ಚಾಮರಾಜನಗರ: ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಸೋಮವಾರ ಆಗಮಿಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ಕುಮಾರ್ ನೇತೃತ್ವದ ತಂಡಕ್ಕೆ ಜಿಲ್ಲೆಯ ಜನರು ಖಾಲಿ ಕೊಡ ಪ್ರದರ್ಶಿಸಿ, ಘೇರಾವ್ ಹಾಕಿ ಸ್ವಾಗತಿಸಿದರು.

ಸಚಿವ ತಂಡದ ಪ್ರವಾಸದ ವೇಳೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಇಲ್ಲದೆ ಗ್ರಾಮೀಣರು ಅನುಭವಿಸುತ್ತಿರುವ ಸಂಕಷ್ಟ ಅನಾವರಣಗೊಂಡಿತು. ಎಳೆಎಳೆಯಾಗಿ ಸಮಸ್ಯೆ ಬಿಚ್ಚಿಟ್ಟ ಜನರ ಆಕ್ರೋಶಭರಿತ ಮಾತುಗಳಿಗೆ ಸಚಿವರು ಮತ್ತು ಅಧಿಕಾರಿಗಳ ಬಳಿಯಲ್ಲಿ ಉತ್ತರ ಇರಲಿಲ್ಲ.

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಪರಿಶೀಲನೆಗೆ ಹೊರಟ ಅಧ್ಯಯನ ತಂಡಕ್ಕೆ ಆರಂಭದಿಂದಲೇ ಜನರ ಕೋಪದ ದರ್ಶನವಾಯಿತು. ಅಧ್ಯಯನ ತಂಡ ಮೊದಲು ಭೇಟಿ ನೀಡಿದ ಕೆಂಪಯ್ಯನದೊಡ್ಡಿ ಗ್ರಾಮಸ್ಥರಿಂದಲೇ ಆಕ್ರೋಶ ಎದುರಾಯಿತು.

ಗ್ರಾಮದ ಮುಂಭಾಗದಲ್ಲಿ ಅಧಿಕಾರಿ ಗಳಿಂದ ಹೂವಿನ ಹಾರ ಹಾಕಿಸಿಕೊಂಡ ಸಚಿವರಿಗೆ ಪಕ್ಕದಲ್ಲಿಯೇ ಅಂತರ್ಜಲ ಕುಸಿತದಿಂದ ನೀರು ಸಂಗ್ರಹ ಇಲ್ಲದೆ ಭಣಗುಡುತ್ತಿದ್ದ ಓವರ್ಹೆಡ್ ಟ್ಯಾಂಕ್ ಬರದ ತೀವ್ರತೆ ಸಾರುತ್ತಿತ್ತು. ಮೂರು ತಿಂಗಳಿನಿಂದಲೂ ನೀರು ಪೂರೈಕೆ ಇಲ್ಲದಿರುವ ಪರಿಣಾಮ ಕೆಂಗೆಟ್ಟಿದ್ದ ಗ್ರಾಮಸ್ಥರು, ಸಚಿವರು ಮತ್ತು ಅಧಿಕಾರಶಾಹಿ ಮೇಲೆ ಕೆಂಗಣ್ಣು ಬೀರಿದರು.

`ನಮ್ಮೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಆದರೆ, ಸಮಸ್ಯೆ ಪರಿಹರಿಸಲು ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ಇಂದಿಗೂ ಜಾನುವಾರುಗಳಿಗೆ ಮೇವು ಪೂರೈಕೆಯಾಗಿಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ನೀಡದೆ ವಂಚಿಸಲಾಗಿದೆ~ ಎಂದು ಗ್ರಾಮಸ್ಥ ದೇವರಾಜು ಸಮಸ್ಯೆ ಬಿಚ್ಚಿಟ್ಟರು.

ಈ ಕುರಿತು ಸ್ಪಷ್ಟನೆ ನೀಡಲು ಮುಂದಾದ ಜಿಲ್ಲಾ ಪಂಚಾಯ್ತಿ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಪಿ. ಶಂಕರರಾಜು ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಂತರ, ಮಲ್ಲಯ್ಯನಪುರದತ್ತ ಅಧ್ಯಯನ ತಂಡದ ಸವಾರಿ ಹೊರಟಿತು. ಅಲ್ಲೂ ಮಹಿಳೆಯರಿಂದ ಅದೇ ಅಳಲು.

