ನಾವೆಲ್ಲ ಸಾಮಾನ್ಯವಾಗಿ ಬಸವಣ್ಣನವರ ಒಂದೇ ಬಗೆಯ ಚಿತ್ರವನ್ನಷ್ಟೇ ನೋಡಿದ್ದೇವೆ. ಅವರ ವಚನ, ಚಿಂತನೆಗಳನ್ನು ಅಭಿವ್ಯಕ್ತಿಸುವ ಚಿತ್ರಗಳು ಅಪರೂಪ.

ಈ ಕೊರತೆ ನೀಗಿಸುವ ಪ್ರಯತ್ನವನ್ನು ಧಾರವಾಡದ ಬೆಲ್ಲದ ಶಿಕ್ಷಣ ಹಾಗೂ ಕೃಷಿ ಪ್ರತಿಷ್ಠಾನ ನಡೆಸಿತ್ತು. ಅದರ ಆಶ್ರಯದಲ್ಲಿ ಮೂರು ವರ್ಷ ಧಾರವಾಡದಲ್ಲಿ ಬಸವಣ್ಣನ ಚಿಂತನೆ ಹಾಗೂ ವಚನ ಕುರಿತು ರಾಷ್ಟ್ರಮಟ್ಟದ ಶಿಬಿರ ಏರ್ಪಾಟಾಗಿತ್ತು. ಅಲ್ಲಿ ಭಾಗವಹಿಸಿದ್ದ ವಿವಿಧ ಕಲಾವಿದರ ಕುಂಚದಲ್ಲಿ ಬಸವೇಶ್ವರರು ನಾನಾ ರೂಪದಲ್ಲಿ ಮೈದಳೆದಿದ್ದಾರೆ.

ಈ ಕಲಾಕೃತಿಗಳು ಇನ್ನು ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಸವ ಪೀಠದಲ್ಲಿ ಪ್ರದರ್ಶಿತಗೊಳ್ಳಲಿವೆ. ಮೊದಲ ಬಸವ ಕಲಾ ಶಿಬಿರ ನಡೆದದ್ದು 2006ರಲ್ಲಿ.

ಇದರಲ್ಲಿ ಮುಂಬೈಯ ಸುಹಾಸ ಬಾಹುಲ್ಕರ್, ಅನಿಲ ನಾಯ್ಕ, ಕೊಲ್ಲಾಪುರದ ಸಂಜಯ ಸೇಲಾರ, ಬೆಂಗಳೂರಿನ ಎಂ.ಬಿ. ಪಾಟೀಲ, ಕೆ.ಎನ್. ರಾಮಚಂದ್ರ, ಹೈದರಾಬಾದ್ನ ಸಿ.ವಿ. ಅಂಬಾಜಿ, ಸಂಡೂರಿನ ವಿ.ಟಿ. ಕಾಳೆ, ನವದೆಹಲಿಯ ಭೀಮರಾವ್ ಮುರಗೋಡ, ಬಸವನಬಾಗೇವಾಡಿಯ ಕೆ. ಗಂಗಾಧರ, ಗುಲ್ಬರ್ಗದ ಜೆ.ಎಸ್. ಖಂಡೇರಾವ್, ಹುಬ್ಬಳ್ಳಿಯ ಎಂ.ಸಿ. ಚೆಟ್ಟಿ ಭಾಗವಹಿಸಿದ್ದರು.

ಇದರಲ್ಲಿ ಸುಹಾಸ ಬಾಹುಲ್ಕರ್ ಅವರು `ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ~ ವಚನವನ್ನು ಚಿತ್ರಿಸಿದ ಬಗೆ ಅನನ್ಯವಾದುದು. ಅನಿಲ ನಾಯ್ಕ ಅವರು `ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ~ ವಚನವನ್ನು ಚಿತ್ರವಾಗಿಸಿದ್ದಾರೆ. ಹೀಗೆಯೇ ಇತರ ಕಲಾವಿದರು ತಾವು ಕಂಡ ಬಸವಣ್ಣನಿಗೆ ಒಂದೊಂದು ರೂಪ ಕೊಟ್ಟಿದ್ದಾರೆ.

