ಶುಕ್ರವಾರ, ಫೆಬ್ರವರಿ 26, 2021
20 °C

ಬಸ್ ಸೌಲಭ್ಯವೇ ಇಲ್ಲದ ಕಂಚಾರಗಟ್ಟಿ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್ ಸೌಲಭ್ಯವೇ ಇಲ್ಲದ ಕಂಚಾರಗಟ್ಟಿ ಗ್ರಾಮ

ಗುತ್ತಲ: ಗ್ರಾಮಾಭಿವೃದ್ಧಿಯೇ  ದೇಶದ ಪ್ರಗತಿಗೆ ನಾಂದಿ ಎನ್ನುವುದು   ಈ ಹಿಂದಿನಿಂದಲೂ ಬಂದಿರುವ ಮಾತು. ಆದರೆ ಕಂಚಾರಗಟ್ಟಿ ಗ್ರಾಮ ಇನ್ನೂವರೆಗೂ  ಸರ್ಕಾರಿ ಬಸ್ ಸೌಲಭ್ಯವನ್ನು ಕಾಣದೇ, ಖಾಸಗಿ ವಾಹನಗಳನ್ನೇ ಅವಲಂಬಿಸಿದೆ.ಸಮೀಪದ ಕಂಚಾರಗಟ್ಟಿ ಗ್ರಾಮ ತುಂಗಭದ್ರೆಯ ದಂಡೆಯ ಮೇಲಿದೆ. ಮುಳುಗು ಪ್ರದೇಶವಾದ ಈ ಗ್ರಾಮವನ್ನು ಈ ಹಿಂದೆ ಅಂದರೆ ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ಈ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ಅಂದಿನಿಂದ ಈ ಗ್ರಾಮಕ್ಕೆಹೊಸ ಕಂಚಾರಗಟ್ಟಿ ಎಂದು ನಾಮಕರಣ ಮಾಡಲಾಗಿದೆ.

 

