ಹಳಿಯಾಳ: ಹಳಿಯಾಳ-ಜೋಯಿಡಾ ತಾಲ್ಲೂಕು ಅನ್ನು ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆ ಹಾಗೂ ಇನ್ನಿತರ ಬೇಡಿಕೆಗೆ ಆಗ್ರಹಿಸಿ ಸೋಮ ವಾರ ಹಳಿಯಾಳದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತ ನಾಡಿ, ಹಳಿಯಾಳ ತಾಲ್ಲೂಕು ಅನ್ನು ಈ ಹಿಂದೆಯೇ ಬರಗಾಲ ಪೀಡಿತ ಪ್ರದೇಶ ವೆಂದು ಸಾರಬೇಕೆಂದು ಮನವಿ ಸಲ್ಲಿಸ ಲಾಗಿತ್ತು. ಆದರೇ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸು ತ್ತದೆ, ಕೂಡಲೇ ಸರ್ಕಾರ ಹಳಿಯಾಳ- ಜೋಯಿಡಾ ತಾಲ್ಲೂಕು ಅನ್ನು ಬರಗಾಲ ಪೀಡಿತ ಪ್ರದೇಶವೆಂದು ಸಾರಿ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಳೆದ ಮೂರು ದಶಕಗಳಿಂದಲೂ ಹೆಚ್ಚು ಕಾಲದಿಂದ ಅತಿಕ್ರಮಣ ಭೂಮಿ ಸಾಗುವಳಿ ಮಾಡಿದ ಸಾಗುವಳಿದಾರರಿಗೆ ಭೂ ಮಂಜೂರಾತಿ, ಪಟ್ಟಾ ನೀಡಿ ಕಂದಾಯ ದಾಖಲೆಯಲ್ಲಿ ಹೆಸರು ದಾಖಲಾಗುವಂತೆ ಕ್ರಮ ಜರುಗಿಸ ಬೇಕು. ಸಾಲ ಮನ್ನಾ ಮಾಡ ಬೇಕು ಎಂದು ಆಗ್ರಹಿಸಿದರು.

ಶಾಸಕ ಸುನೀಲ ಹೆಗಡೆ ತಮ್ಮ ಅಧಿಕಾರಾವಧಿಯಲ್ಲಿ ಕೇವಲ ವೈಯ್ಯಕ್ತಿಕ ಟೀಕೆ ಟಿಪ್ಪಣಿಯಲ್ಲಿಯೇ ಕಾಲ ಕಳೆದಿರು ತ್ತಾರೆ. ಅಭಿವೃದ್ಧಿ ಕೆಲಸ ಕಿಂಚಿತ್ತು ಇಲ್ಲ. ಶಾಸಕರು ಹತಾಶರಾಗಿ ತಮ್ಮ ನಾಲಿಗೆ ಮೇಲಿನ ಹಿಡಿತವನ್ನು ಕಳೆದು ಕೊಂಡಿದ್ದಾರೆ. ಇನ್ನೂ 5-6 ತಿಂಗಳು ಇರುವಂತಹ ಶಾಸಕರ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿ ಜನ ಮನ್ನಣೆ ಪಡೆಯಲಿ ಎಂದುಆಶಿಸಿದರು.

ಬೇಡಿಕೆಗಳನ್ನೊಳಗೊಂಡ ಮನವಿ ಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಭಾಷ ಕೋರ್ವೇಕರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.ವಿಧಾನ ಪರಿಷತ್ ಸದಸ್ಯರಾದ ಎಸ್,ಎಲ್,ಘೋಟ್ನೇಕರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣಾ ನಾಯ್ಕ ಮಾತನಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಮೋದ ಪಾಟೀಲ, ಪಟ್ಟಣ ಪಂಚಾ ಯಿತಿ ಸದಸ್ಯ ಉಮೇಶ ಬೊಳಶೆಟ್ಟಿ ಮತ್ತಿತರರು ಮಾತನಾಡಿದರು.