2007ರಲ್ಲಿ ನಡೆದ ಶಿಬಿರದಲ್ಲಿ ಮುಂಬೈನ ಜೋತ್ಸ್ನಾ ಕದಂ, ಬೆಂಗಳೂರಿನ ಚಂದ್ರನಾಥ ಆಚಾರ್ಯ, ವಿಜಯವಾಡದ ಗಿರಿಧರ ಗೌಡ, ತಿರುವನಂತಪುರದ ಅಜಯಕುಮಾರ, ಬರೋಡದ ವಿಜಯ ಬಾಗೋಡಿ, ಚೆನ್ನೈನ ಮನೋಹರ, ಚೆರಿಯನ್, ಗುಲ್ಬರ್ಗದ ವಿ.ಜಿ. ಅಂದಾನಿ, ಧಾರವಾಡದ ಎಂ.ಆರ್. ಬಾಳಿಕಾಯಿ, ತುಮಕೂರಿನ ಕಿಶೋರಕುಮಾರ ಭಾಗವಹಿಸಿದ್ದರು. ಇದರಲ್ಲಿ ವಿ.ಜಿ. ಅಂದಾನಿ ಅವರು `ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ~ ವಚನವನ್ನು ಕಟ್ಟಿಕೊಟ್ಟಿದ್ದಾರೆ.

2008ರಲ್ಲಿ ನಡೆದ ಮೂರನೇ ಶಿಬಿರದಲ್ಲಿ ಬೆಂಗಳೂರಿನ ಯು. ಭಾಸ್ಕರರಾವ್, ಆರ್. ಸೂರಿ, ಎಸ್. ಪ್ರಹ್ಲಾದ, ಉಡುಪಿಯ ಯು. ರಮೇಶರಾವ್, ಗುಲ್ಬರ್ಗದ ಎಸ್.ಎಸ್. ಸಿಂಪಿ, ಧಾರವಾಡದ ಸುರೇಶ ಹಾಲಭಾವಿ, ಹುಬ್ಬಳ್ಳಿಯ ಡಿ. ವಿಶ್ವನಾಥ, ವಿಜಾಪುರದ ಪಿ.ಎಸ್. ಕಡೆಮನಿ, ಪುಣೆಯ ರಾಮಚಂದ್ರ ಕರಾಟಮಲ್, ಬೆಳಗಾವಿಯ ಸುನೀಲ ಮಠದ, ಕೇರಳದ ಇಬಿಎನ್ ಜೋಸೆಫ್, ಬಸವನಬಾಗೇವಾಡಿಯ ಕೆ. ಗಂಗಾಧರ ಭಾಗವಹಿಸಿದ್ದರು.

ಕಲ್ಯಾಣವನ್ನು ಬಸವಣ್ಣ ತೊರೆದಾಗ ನಿರಾಳವಾದ ಎಂಬುದನ್ನು ಭಾಸ್ಕರರಾವ್ ನಿರೂಪಿಸಿದರೆ, ರಾಮಚಂದ್ರ ಕರಾಟಮಲ್ ಅವರು `ಜಗದಗಲ ಮುಗಿಲಗಲ, ಮಿಗೆಯಗಲ ನಿಮ್ಮಗಲ~ ಎಂಬ ವಚನದ ಮೂಲಕ ಬಸವಣ್ಣನ ವ್ಯಕ್ತಿತ್ವವನ್ನು ಹಿಡಿದಿಡಲು ಯತ್ನಿಸಿದ್ದಾರೆ. ಮೂರು ವರ್ಷಗಳ ಶಿಬಿರಕ್ಕೆ ನಿರ್ದೇಶಕರಾಗಿ ದುಡಿದವರು ಖ್ಯಾತ ಚಿತ್ರಕಲಾವಿದ ಧಾರವಾಡದ ಮಧು ದೇಸಾಯಿ.

`ಈ ಶಿಬಿರಗಳಲ್ಲಿ 32 ಕಲಾಕೃತಿಗಳು ರಚನೆಯಾಗಿವೆ. ಇದೂ ಸೇರಿ ಬಸವಣ್ಣನ ಬದುಕಿನ ಚಿತ್ರಣದ ಇನ್ನೂ 40-50 ಕಲಾಕೃತಿಗಳನ್ನು ಬಸವ ಪೀಠಕ್ಕೆ ದೇಣಿಗೆಯಾಗಿ ನೀಡುವ ಯೋಜನೆಯಿದೆ~ ಎನ್ನುತ್ತಾರೆ ಬೆಲ್ಲದ ಶಿಕ್ಷಣ ಹಾಗೂ ಕೃಷಿ ಪ್ರತಿಷ್ಠಾನದ ಟ್ರಸ್ಟಿ ಅರವಿಂದ ಬೆಲ್ಲದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.