ಸುಮಾರು 2500 ಜನಸಂಖ್ಯೆಯನ್ನು ಹೊಂದಿರುವ  ಈ ಗ್ರಾಮ, ಪಂಚಾಯಿತಿಯನ್ನು ಹೊಂದಿದೆ ಯಾದರೂ ಅನೇಕ ಮೂಲ ಸೌಲಭ್ಯಗಳಲ್ಲಿ ಒಂದಾದ  ಸರ್ಕಾರಿ ಬಸ್ ಸಂಚಾರದ ವ್ಯವಸ್ಥೆ ಇನ್ನೂವರೆಗೂ ಈ ಗ್ರಾಮಕ್ಕೆ ಲಭಿಸಿಲ್ಲ.ಈ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳ ಶೌಕ್ಷಣಿಕ ಜೀವನ ಸಂಪೂರ್ಣ ಕುಸಿದಿದೆ. ಪ್ರಾಥಮಿಕ ಶಿಕ್ಷಣದವರೆಗೆ ಮಾತ್ರ ಇಲ್ಲಿ ಶಿಕ್ಷಣ. ಮುಂದೆ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಓದಬೇಕಾದರೆ ಈ ಗ್ರಾಮದ ಮಕ್ಕಳು ಬೇರೆ ಪ್ರದೇಶಕ್ಕೆ ಅಂದರೆ ಗುತ್ತಲ, ಮೈಲಾರ, ವಾಣಿಜ್ಯನಗರ  ರಾಣಿಬೆನ್ನೂರಿಗೇ ಹೊಗಬೇಕು, ಆದರೆ ಹಾಗೆ ಹೋಗಬೇಕೆಂದರೆ ಬಸ್ ಇಲ್ಲ. ಈ ಗ್ರಾಮದ 150 ರಿಂದ 165  ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಗ್ರಾಮದಿಂದ  ಸುಮಾರು 5 ಕೀಮಿ ದೂರದಲ್ಲಿರುವ ಬಳ್ಳಾರಿ ಜಿಲ್ಲೆಯನ್ನು ಸಂಪರ್ಕಿಸುವ ಹೆದ್ದಾರಿ ಕ್ರಾಸ್ ಬಳಿ ಬಂದು ಬಸ್ಸುಗಳಿಗೆ ಪರದಾಡುವಂತ ಸ್ಥಿತಿ ಈವರೆಗೂ ಮುಂದುವರೆದಿರುವುದು ವಿದ್ಯಾರ್ಥಿಗಳ ದುರಾದೃಷ್ಟವೇ ಸರಿ. ಹೀಗಾಗಿ ಪಾಲಕರು ತಮ್ಮ  ಮಕ್ಕಳನ್ನು ದೂರದ ವಸತಿ ಶಾಲೆಗಳಿಗೆ ಕಳಿಸುವುದು ಮಾಮೂಲಾಗಿ ಬಿಟ್ಟಿದೆ.ಸರ್ಕಾರಿ ಬಸ್ ಸಂಚಾರವಿಲ್ಲದ್ದಿಂದಲೇ ಇಲ್ಲಿನ ಮಕ್ಕಳ ಶೈಕ್ಷಣಿಕ ಬದುಕು ಕ್ಷೀಣಿಸಿದೆ ಎನ್ನುತ್ತಾರೆ ಈ ಗ್ರಾಮದ ಹನುಮಂತಪ್ಪ.ವಿದ್ಯಾರ್ಥಿಗಳ ಪರಿಸ್ಥಿತಿ ಒಂದು ಕಡೆಯಾದರೆ ಸಾಮಾನ್ಯ ಜನರ ಜೀವನ ಹೇಗಿರಬೇಡ ಊಹಿಸಲಿಕ್ಕೂ ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಒಂದು ದಿನ ಖಾಸಗಿ ವಾಹನಗಳು ಒಂದು ದಿನ  ಬಾರದೇ ಹೋದರೆ ಅಯೋಮಯ ಪರಿಸ್ಥಿತಿ ನಿರ್ಮಾಣವಾದಂತೆ ಆಗುತ್ತದೆ.ಗರ್ಭಿಣಿಯರು, ವೃದ್ಧರು ನಡೆದುಕೊಂಡೇ ಹೋಗಬೇಕು. ಜನ ಸಾಮಾನ್ಯರು ಸಂತೆಗೆ, ಆಸ್ಪತ್ರೆಗೆ ಹಲವಾರು ಕೆಲಸಗಳಿಗೆ ಸಮೀಪದ ಗುತ್ತಲಕ್ಕೆ, ರಾಣಿಬೆನ್ನೂರಿಗೆ ಹೋಗಬೇಕೆಂದರೇ ಅನಿವಾರ್ಯವೆಂಬಂತೆ ಖಾಸಗಿ ವಾಹನಗಳಿಗೆ ಮೊರೆ ಹೋಗಬೇಕು.ಕಳೆದ 10-12 ವರ್ಷಗಳ ಕೆಳಗೆ ಕೇವಲ ಒಂದು ವಾರಗಳ ಕಾಲ ಮಾತ್ರ ಬಸ್‌ನ್ನು ಕಂಡಿರುವ ಇಲ್ಲಿನ ಜನಕ್ಕೆ ಇವರೆಗೂ ಸರ್ಕಾರಿ  ಬಸ್‌ನಲ್ಲಿ ಓಡಾಡುವ ಭಾಗ್ಯ ಇನ್ನೂವರೆಗೂ  ಸಿಕ್ಕಿಲ್ಲ. ಗ್ರಾಮೀಣ ಪ್ರದೇಶಗಳ ಉತ್ತೇಜನಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಆದರೆ ಅನೇಕ ಮೂಲ ಭೂತ ಸೌಲಭ್ಯಗಳಲ್ಲಿ ಒಂದಾದ ಸರ್ಕಾರಿ ಬಸ್ ಸಂಚಾರವೇ ಇನ್ನೂವರೆಗೂ ಈ ಗ್ರಾಮಕ್ಕೆ ಲಭ್ಯವಿಲ್ಲದ್ದರಿಂಧ ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆ ಅಗಲೀಕರಣ ಯೋಜನೆಯಲ್ಲಿ ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡಿದಾಗಲೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಾಹನಗಳನ್ನು ಓಡಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದಂತಿದೆ. ಅಲ್ಲದೇ ಜನಪ್ರತಿನಿಧಿಗಳು ಈ ಗ್ರಾಮದ ಬಸ್ ಸಂಚಾರಕ್ಕೆ ನಿರ್ಲಕ್ಷ ತೋರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿರುವುದಂತೂ ನಿಜ. ಈ ಮಾರ್ಗದಲ್ಲಿ ಬಸ್ಸು ಓಡಿಸಿದರೆ ಉತ್ತಮ ಕಲೆಕ್ಸನ್ ಆಗುವುದಿಲ್ಲ ಎನ್ನುವುದು ಅಧಿಕಾರಿಗಳ ಮಾತು ಸಾಮಾನ್ಯ. ಆದರೆ ಇದನ್ನು ತಳ್ಳಿ ಹಾಕುವ ಮುಖಾಂತರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ ಈ ಗ್ರಾಮದ ನಾಗರಾಜ ಹಿರಿಯಣ್ಣನವರ, ವೇಳೆಗೆ ಸರಿಯಾಗಿ ಬಸ್ಸುಗಳನ್ನು ಓಡಿಸಿದರೆ ಉತ್ತಮ ಕಲೆಕ್ಸನ್ ಏಕೆ ಸಿಗಲ್ಲ? ಇದಕ್ಕೆಸಾರಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರುತ್ತಾರೆ.ಒಂದು ವಾರದಲ್ಲಿ ಕಂಚಾರಗಟ್ಟಿ ಗ್ರಾಮಕ್ಕೆ ಬಸ್ಸ್ ನ್ನು ಬೀಡಬೇಕು ಇಲ್ಲವಾಲದಲ್ಲಿ ರಾಸ್ತಾ ರೋಖೋ ಚಳುವಳಿಯನ್ನು ಹಮ್ಮಿಕೊಳ್ಳ ಲಾಗುವುದೆಂದು ಗ್ರಾಮದ  ಚಂದ್ರಪ್ಪ ಹೊಂಬರಡಿ, ಪರಸಪ್ಪ ಬಾರ್ಕಿ, ಶಂಕ್ರಪ್ಪ ಇಟಗಿ ಮುತ್ತಪ್ಪ ಹಿರಿಯಣ್ಣನವರ ಮುಂತಾದವರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.