`ಸಮಸ್ಯೆ ಪರಿಹರಿಸದಿದ್ದರೆ ಹಳಿಯಾಳ ಬಂದ್~
ಹಳಿಯಾಳ: ಕಾಳಿನದಿ ನೀರಾವರಿ ಯೋಜನೆ ಜಾರಿಗೆ ತರಲಿಕ್ಕೆ ವಿಫಲ ವಾದರೆ ಪ್ರತಿ ಗ್ರಾಮ ಮಟ್ಟದಿಂದ ನೀರಾವರಿ ಯೋಜನೆಯ ಜಾರಿಗಾಗಿ ಆಗ್ರಹಿಸಿ ಶಾಶ್ವತವಾಗಿ ಹಳಿಯಾಳ ಬಂದ್ ಮಾಡುತ್ತೇನೆ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು.

ಸೋಮವಾರ ತಾಲ್ಲೂಕು ಜ್ಯಾತ್ಯ ತೀತ ಜನತಾದಳ ಪಕ್ಷದಿಂದ ಕಾಳಿ ನದಿ ನೀರಾವರಿ ಯೋಜನೆ ಜಾರಿ ಹಾಗೂ ಮತ್ತಿತರರ ಬೇಡಿಕೆಗೆ ಆಗ್ರಹಿಸಿ ಹಳಿಯಾಳದಲ್ಲಿ ಬ್ರಹತ್ ಪ್ರತಿಭಟನಾ ಮೆರವಣಿಗೆ ನಂತರ ಸಾರ್ವಜನಿಕರ ನ್ನುದ್ದೇಶಿಸಿ ಮಾತನಾಡಿದ ಅವರು ಕಾಳಿ ನದಿ ನೀರಾವರಿ ಯೋಜನೆಯ ಜಾರಿ ಗಾಗಿ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಪಾದಯಾತ್ರೆ ಮಾಡಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವ ದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿರು ತ್ತೇನೆ.

ಸರ್ಕಾರದ ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ಕೈಗೊಂಡು ಈಗಾಗಲೇ ಅನುಮೋದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಆದರೇ ಈವ ರೆಗೂ ಯೋಜನೆಗೆ ಹಣ ಬಿಡುಗಡೆ ಗೊಳಿಸದೇ ಜನರ ಕಷ್ಟವನ್ನು ಅರಿಯಲು ಎಡವಿದೆ ಎಂದರು.

ತಾಲ್ಲೂಕಿನಾದ್ಯಂತ ಮಳೆಯ ಅಭಾವದಿಂದ ಬರಗಾಲ ಬಿಳುವ ಸ್ಪಷ್ಟ ಸನ್ನಿವೇಶಗಳು ಗೋಚರಿಸು ತ್ತಿದ್ದು. ಹಳಿಯಾಳ ತಾಲ್ಲೂಕನ್ನು ಬರ ಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಘೋಟ್ನೇಕರ, ಜಿಲ್ಲಾ ಉಸ್ತು ವಾರಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹರಿ ಹಾಯ್ದರು.
ನಂತರ ಶಾಸಕ ಹೆಗಡೆ ತಹ ಶೀಲ್ದಾರ ಅವರಿಗೆ ರೈತರ ಪರವಾಗಿ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸವ ರಾಜ ಓಶೀಮಠ, ತಾಲ್ಲೂಕು ಅಧ್ಯಕ್ಷ ಅನಂತ ಶಿಮನಗೌಡಾ, ವ್ಹಿ.ಡಿ. ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾರತಿ ಗೊಂಧಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತ ಹೂಲಿ, ಎಸ್.ಸಿ. ಎಸ್.ಟಿ ಘಟಕ ಅಧ್ಯಕ್ಷ ಗುರು ನಾಥ ದಾನಪ್ಪ ನವರ, ವಿಜಯಲಕ್ಷ್ಮೀ ಚವ್ಹಾಣ, ಅನ್ನಪೂರ್ಣಾ ಶಿಂಧೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.