ಕ್ಷಣಕಾಲ ಅಹವಾಲು ಆಲಿಸಿದ ತಂಡ ಕೌದಳ್ಳಿಗೆ ತಲುಪಿದಾಗ ಅಧಿಕಾರಿಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. `ಗ್ರಾ.ಪಂ. ವ್ಯಾಪ್ತಿಯ 12 ಗ್ರಾಮಗಳಲ್ಲಿ 20 ಕೊಳವೆಬಾವಿ ಕೊರೆಯಲಾಗಿದೆ. ಎರಡು ತಿಂಗಳಿನಿಂದಲೂ ಎಲ್ಲ ಕೊಳವೆಬಾವಿ ಬತ್ತಿಹೋಗಿವೆ. ಹೊಸದಾಗಿ ಕೊಳವೆಬಾವಿ ಕೊರೆದರೂ ನೀರು ಲಭಿಸಿಲ್ಲ. ಕನಿಷ್ಠ ಟ್ಯಾಂಕರ್ನಿಂದಲೂ ನೀರು ಪೂರೈಸಿಲ್ಲ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಮಾರು 11 ಸಾವಿರ ಜನರು ತೊಂದರೆ ಅನುಭವಿಸುವಂತಾಗಿದೆ.

ಸಚಿವರು ಬರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಕಚೇರಿ ತೆರೆಯಲಾಗಿದೆ. ಮೂರು ತಿಂಗಳಿನಿಂದಲೂ ಕಚೇರಿಯ ಬಾಗಿಲು ತೆರೆದಿಲ್ಲ. ಕಾರ್ಯದರ್ಶಿ, ಪಿಡಿಒ ಸಮಸ್ಯೆ ಕೇಳಿಸಿ ಕೊಳ್ಳುತ್ತಿಲ್ಲ~ ಎಂದು ಗ್ರಾಮಸ್ಥರಾದ ಶಾಂತಿ, ದೊರೆಸ್ವಾಮಿ, ಮುತ್ತುರಾಜ್ ದೂರಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸಚಿವರು, ಲಕ್ಷ್ಮಯ್ಯನದೊಡ್ಡಿ ಗ್ರಾಮಕ್ಕೆ ಆಗಮಿಸಿದಾಗ ಮಹಿಳೆಯರು ಘೇರಾವ್ ಹಾಕಿದರು.

`ಕುಡಿಯುವ ನೀರಿಲ್ಲದೆ ಮೂರು ತಿಂಗಳಿನಿಂದ ಪರಿತಪಿಸುತ್ತಿದ್ದೇವೆ. ಆಗ ಯಾವುದೇ ಅಧಿಕಾರಿ ಭೇಟಿ ನೀಡಲಿಲ್ಲ. ಈಗ ಬಂದಿದ್ದೀರಿ~ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಸಚಿವ ಸುರೇಶ್ಕುಮಾರ್ ತರಾಟೆ ತೆಗೆದುಕೊಂಡರು.

ನೀರು ಕೇಳುವ ಹಕ್ಕಿಲ್ಲ!
ಬಳಿಕ ಸಚಿವರು ಪಳನಿಮೇಡು ಗ್ರಾಮಕ್ಕೆ ಭೇಟಿ ನೀಡಿದಾಗ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟ ಅನಾವರಣಗೊಂಡಿತು.

`ಚುನಾವಣೆಯಲ್ಲಿ ಒಂದು ಓಟಿಗೆ 100 ರೂ ಕೊಟ್ಟಿದ್ದೇವೆ. ನೀವು ಪುಕ್ಕಟೆಯಾಗಿ ಮತ ನೀಡಿಲ್ಲ. ಕುಡಿಯುವ ನೀರು ಕೇಳುವ ಹಕ್ಕು ನಿಮಗಿಲ್ಲ ಎಂದು ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹೇಳುತ್ತಾರೆ. ಈಗ ಕೊಳವೆ ಬಾವಿಯೂ ಬತ್ತಿಹೋಗಿದೆ. ಎರಡು ತಿಂಗಳಿನಿಂದಲೂ ಗ್ರಾಮಕ್ಕೆ ನೀರು ಪೂರೈಕೆಯಾಗಿಲ್ಲ~ ಎಂದು ಗೃಹಿಣಿ ಮುತ್ತುಲಕ್ಷ್ಮೀ ಹೇಳುವಾಗ ಅವರ ಕಣ್ಣಾಲಿ ತುಂಬಿಬಂದಿತು.

ಗೃಹಿಣಿಯ ಈ ಮಾತು ಕೇಳಿದ ಸಚಿವರಾದ ಸುರೇಶ್ಕುಮಾರ್, ಬಿ.ಎನ್. ಬಚ್ಚೇಗೌಡ ಹಾಗೂ ಎಸ್.ಎ. ರವೀಂದ್ರನಾಥ್ ಕ್ಷಣಕಾಲ ತಬ್ಬಿಬ್ಬುಗೊಂಡರು. ಬಳಿಕ ಸಾವರಿ ಸಿಕೊಂಡು ಸಮಸ್ಯೆಯ ಗಂಭೀರತೆ ಅರಿಯಲು ನಿಮ್ಮೂರಿಗೆ ಬಂದಿದ್ದೇವೆ ಎಂದು ಸಮಾಧಾನಪಡಿಸಲು ಮುಂದಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.