲ್ಲ. ಬದಲಾಗಿ ಜಾತ್ರೆಗೆ ಮುನ್ನ ಗಲ್ಲಿಗಲ್ಲಿ ತಿರುಗುವ ಕೋಣನಿಗೆ ಪೂಜೆ ನಡೆಯುತ್ತದೆ. ದೇವಿ ರಥಾರೂಢಳಾಗಿ ಭವ್ಯ ಮೆರವಣಿಗೆಯಲ್ಲಿ ಗದ್ದುಗೆಗೆ ಸಾಗುವಾಗ ಭಾವುಕ ಭಕ್ತರು ಹಣ್ಣು-ಹೂವು ಎಸೆದು ಕೃತಾರ್ಥರಾಗುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ 1936ರ ವರೆಗೆ ಮಾರಿಕಾಂಬಾ ಜಾತ್ರೆಯಲ್ಲಿ ಕೋಣನ ಬಲಿ ನಡೆಯುತ್ತಿತ್ತು. ನಂತರ ಕುರಿ, ಕೋಳಿ ಬಲಿಗೆ ಸೀಮಿತಗೊಂಡ ಜಾತ್ರೆ 1942ರ ನಂತರ ಇಂದಿನವರೆಗೂ ಸಂಪೂರ್ಣ ಅಹಿಂಸಾತ್ಮಕವಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ಅವರು ಇಲ್ಲಿ ಒಮ್ಮೆ ಬಂದಾಗ ಪ್ರಾಣಿಬಲಿ ನಡೆಯುವ ಮಾರಿಕಾಂಬೆ ದೇವಸ್ಥಾನಕ್ಕೆ ಭೇಟಿ ಕೊಡುವುದಿಲ್ಲ ಎಂದಿದ್ದರು. ನಂತರ ದೇವಸ್ಥಾನದ ಆಡಳಿತ ವರ್ಗ ಕೋಣನ ಬಲಿ ನಿಲ್ಲಿಸುವುದಾಗಿ ವಾಗ್ದಾನ ಮಾಡಿದ ನಂತರವೇ ಗಾಂಧೀಜಿ ದೇವಿಯ ದರ್ಶನ ಪಡೆದದ್ದು.

ಪೂರ್ವಸಿದ್ಧತೆ
ಜಾತ್ರೆ ಪೂರ್ವ ವಿಧಿ-ವಿಧಾನಗಳಾದ ಹೊರಬೀಡು, ಮರ ಕಡಿಯುವಿಕೆ, ಅಂಕೆ ಹಾಕುವಿಕೆ ಎರಡು ತಿಂಗಳ ಮೊದಲೇ ಆರಂಭಗೊಳ್ಳುತ್ತದೆ. ದೇವಿಯ ಕಲ್ಯಾಣ ಪ್ರತಿಷ್ಠೆ, ರಥೋತ್ಸವ, ಹರಕೆ ಸೇವೆ ಜಾತ್ರೆ ಸಂದರ್ಭದಲ್ಲಿ ನಡೆಯುವ ಸಾಂಪ್ರದಾಯಿಕ ಆಚರಣೆಗಳು. ಮಂಗಳವಾರ ನಡುರಾತ್ರಿ ನಡೆಯುವ ಮಾರಿಕಾಂಬೆಯ ಕಲ್ಯಾಣ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸೇರುತ್ತಾರೆ.

ಶಿರಸಿಯ ನಾಡಿಗರ ಗಲ್ಲಿಯಲ್ಲಿರುವ ನಾಡಿಗರ ಮನೆಯವರು ಮಾರಿಕಾಂಬಾ ದೇವಿಯ ತವರುಮನೆ ಪಾತ್ರ ನಿರ್ವಹಿಸುತ್ತಾರೆ. ಸಾತ್ವಿಕ ಬಲಿ ಅರ್ಪಣೆಯ ನಂತರ ಸರ್ವಾಭರಣಭೂಷಿತೆ ಮಾರಿಕಾಂಬೆಗೆ ಮಾಂಗಲ್ಯಧಾರಣೆ ವಿಧಿಗಳು ಜರುಗುತ್ತವೆ.

ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತಾರೆ. ತವರಿನ ಪ್ರಥಮ ಪೂಜೆ ನಂತರ ಚಕ್ರಸಾಲಿಗಳು, ಬಾಬುದಾರ ವರ್ಗದವರು ಅಹೋರಾತ್ರಿ ಪೂಜೆ ಸಲ್ಲಿಸುತ್ತಾರೆ.

ಕಸಬೆ ಗೌಡರ ಕುಟುಂಬ, ಪೂಜಾರಿ ಕುಟುಂಬ, ಕಟ್ಟೇರ, ಕೇದಾರಿ, ಮಡಿವಾಳ, ಕುರುಬರು, ಉಪ್ಪಾರರು, ಮೇಟಿಗಳು, ಮೇತ್ರಿಗಳು, ಮೇದಾರರು, ಜೋಗತಿಯರು, ಆಸಾದಿ, ಉಗ್ರಾಣಿ ಕುಟುಂಬದವರು ಜಾತ್ರೆ ಆಚರಣೆಯ ವಿವಿಧ ಹಂತದ ಜವಾಬ್ದಾರಿ ನಿರ್ವಹಿಸುವ ಮೂಲಕ ಮಾರಿಕಾಂಬಾ ಜಾತ್ರೆ ಜನಸಾಮಾನ್ಯರ ಸಹಭಾಗಿತ್ವದಲ್ಲಿ ಸಮಾಜದ ಎಲ್ಲ ಸ್ತರದ ಜನರು ಒಂದಾಗುವ ಸಂದರ್ಭಕ್ಕೆ ಸಾಕ್ಷಿಯಾಗುತ್ತದೆ.

ಬುಧವಾರ (ಮಾರ್ಚ್ 7) ನಸುಕು ಹರಿಯುತ್ತಲೇ ರಥೋತ್ಸವದ ವೈಭವ ಕಳೆಕಟ್ಟುತ್ತದೆ. ಭವ್ಯ ರಥದಲ್ಲಿ ಜಾತ್ರಾ ಗದ್ದುಗೆಗೆ ತೆರಳುವ ದೇವಿಗೆ ಗುರುವಾರದಿಂದ ಹಣ್ಣು-ಕಾಯಿ ಸೇವೆ, ಹರಕೆ ಪ್ರಾರಂಭವಾಗಿ ಮಾರ್ಚ್ 14ರ ತನಕ ನಡೆಯುತ್ತದೆ.

ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರು ಕಾಣಿಕೆ, ಹರಕೆ, ತುಲಾಭಾರ, ಬೇವಿನ ಉಡುಗೆ ಸೇವೆ ಸಲ್ಲಿಸುತ್ತಾರೆ. ರಥದಲ್ಲಿ ಆಗಮಿಸುವ ದೇವಿ ಕೊನೆಯ ದಿನ ಅಟ್ಟಲಿನಲ್ಲಿ ಮರಳುವ ಮೂಲಕ ಜಾತ್ರೆ ಆಚರಣೆಗೆ ತೆರೆ ಬೀಳುತ್ತದೆ.

ಬರುವ ಯುಗಾದಿಯಂದು ಮಾರಿಕಾಂಬೆ, ದೇವಾಲಯದ ಗರ್ಭಗುಡಿಯಲ್ಲಿ ಪುನರ್ಪ್ರತಿಷ್ಠಾಪನೆಗೊಂಡು ಸಕಲ ಧರ್ಮೀಯ ಭಕ್ತರ ಆರಾಧ್ಯ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.