ಬುಧವಾರ, ಮಾರ್ಚ್ 3, 2021
19 °C

ಬಸ್‌ನಿಲ್ದಾಣ ಕಂಪೌಂಡ್ ಸುತ್ತ ಕೊಳಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ನಿಲ್ದಾಣ ಕಂಪೌಂಡ್ ಸುತ್ತ ಕೊಳಚೆ

ಹುಮನಾಬಾದ್: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾದರಿ ಖ್ಯಾತಿಗೆ ಪಾತ್ರವಾದ ಹುಮನಾಬಾದ್ ಕೇಂದ್ರ ಬಸ್‌ನಿಲ್ದಾಣ ಕಂಪೌಂಡ್‌ಗೆ ಹೊಂದಿಕೊಂಡ ನಿವಾಸಿಗಳ ಬಚ್ಚಲಿನೀರು ಹರಿದು ಬರುವ ಕೊಚ್ಚೆನೀರು ದುರ್ನಾತ ಸವಿಯುವುದು ಆ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಅನಿವಾರ್ಯವಾಗಿದೆ.ರೂ. 6ಕೋಟಿ ಮೊತ್ತದಲ್ಲಿ ನಿರ್ಮಿಸಲಾದ ಇಲ್ಲಿನ ಕೇಂದ್ರ ಬಸ್‌ನಿಲ್ದಾಣದಲ್ಲಿ ವಿನೂತನ ಮಾದರಿಯ ಆಕರ್ಷಕ ಆಸನ, ಚಿಕ್ಕ ಮತ್ತು ಚೊಕ್ಕದಾದ ಉದ್ಯಾನ, ಬ್ರಹತ್ ಪ್ರಾಂಗಣ ಅಲ್ಲದೇ ಇನ್ನೂ ವಿವಿಧ  ಸೌಕರ್ಯಗಳು ಆ ಮೂಲಕ ಸಂಚರಿಸುವ ಪ್ರಯಾಣಿಕರನ್ನು ಆಕರ್ಷಿಸದೇ ಇರಲಾರವು.ಈ ಎಲ್ಲಾ ಸೌಲಭ್ಯಗಳ ಜೊತೆಗೆ   ನಿಲ್ದಾಣ ಕಂಪೌಂಡ್‌ಗೆ ಹೊಂದಿಕೊಂಡ ಮನೆಗಳಿಂದ ಹರಿದು ಬರುವ ಕೊಚ್ಚೆನೀರು ಅದೇ ಪ್ರಯಾಣಿಕರ ಬೇಸರಕ್ಕೆ ಅಷ್ಟೇ ಕಾರಣ ಆಗಿದೆ ಎಂಬ ಪ್ರಜ್ಞಾವಂತ ಪ್ರಯಾಣಿಕರ ಆರೋಪ ಅಷ್ಟು ಸುಲಭ ತಳ್ಳಿ ಹಾಕುವ ಹಾಗಿಲ್ಲ. ಸುತ್ತಲಿನ ನಿವಾಸಿಗಳಿಗೆ ಘಟಕ ವ್ಯವಸ್ಥಾಪಕರು ಅದೆಷ್ಟೋ ಬಾರಿ ಪುರಸಭೆ ಆಡಳಿತಕ್ಕೆ ಸೂಚನೆ ನೀಡಿದರೂ ಈ ವರೆಗೆ ಪ್ರಯೋಜನ ಆಗಿಲ್ಲ ಎಂದು ಘಟಕ ವ್ಯವಸ್ಥಾಪಕ ಭದ್ರಪ್ಪ ಈ ಕುರಿತು ಗುರುವಾರ ತಮ್ಮನ್ನು ಸಂಪರ್ಕಿಸಿದ   `ಪ್ರಜಾವಾಣಿ~ ಮಾಹಿತಿ ನೀಡಿದರು.ಹಾಗೆಂದು ಆ ಭಾಗದ ಎಲ್ಲ ನಿವಾಸಿಗಳು ಮತ್ತು ಹೊಟೆಲ್‌ಗಳ ಕೊಚ್ಚೆನೀರು ಬಸ್‌ನಿಲ್ದಾಣದಲ್ಲಿನ ಪ್ರಾಂಗಣಕ್ಕೆ ಹರಿದು ಬರುವುದಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿ, ಅನೇಕ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೇ ಕೆಲವೇ ನಿವಾಸಿಗಳು ತಾಳುತ್ತಿರುವ ಧೋರಣೆ ಸಂಸ್ಥೆ ಪಾಲಿಗೆ ತಲೆನೋವಾಗಿ ಪರಿಣವಿಸಿದ್ದಾರೆ.ಹಾಗೆ ಹರಿದು ಬರುವ ಕೊಚ್ಚೆಯಲ್ಲಿ ನೂರಾರು ಹಂದಿಗಳು ಅಲೆದಾಡುತ್ತವೆ. ಹೊಲಸು ಇದೆ ಎಂಬ ಕಾರಣಕ್ಕಾಗಿ ಅನೇಕ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡಿ ಮತ್ತಷ್ಟು ದುರ್ನತ ಹರಡಲು ಕಾರಣರಾಗಿದ್ದಾರೆ. ಈ ಕುರಿತು ಕ್ಷೇತ್ರ ಶಾಸಕ ರಾಜಶೇಖರ ಪಾಟೀಲ ಅವರು ಕೂಡಾ ಅನೇಕ ಬಾರಿ ಬೇಸರ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಕಂಪೌಂಡ್ ಸುತ್ತಲು ವಾಣಿಜ್ಯ ಮಳಿಗೆ ನಿರ್ಮಿಸುವ ಉ್ದ್ದದೇಶ ಈಶಾನ್ಯ ಸಾರಿಗೆ ಸಂಸ್ಥೆ ಹೊಂದಿದೆ.

 ಕಂಪೌಂಡ್‌ಗೆ ಹೊಂದಿಕೊಂಡಂತೆ ಪುರಸಭೆ ಆಡಳಿತ ಚರಂಡಿ ವ್ಯವಸ್ಥೆ ಕಲ್ಪಿಸಿದಲ್ಲಿ ನಿವಾಸಿಗಳ ಬಚ್ಚಲಿನಿಂದ ಹರಿದುಬರುವ ಕೊಚ್ಚೆನೀರು ತಡೆಯುವುದರ ಜೊತೆಗೆ ನಿಲ್ದಾಣ ಹರಡುತ್ತಿರುವ ದುರ್ನಾತ ಶಾಶ್ವತ ತಡೆಯಬಹುದು. ಈ ನಿಟ್ಟಿನಲ್ಲಿ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಶೀಘ್ರ ಮಳಿಗೆ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಶಯ.ಸಾರ್ವಜನಿಕರು ಮತ್ತು ಕಂಪೌಂಡ ಸುತ್ತಲಿನ ನಿವಾಸಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ದಿಟ್ಟಹೆಜ್ಜೆ ಇಟ್ಟಲ್ಲಿ ಮಾದರಿ ಬಸ್‌ನಿಲ್ದಾಣ ನಿರ್ಮಿಸಿದ ಕೀರ್ತಿ ಬಾಕಿ ಉಳಿದುಕೊಂಡ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ಅಭಿನಂದನೆಗೂ ಅರ್ಹರಾಗಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಅಂಬೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.